ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಗೆ ಸತತ 2ನೇ ಬಾರಿ ಅತ್ಯುತ್ತಮ ವಲಯ ಪ್ರಶಸ್ತಿ

ಉಡುಪಿ: ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಉಡುಪಿ ವಲಯವು ಅತ್ಯುತ್ತಮ ವಲಯವಾಗಿ ಹೊರ ಹೊಮ್ಮಿದೆ. ವಲಯಾಧ್ಯಕ್ಷ ಜನಾರ್ದನ್ ಕೊಡವೂರು ನೇತೃತ್ವದಲ್ಲಿ ಉಡುಪಿ ವಲಯದ ಸದಸ್ಯರ ಸಹಕಾರದಿಂದ ಸತತ ಎರಡು ವರ್ಷಗಳಿಂದ ಅತ್ಯುತ್ತಮ ವಲಯ ಪ್ರಥಮ ಹಾಗು ಕ್ರೀಡೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಜಯಗಳಿಸಿದೆ. ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರವೀಣ್ ಕೊರೆಯ, ಕೋಶಾಧ್ಯಕ್ಷ ದಿವಾಕರ ಹಿರಿಯಡ್ಕ, ಉಪಾಧ್ಯಕ್ಷ ಸುರಭಿ ಸುಧೀರ್ ಶೆಟ್ಟಿ, ಸುಂದರ ಪೂಜಾರಿ ಕೊಳಲಗಿರಿ, […]

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಸಭೆ: ಶೇ.15 ಡಿವಿಡೆಂಡ್ ಘೋಷಣೆ

ಉಡುಪಿ: ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯು ಸೆ.17 ರವಿವಾರದಂದು ಸಂಘದ ಅಧ್ಯಕ್ಷ ಸಂಜೀವ ಕಾಂಚನ್‌ ಇವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡು ಟೌನ್ ಹಾಲ್‌ನಲ್ಲಿ ಜರಗಿತು. ಸಹಕಾರಿ ತತ್ವಗಳೊಂದಿಗೆ ಸದಾ ಸಮರ್ಪಣಾಭಾವದ ಸಂಗಮವಾಗಿ ಸಮೃದ್ಧಿಯ ಹಸಿರ ಹೆಮ್ಮರವಾಗಿ ಬೆಳೆದು ಜಿಲ್ಲೆಯಲ್ಲಿ ವಿಭಿನ್ನ ಛಾಪು ಮೂಡಿಸಿ ರಾಜ್ಯದಲ್ಲಿಯೇ ಸಹಕಾರಿ ರಂಗದ ಮಾದರಿ ಸಹಕಾರ ಸಂಘವಾಗಿ ಸಂಘವು ಗುರುತಿಸಲ್ಪಟ್ಟಿದೆ. 1918 ರಲ್ಲಿ ಆರಂಭಗೊಂಡು ಸಹಕಾರಿ ಸದಾಶಯಗಳ ಹಾದಿಯಲ್ಲಿ ಶತಮಾನೋತ್ತರ ಕ್ರಮಿಸುವಿಕೆಯೊಂದಿಗಿರುವ […]

ಬಿಸಿಸಿಐ ಅಂಡರ್ 19-ವಿನೂ ಮಾಂಕಡ್ ಟ್ರೋಫಿ ಪಂದ್ಯಕ್ಕೆ ಉಡುಪಿಯ ನಿಶ್ಚಿತ್ ಪೈ ಆಯ್ಕೆ

ಉಡುಪಿ: ಹೈದರಬಾದ್ ನಲ್ಲಿ ಅ. 12 ರಿಂದ ಅ. 20 ವರೆಗೆ ನಡೆಯಲಿರುವ ಬಿಸಿಸಿಐ ಅಂಡರ್ 19- ವಿನೂ ಮಾಂಕಡ್ ಟ್ರೋಫಿ 2023-24 ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ತಂಡಕ್ಕೆ ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆಗೊಂಡಿದ್ದಾರೆ. ಇವರು ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಯಾಗಿದ್ದು ಉಡುಪಿ ಕೆ. ನಾಗರಾಜ್ ಪೈ ಹಾಗೂ ಉಜ್ವಲ್ ಕಿರಣ್ ದಂಪತಿಯ ಪುತ್ರ.

ವಾಲಿಬಾಲ್ ಪಂದ್ಯಾಟ: ಶ್ರೀ ವೆಂ.ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕಲ್ಪಿತಾ ಮತ್ತು ಓಂಕಾರ್ ಪ್ರತಿನಿಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಬ್ರಹ್ಮಾವರ: ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬ್ರಹ್ಮಾವರ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಬ್ರಹ್ಮಾವರ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಶ್ರೀ ನಾರಾಯಣ ಗುರು ಸಭಾ ಭವನ ಬ್ರಹ್ಮಾವರದಲ್ಲಿ ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ವರದಿ ಮಂಡಿಸಿ, ಸಂಘವು 27.05 ಕೋಟಿ ಠೇವಣಿಯನ್ನು ಸ್ವೀಕರಿಸಿ, 26.77 ಕೋಟಿ ಸಾಲ ವಿತರಿಸಿ, 46.66 ಲಕ್ಷ ಲಾಭವನ್ನು ಗಳಿಸಿದೆ. ಸಂಘವು ಪ್ರಸ್ತುತ 2022-23 ನೇ ಸಾಲಿನಲ್ಲಿ 33 ಕೋಟಿ ದುಡಿಯುವ ಬಂಡವಾಳ […]