ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಗೆಲುವಿನ ಆರಂಭ: ಬಿಡಬ್ಲ್ಯುಎಫ್
ಸ್ಪೋಕೇನ್ (ಯುಎಸ್‌ಎ): ಅಮೆರಿಕದ ಸ್ಪೋಕೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಮಿಶ್ರ ಟೀಮ್ ಈವೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳು ಕುಕ್ ಐಲ್ಯಾಂಡ್ಸ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.ಮಿಶ್ರ ಡಬಲ್ಸ್ ಜೋಡಿ ಸಾಥ್ವಿಕ್ ರೆಡ್ಡಿ ಕಾನಪುರಂ ಮತ್ತು ವೈಷ್ಣವಿ ಖಡ್ಕೇಕರ್ ಭಾರತಕ್ಕೆ ಗೆಲುವಿನ ಆರಂಭವನ್ನು ಮಾಡಿದರು. ಕುಕ್ ದ್ವೀಪದ ಕೈಯಿನ್ ಮಟಾಯೊ ಮತ್ತು ತೆರೆಪಿ ಅಕಾವಿ ಅವರನ್ನು 21-6, 21-8ರ ನೇರ ಸೆಟ್ ಭಾರಿ ಅಂತರಿಂದ ಸೋಲಿಸಿದರು. ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ವ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ […]
230 ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಹುದ್ದೆಗೆ ಅರ್ಜಿ
ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳ ನೇಮಕಾತಿ ನಡೆಯಲಿದೆ. ಒಟ್ಟು 230 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಈ ಮಾಸಾಂತ್ಯವಾಗಿದೆ. ಈ ಹುದ್ದೆಗಳ ನೇಮಕಾತಿ ಮತ್ತು ಇನ್ನಿತರ ಪ್ರಮುಖ ಮಾಹಿತಿ ಇಲ್ಲಿದೆ.ಒಟ್ಟು 230 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ […]
ನಟನೆ ಜೊತೆ ನಿರ್ಮಾಣ- ಬಿಡುಗಡೆ ದಿನಾಂಕವೂ ಅನೌನ್ಸ್ : ಆಲಿಯಾ ಭಟ್ ಮುಂದಿನ ಸಿನಿಮಾ ‘ಜಿಗ್ರಾ’
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಬಹುಬೇಡಿಕೆ ನಟಿ ಆಲಿಯಾ ಭಟ್ ನಟನೆಯ ಮುಂದಿನ ಸಿನಿಮಾ ಮೇಲೆ ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು. ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಜಿಗ್ರಾ ಸಿನಿಮಾದಲ್ಲಿ ನಟಿಸೋ ಜೊತೆ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಅದರಂತೆ ಹೊಸ ಸಿನಿಮಾ ಅನೌನ್ಸ್ ಆಗಿದೆ.2023ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಲಿರುವ ನಟಿ ಆಲಿಯಾ ಭಟ್ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಸಿನಿಮಾ […]
ವೈಲ್ಡ್ ಪೋಲಿಯೋ ವೈರಸ್ ಪಾಕಿಸ್ತಾನದಲ್ಲಿ ಪತ್ತೆ; ದೃಢಪಡಿಸಿದ ಸಚಿವಾಲಯ
ಇಸ್ತಾಂಬುಲ್: ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ಪೋಲಿಯೋ ವೈರಸ್ ನಿರ್ಮೂಲನೆಗೆ ವಿಶ್ವಸಂಸ್ಥೆ ಪಣತೊಟ್ಟಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಡುವೆ ಪಾಕಿಸ್ತಾನದ ಕೊಳಚೆಯಲ್ಲಿ ವೈಲ್ಡ್ ಪೋಲಿಯೋ ವೈರಸ್ ಟೈಪ್ 1 ಮಾದರಿ ಪತ್ತೆಯಾಗಿದೆ. ಪಾಕಿಸ್ತಾನದ ಎರಡು ವಿಭಿನ್ನ ಭಾಗದಲ್ಲಿ ಕೊಳಚೆ ನೀರಿನಲ್ಲಿ ಇದರ ಸುಳಿವು ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಅವರಲ್ಲಿ ನರ ಸಮಸ್ಯೆ ಮತ್ತು ಶಾಶ್ವತ ಅಂಗವೈಕಲ್ಯತೆಗೆ ದೂಡುತ್ತದೆ. ಅಕ್ಟೋಬರ್ನಿಂದ ಲಸಿಕೆ ಅಭಿಯಾನ: ಪಾಕಿಸ್ತಾನದಲ್ಲಿ ಐದು ವರ್ಷದೊಳಗಿನ […]
ದುಡಿಯುವ ಕೈಗಳ ಅನ್ನ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾಡಳಿತ.
ಕಾರ್ಕಳ: ಅಧಿಕಾರದ ಆಸೆಯಿಂದ ಪಂಚ ಗ್ಯಾರಂಟಿಗಳ ಆಮಿಷವೊಡ್ಡಿ ಜನರನ್ನು ದಾರಿತಪ್ಪಿಸಿ ಅಧಿಕಾರ ಹಿಡಿದ ಕಾಂಗ್ರೆಸ್ ಒಂದೆರಡು ಸಾವಿರ ಹಣ ನೀಡಿ ಲಕ್ಷಾಂತರ ದುಡಿಯುವ ಕೈಗಳ ಆನ್ನವನ್ನು ಕಿತ್ತುಕೊಂಡಿದೆ. ಜಿಲ್ಲೆಯಲ್ಲಿ ದುಡಿಯುವ ವರ್ಗಕ್ಕೆ ಆದ ಅನ್ಯಾಯಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ. ಈ ತಕ್ಷಣವೇ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ತುರ್ತು ಸಭೆ ಕರೆದು ಸಮಸ್ಯೆ ನಿವಾರಿಸಬೇಕು ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ವ್ಯವಸ್ಥೆಯನ್ನು ಕರಾವಳಿ ಜಿಲ್ಲೆಗೆ […]