ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ವಾರ್ಷಿಕ ಸಾಮಾನ್ಯ ಸಭೆ: ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯತ್ವ ನೀಡುವಂತೆ ಒತ್ತಾಯ
ಉಡುಪಿ: ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ 850 ಸಹಕಾರಿ ಸಂಘಗಳಿದ್ದು, ಅವುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಬೇಕು. ಅದೇ ರೀತಿ ರಾಜ್ಯದ 5 ಕೋಟಿ ಮತದಾರರ ಪೈಕಿ ಶೇ.60ರಷ್ಟು ಮಂದಿ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯತ್ವ ಸ್ಥಾನವನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಒತ್ತಾಯಿಸಿದರು. ಉಡುಪಿ ಅಜ್ಜರಕಾಡು ಪುರಭವನದ ಮಿನಿ ಹಾಲ್‌ನಲ್ಲಿ ಶುಕ್ರವಾರ ಜರಗಿದ ಉಡುಪಿ ಜಿಲ್ಲಾ ಸಹಕಾರ […]
ಎಂಸಿಸಿ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆ: ರೂ.10.38 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್ ಘೋಷಣೆ
ಮಂಗಳೂರು: ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆಯು ಸೆ 24 ರಂದು ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ(ಲೊಯೊಲಾ ಹಾಲ್) ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಅಧ್ಯಕ್ಷ ಅನಿಲ್ ಲೋಬೋ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ ದೀಪ ಬೆಳಗಿಸಿ ಸಭೆಯನ್ನು ಆರಂಭಿಸಿದರು. ಸದಸ್ಯರಾದ ಅಲನ್ ಸಿ. ಪಿರೇರಾ (ಮಾಜಿ ಅಧ್ಯಕ್ಷರು ಬ್ಯಾಂಕ್ ಅಫ್ ಮಹಾರಾಷ್ಟ್ರ) ಮತ್ತು ಸೆಲೆಸ್ಟಿನ್ ಲೀನಾ ಮೊಂತೇರೊ (ಮಾಜಿ ಹಿರಿಯ ಪ್ರಬಂಧಕರು, ಕರ್ನಾಟಕ ಬ್ಯಾಂಕ್) […]
ಮಣಿಪಾಲ: ಸುಶೀಲ ಪ್ರಭು ನಿಧನ
ಮಣಿಪಾಲ: ಗಣೇಶಭಾಗ್ ನಿವಾಸಿ ಶಿಂಗಾನ್ಕೋಡಿ ದತ್ತಾತ್ರೇಯ ಪ್ರಭು ರವರ ಪತ್ನಿ ಸುಶೀಲ ಪ್ರಭು ಅವರು ಸೆ. 17 ರಂದು ನಿಧನ ಹೊಂದಿದ್ದಾರೆ. ಮೃತರು ಪತಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ದಟ್ಟ ‘ಕಾಂತಾರ’ದಲ್ಲಿ ಕಾಣೆಯಾದ ಯುವಕ ಎಂಟು ದಿನಗಳ ಬಳಿಕ ಪತ್ತೆ!! ಇದು ಪಂಜುರ್ಲಿ ದೈವದ ಕಾರ್ನಿಕ ಎಂದ ಜನರು…
ಕುಂದಾಪುರ: ಮನೆಯಿಂದ ನಾಲ್ಕು ಕಿ.ಮೀ ದೂರದ ದಟ್ಟ ಕಾಡಿಗೆ ತೆರಳಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ 8 ದಿನಗಳ ಬಳಿಕ ಸುರಕ್ಷಿತವಾಗಿ ಮರಳಿ ಅಚ್ಚರಿ ಹುಟ್ಟಿಸಿರುವ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕೆ ಅವರ ಪುತ್ರ 28 ವರ್ಷದ ವಿವೇಕಾನಂದ ಎನ್ನುವವರು ಇದೀಗ ಮನೆಮಾತಾಗಿದ್ದಾರೆ. ಸೆ. 16 ರಂದು ನಾಪತ್ತೆಯಾದ ಯುವಕ ಸೆ. 23 ರಂದು ಪತ್ತೆಯಾಗಿದ್ದಾರೆ. ಎಂಟು ದಿನಗಳ ಹಿಂದೆ ತನ್ನ ಎರಡು ನಾಯಿಗಳ ಜೊತೆ ಕಾನನ ಪ್ರವೇಶಿಸಿದ್ದ ವಿವೇಕಾನಂದ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಎರಡು […]
ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ದೇವದಾಸಿ ಕುರಿತ ಸಾಕ್ಷ್ಯ ಚಿತ್ರ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಪ್ರದರ್ಶನ
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ ಪತ್ರಿಕೋದ್ಯಮ ವಿಭಾಗ ಹಾಗೂ ಪೂರ್ವಿ ಪ್ರೊಡಕ್ಷನ್ಸ್, ಉಪ್ಪಿನಂಗಡಿ ಇವರ ಜಂಟಿ ಸಹಯೋಗದಲ್ಲಿ ಶ್ರೀಮತಿ ಪೂರ್ಣಿಮಾ ರವಿ ನಿರ್ದೇಶಿಸಿರುವ ದೇವದಾಸಿಯರ ಕುರಿತು ಸಾಕ್ಷ್ಯ ಚಿತ್ರ ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಅ. 1 ರಂದು 9.30 ರಿಂದ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನಡೆಯಲಿದ್ದು ಉದ್ಘಾಟನೆಯನ್ನು ಪ್ರೊ. ವರದೇಶ್ ಹಿರೇಗಂಗೆ ನಿರ್ದೇಶಕರು, ಗಾಂಧಿಯನ್ ಇನ್ಸ್ಟಿಟ್ಯೂಟ್ ಫಾರ್ ಫಿಲಾಸಫಿಕಲ್ ಆರ್ಟ್ಸ್ & ಸೈನ್ಸಸ್, ಮಾಹೆ ಇವರು ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಬಿ.ಎ. […]