2023 ಏಷ್ಯನ್ ಗೇಮ್ಸ್: ಶ್ರೀಲಂಕಾ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡವು 2023 ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದು ಫೈನಲ್ನಲ್ಲಿ ಶ್ರೀಲಂಕಾವನ್ನು 19 ರನ್ಗಳಿಂದ ಸೋಲಿಸಿತು. ಇದು 2023 ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವಾಗಿದೆ. ಹರ್ಮನ್ಪ್ರೀತ್ ಕೌರ್ ಭಾರತಕ್ಕೆ ಟಾಸ್ ಗೆದ್ದು ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಸುಗಂದಿಕಾ ಕುಮಾರಿ ಅವರಿಗೆ ವಿಕೆಟ್ ನೀಡಿದರು. ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ 73 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಮಾಡಿದರು. […]
ಮಂಗಳೂರು: ಕೊಂಕಣಿ ನಾಟಕ ಸಭಾದ 80ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಮಂಗಳೂರು: ಕೊಂಕಣಿ ನಾಟಕ ಸಭಾ (ರಿ) ಮಂಗಳೂರು, ಇದರ 80ನೇ ವಾರ್ಷಿಕೋತ್ಸವವು ಡಾನ್ ಬಾಸ್ಕೊ ಹಾಲ್ ನಲ್ಲಿ ಸೆ. 24 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊ. ನಾ. ಸಭಾದ ಅಧ್ಯಕ್ಷ ವಂ| ಡೊ| ರೊಕಿ ಡಿಕುನ್ಹಾ ಕಾಪುಚಿನ್ ವಹಿಸಿದ್ದರು. ಮಂಗಳೂರು ಕಥೊಲಿಕ್ ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಪರಮ ಪೂಜ್ಯ ಎಲೋಶಿಯಸ್ ಪಾವ್ಲ್ ಡಿಸೊಜಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಕೊ. ನಾ. ಸಭಾದ ನಿಕಟಪೂರ್ವ ಅಧ್ಯಕ್ಷ ಹಾಗೂ ಮೈಸೂರಿನ ಕೃಪಾಲಯದ ರೆಕ್ಟರ್ ವಂ| ಡೊ| ಪಾವ್ಲ್ ಮೆಲ್ವಿನ್ […]
ಕಲ್ಯಾಣಪುರ ಹಾಗೂ ತೆಂಕಪೇಟೆ ದೇವಳಗಳಲ್ಲಿ ಗಣೇಶ ವಿಸರ್ಜನೆ
ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಶನಿವಾರ ಸಂಪನ್ನಗೊಂಡಿತು. ಗಣೇಶ ಮೂರ್ತಿಯ ಶೋಭಾ ಯಾತ್ರೆ ಪ್ರಮುಖ ಬೀದಿಯಲ್ಲಿ ಪೇಟೆ ಉತ್ಸವ ನಡೆಸಿ ಸ್ವರ್ಣ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ ಇವರ ಮಾರ್ಗದರ್ಶನದಲ್ಲಿ, ದೇವಳದ ಪ್ರಧಾನ ಅರ್ಚಕ ಜಯದೇವ ಭಟ್, ಗಣಪತಿ ಭಟ್, ಧಾರ್ಮಿಕ ಪೂಜಾ ವಿದಾನಗಳನ್ನು ನೆರವೇರಿಸಿದರು. ಜಿ ಎಸ್ ಬಿ ಸಭಾ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು. ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಪೂಜಿಸಿದ […]
ಬೆಂಗಳೂರು-ಮಂಗಳೂರು-ಮುರ್ಡೇಶ್ವರ ರೈಲಿನ ವೇಳಾಪಟ್ಟಿ ಪರಿಷ್ಕರಣೆ
ಬೆಂಗಳೂರು-ಮಂಗಳೂರು-ಮುರ್ಡೇಶ್ವರ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಇದೀಗ ರೈಲು ಮೊದಲಿಗಿಂತ 40 ನಿಮಿಷ ಮುಂಚಿತವಾಗಿ ಮುರ್ಡೇಶ್ವರಕ್ಕೆ ತಲುಪಲಿದೆ. ಬೆಂಗಳೂರು-ಮೈಸೂರು-ಮಂಗಳೂರು ರೈಲು 16585 ನ್ನು ಸೆ. 16 ರಿಂದ ಮುರ್ಡೇಶ್ವರವರೆಗೆ ವಿಸ್ತರಿಸಲಾಗಿತ್ತು. ವಾರದ ಆರು ದಿನ ಸಂಚಾರ ಮಾಡುವ ರೈಲು ಮಂಗಳೂರಿನಿಂದ ಮುರ್ಡೇಶ್ವರ ತಲುಪಲು ಅನಗತ್ಯ ವಿಳಂಬವಾಗುತ್ತಿದೆ. ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ನಿಧಾನವಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಈಬಗ್ಗೆ ಮಾಧ್ಯಮ ವರದಿಗಳೂ ಬಂದಿದ್ದವು. ಇದೀಗ ನೈರುತ್ಯ ರೈಲ್ವೆಯು ವೇಳಾ ಪಟ್ಟಿಯನ್ನು ಶನಿವಾರ ಪರಿಷ್ಕರಿಸಿದ್ದು, ಮಂಗಳೂರು ಸೆಂಟ್ರಲ್ ವರೆಗೆ […]
ಮದ್ಯದ ಬೆಲೆಯಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ!! 83% ತೆರಿಗೆ ವಿಧಿಸುತ್ತಿರುವ ರಾಜ್ಯ; ಗೋವಾದಲ್ಲಿ ಮದ್ಯ ಅಗ್ಗ
ಬೆಂಗಳೂರು: ಮದ್ಯದ ಬೆಲೆಯಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೇಲಿನ ತೆರಿಗೆ ಕೂಡ ಹೆಚ್ಚಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ತಿಳಿಸಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಮದ್ಯದ ನೈಜ ಬೆಲೆಗೆ 83% ತೆರಿಗೆಯನ್ನು ವಿಧಿಸುತ್ತದೆ. ವರದಿಯ ಪ್ರಕಾರ, ಗೋವಾದಲ್ಲಿ 100 ರೂ ಬೆಲೆಯ ಸ್ಪಿರಿಟ್ (ನಾನ್-ಬಿಯರ್) ಕರ್ನಾಟಕದಲ್ಲಿ ಸುಮಾರು 513 ರೂ ವೆಚ್ಚವಾಗುತ್ತದೆ. ತೆಲಂಗಾಣ ಎರಡನೇ ಸ್ಥಾನದಲ್ಲಿದೆ. ಹೆಚ್ಚಿನ ತೆರಿಗೆಗಳು ಮತ್ತು ಇತ್ತೀಚಿನ […]