₹60,000 ಕೋಟಿ ‘ಗೃಹ ಸಾಲ ಸಬ್ಸಿಡಿ ಯೋಜನೆ’ಗೆ ಸರ್ಕಾರ ಗ್ರೀನ್ ಸಿಗ್ನಲ್: ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್
ನವದೆಹಲಿ : ಕಳೆದ ತಿಂಗಳು, ಚುನಾವಣೆಗೆ ಮುಂಚಿತವಾಗಿ ಹಣದುಬ್ಬರವನ್ನ ನಿಯಂತ್ರಿಸಲು ಸರ್ಕಾರವು ಕುಟುಂಬಗಳಿಗೆ ಅಡುಗೆ ಅನಿಲ ಬೆಲೆಯನ್ನ ಸುಮಾರು 18 ಪ್ರತಿಶತದಷ್ಟು ಕಡಿತಗೊಳಿಸಿತು.ಈ ವರ್ಷದ ಕೊನೆಯಲ್ಲಿ ಪ್ರಮುಖ ರಾಜ್ಯ ಚುನಾವಣೆಗಳು ಮತ್ತು 2024ರ ಮಧ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬ್ಯಾಂಕುಗಳು ಒಂದೆರಡು ತಿಂಗಳಲ್ಲಿ ಈ ಯೋಜನೆಯನ್ನ ಹೊರತರುವ ಸಾಧ್ಯತೆಯಿದೆ. ಮುಂದಿನ ಐದು ವರ್ಷಗಳಲ್ಲಿ ಸಣ್ಣ ನಗರ ವಸತಿಗಳಿಗೆ ಸಬ್ಸಿಡಿ ಸಾಲಗಳನ್ನ ಒದಗಿಸಲು 60,000 ಕೋಟಿ (7.2 ಬಿಲಿಯನ್ ಡಾಲರ್) ಖರ್ಚು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ […]
ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯಕ್ಕೆ ಅಂಪೈರ್‌ಗಳು ಪ್ರಕಟ : ವಿಶ್ವಕಪ್ 2023
ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಕಳೆದ ವಿಶ್ವಕಪ್‌ನ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ರೋಚಕ ಉದ್ಘಾಟನಾ ಪಂದ್ಯ ನಡೆಯಲಿದೆ. ಈಗಾಗಲೇ ವಿಶ್ವದ ದೊಡ್ಡ ಕ್ರಿಕೆಟ್ ಪಂದ್ಯಾವಳಿಗೆ ಹಲವು ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ ಮತ್ತು ಈ ಟೂರ್ನಿಗಾಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ಬಹು ನಿರೀಕ್ಷಿತ ಪಂದ್ಯಕ್ಕೆ ಮುಂಚಿತವಾಗಿ, ಅಂತಾರಾಷ್ಟ್ರೀಯ […]
ಮೋದಿ ಕೃತಜ್ಞತೆ : 11 ದಿನದಲ್ಲಿ ಪಿಎಂ ಮೋದಿ ವಾಟ್ಸ್ಆಯಪ್ ಚಾನೆಲ್ಗೆ 5 ಮಿಲಿಯನ್ ಫಾಲೋವರ್ಸ್
ನವದೆಹಲಿ:ಸೆಪ್ಟೆಂಬರ್ 14ರಂದು ಪ್ರಧಾನಿಗಳು ಮೊದಲ ಬಾರಿಗೆ ವಾಟ್ಸ್ಆಯಪ್ಗೆ ಅಡಿ ಇಟ್ಟಿದ್ದರು. ಇವತ್ತು 11 ದಿನಗಳ ಬಳಿಕ ಅವರ ಫಾಲೋವರ್ಸ್ ಸಂಖ್ಯೆ 53 ಲಕ್ಷ ಮುಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ವಿಶ್ವನಾಯಕರಲ್ಲಿ ಪ್ರಮುಖರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಟ್ಸ್ಆಯಪ್ನಲ್ಲೂ ಕಿಂಗ್ ಎನಿಸಿಕೊಳ್ಳುವತ್ತ ಸಾಗುತ್ತಿದ್ದಾರೆ. ‘ನಾವು 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಆಗಿರುವುದರಿಂದ, ನನ್ನ ವಾಟ್ಸ್ಆಯಪ್ ಚಾನೆಲ್ ಮೂಲಕ ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬರ ನಿರಂತರ ಬೆಂಬಲಕ್ಕೆ ಕೃತಜ್ಞರಾಗಿರುತ್ತೇನೆ. […]
ಬೆಂಗಳೂರು ಬಂದ್ ಹಿನ್ನೆಲೆ ನಾಳೆ ನಗರದ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು:ನಾಳೆ ಸೆ.26 ರಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿವೆ. ನಾಳಿನ ಬಂದ್ ಗೆ ಹೋಟೆಲ್ ಮಾಲೀಕರ ಸಂಘಟನೆಗಳು, ಖಾಸಗಿ ವಾಹನ ಚಾಲಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆಹಾಗಾಗಿ ಮಕ್ಕಳ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಯಾನಂದ್ ಆದೇಶ ಹೊರಡಿಸಿದ್ದಾರೆ.ಖಾಸಗಿ ಶಾಲೆಗಳ ಒಕ್ಕೂಟದಿಂದ ನಾಳೆ ರಜೆ ನೀಡಲಾಗಿದೆ. ಕಾವೇರಿ ನೀರಿಗಾಗಿ ರೈತ ಸಂಘಟನೆಗಳು […]
ಅನಿರುದ್ದ ಜಟ್ಕಾರ್ ಫ್ಯಾನ್ಸ್ ಅಸೋಸಿಯೇಶನ್ ವತಿಯಿಂದ ಅನಿರುದ್ದ ಜಟ್ಕಾರ್ ಇವರಿಗೆ ‘ನ್ಯಾಚುರಲ್ ಸ್ಟಾರ್’ಪ್ರಶಸ್ತಿ
ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ಆರ್ಯವರ್ಧನ್ ಖಾತಿಯ ಅನಿರುದ್ದ ಜಟ್ಕಾರ್ ಇವರಿಗೆ ಅನಿರುದ್ದ ಜಟ್ಕಾರ್ ಅಭಿಮಾನಿ ಬಳಗದ ವತಿಯಿಂದ ‘ನ್ಯಾಚುರಲ್ ಸ್ಟಾರ್’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಟ ಬರಹಗಾರ ನಿರ್ದೇಶಕ ಹಾಡುಗಾರ ಅನಿರುದ್ದ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ, “ನನ್ನ ಜೀವನದ ಅತ್ಯಂತ ಅಮೂಲ್ಯವಾದ, ಎಂದಿಗೂ ಮರೆಯಲಾಗದ ಸಮಾರಂಭ.ಈ ಗೌರವಕ್ಕೆ, ಪ್ರೀತಿಗೆ, ಪ್ರೋತ್ಸಾಹಕ್ಕೆ, ಬೆಂಬಲಕ್ಕೆ ಅನಂತ ಅನಂತ ಧನ್ಯವಾದಗಳು” ಎಂದು ಅನಿರುದ್ದ ಹೇಳಿದ್ದಾರೆ.