ನಾಳೆ ಈ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ರಾಜ್ಯದಲ್ಲಿ ಮುಂದುವರೆದ ನೈರುತ್ಯ ಮುಂಗಾರು

ಬೆಂಗಳೂರು: ನೈರುತ್ಯ ಮುಂಗಾರು ಚುರುಕಾಗಿದ್ದು, ಸೆ.26 ರಂದು ಬಾಗಲಕೋಟ, ಗದಗ, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಸೆ.29 ಮತ್ತು 30 ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮತ್ತು ಅದೇ ದಿನಗಳಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದಿದೆ.ನಾಳೆ […]

2024ಕ್ಕೆ ಜಿಮೇಲ್​​ನಲ್ಲಿನ ಬೇಸಿಕ್ HTML ಆವೃತ್ತಿ ಸ್ಥಗಿತ : ಗೂಗಲ್ ಘೋಷಣೆ

ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ತನ್ನ ಜಿಮೇಲ್ ಸೇವೆಯ ಬೇಸಿಕ್ ಎಚ್​ಟಿಎಂಎಲ್ ಆವೃತ್ತಿಯನ್ನು (Basic HTML version) 2024 ರ ಜನವರಿಯಲ್ಲಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. “ನೀವು ಜನವರಿ 2024 ರವರೆಗೆ ನಿಮ್ಮ ಬ್ರೌಸರ್​ನಲ್ಲಿ ಬೇಸಿಕ್ ಎಚ್​ಟಿಎಂಎಲ್​ ಆವೃತ್ತಿಯನ್ನು ನೋಡಬಹುದು. ಈ ದಿನಾಂಕದ ನಂತರ ಜಿಮೇಲ್ ಸ್ವಯಂಚಾಲಿತವಾಗಿ ಸ್ಟ್ಯಾಂಡರ್ಡ್ ಆವೃತ್ತಿಗೆ ಬದಲಾಗುತ್ತದೆ” ಎಂದು ಗೂಗಲ್ ಹೇಳಿದೆ. ಗೂಗಲ್ ತನ್ನ ಜಿಮೇಲ್​ನಲ್ಲಿನ ಬೇಸಿಕ್ ಎಚ್​ಟಿಎಂಎಲ್​ ಆವೃತ್ತಿಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಜನವರಿ 2024 ರವರೆಗೆ ನೀವು ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬೆಂಬಲಿಸದ ಬ್ರೌಸರ್ […]

ನಟಿ ಕಾರುಣ್ಯ ರಾಮ್​ ಆಯೋಜಿಸಿದ ‘ಅಂಗಾಂಗ ದಾನ ಶಿಬಿರ’ಕ್ಕೆ ಅಶ್ವಿನಿ ಪುನೀತರಾಜಕುಮಾರ್​, ಧ್ರುವ ಸರ್ಜಾ ಸಾಥ್​

ನಟಿ‌ ಕಾರುಣ್ಯ ರಾಮ್ ಇತ್ತೀಚೆಗೆ ಕರ್ನಾಟಕ ಸಿಂಡಿಕೇಟ್​ ಫೌಂಡೇಶನ್​ ಹಾಗೂ ಕಿಮ್ಸ್​ ಆಸ್ಪತ್ರೆಯ ಸಹಯೋಗದಲ್ಲಿ ‘ಅಂಗಾಂಗ ದಾನ ಶಿಬಿರ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಿನಿಮಾ ಅಭಿನಯದ ಜೊತೆಗೆ ತಮ್ಮದೇ ಆದ ಸಂಸ್ಕಾರ ಟ್ರಸ್ಟ್​ ವತಿಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರ್ತಾ ಇದ್ದಾರೆ. ಇತ್ತೀಚೆಗೆ ಕರ್ನಾಟಕ ಸಿಂಡಿಕೇಟ್​ ಫೌಂಡೇಶನ್​ ಹಾಗೂ ಕಿಮ್ಸ್​ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು’ವಜ್ರಕಾಯ’, ‘ಕಿರುಗೂರಿನ ಗಯ್ಯಾಳಿಗಳು’ ಹಾಗೂ ‘ಪೆಟ್ರೋಮ್ಯಾಕ್ಸ್’ ಚಿತ್ರಗಳಿಂದ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ‌ ಕಾರುಣ್ಯ ರಾಮ್. […]

ರೈಲಿನಲ್ಲಿ ಪ್ರಯಾಣಿಸಿ ರಾಹುಲ್​ ಗಾಂಧಿ ಘೋಷಣೆ : ‘ನಾವು ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಖಂಡಿತ’

ನವದೆಹಲಿ: ಛತ್ತೀಸ್​ಗಢ ವಿಧಾನಸಭೆ ಚುನಾವಣೆ ಶೀಘ್ರವೇ ನಡೆಯಲಿದ್ದು, ಪಕ್ಷದ ನಾಯಕ ರಾಹುಲ್​ ಗಾಂಧಿ ಬಿಲಾಸ್​ಪುರದಲ್ಲಿ ಪ್ರಚಾರ ಕಾರ್ಯ ಮಾಡಿದರು. ಜಾತಿ ಗಣತಿ ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಆಗಾಗ್ಗೆ ವಾಗ್ವಾದ ನಡೆಯುತ್ತಿರುತ್ತದೆ. ಅದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಮಾಡಿಸಿ, ಅದರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು. . ಛತ್ತೀಸ್​​ಗಢದ ಬಿಲಾಸ್​ಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಆವಾಸ್ ನ್ಯಾಯ ಸಮ್ಮೇಳನ’ದಲ್ಲಿ […]

ಗುಡಿಬಂಡೆ ತಾಲೂಕಿನ 949 ಮಹಿಳೆಯರಿಗೆ ಬರದ ಗೃಹಲಕ್ಷ್ಮಿ ಹಣ

ಗುಡಿಬಂಡೆ: ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವ ಪಂಚ ಗ್ಯಾರಂಟಿ ಭಾಗ್ಯಗಳನ್ನು ಘೋಷಣೆ ಮಾಡಿ, ಅ ಧಿಕಾರಕ್ಕೆ ಬಂದ ಮೇಲೆ ಒಂದೊಂದೇ ಭಾಗ್ಯಗಳನ್ನು ಜಾರಿ ಮಾಡಿದ್ದು, ಅದರಂತೆ ಗೃಹಿಣಿಯರಿಗಾಗಿ ಜಾರಿ ಮಾಡಲಾಗಿದೆ. ತಾಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿ: ಗುಡಿಬಂಡೆ ತಾಲೂಕಿನ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಮೇಲೆ ಇಲ್ಲಿಯವರೆಗೂ 10,520 ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಅರ್ಜಿ […]