ಗೃಹ ಸಚಿವರಿಂದ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಠಾಕೂರ್ ಅವರಿಗೆ ಅಭಿನಂದನೆ
ರಾಜ್ಯ ಆಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಠಾಕೂರ್ ಅವರನ್ನು ಗೃಹ ಸಚಿವರಿಂದ ಅಭಿನಂದಿಸಲಾಯಿತು. 2003 ರಲ್ಲಿ ಉಡುಪಿಯಲ್ಲಿ ನಡೆದ ಮೂರು ಜಿಲ್ಲೆಗಳ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿಯಾಗಿ, 2011 ರಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯರ ಕ್ರೀಡಾಕೂಟದ ಸಂಘಟನಾ ಸಮಿತಿಯ ಕಾರ್ಯದರ್ಶಿಯಾಗಿ ಮತ್ತು 2019 ಆಗಸ್ಟ್ ನಲ್ಲಿ ಕರ್ನಾಟಕ ರಾಜ್ಯ ಕಿರಿಯರ ಕೂಟ, 2019 ಸಪ್ಟೆಂಬರ್ ನಲ್ಲಿ ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟ ಮತ್ತು 2021 ಸೆಪ್ಟೆಂಬರ್ ನಲ್ಲಿ 23ರ ವಯೋಮಿತಿಯ ಮತ್ತು ಪುರುಷ ಮತ್ತು […]
“ಉನ್ನತಿ” ಅಂಗನವಾಡಿ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕಾರ್ಯಗಾರ
24 ಸೆಪ್ಟೆಂಬರ್ ಭಾನುವಾರದಂದು, ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆವರಣದಲ್ಲಿ “ಉನ್ನತಿ ” , ಅಂಗನವಾಡಿ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕಾರ್ಯಗಾರವು ರೋಟರಿ ಐಸಿರಿ ಪರ್ಕಳ ಹಾಗೂ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ ಇವರ ಸಹಪ್ರಯೋಜಕತ್ವದಲ್ಲಿ ಬೆಳಗ್ಗೆ 9 ರಿಂದ 1 ಘಂಟೆವರೆಗೆ, ನಡೆಯಿತು. ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳು ಸಮರ್ಥವಾಗಿ ಪ್ರಾತ್ಯಕ್ಷಿಕೆಗಳ ತಯಾರಿ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ತಾವೇ ಸ್ವತಃ ತಯಾರಿಸಬಹುದಾದ ಕಲಿಕಾ ಉಪಕರಣಗಳು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಅವುಗಳ ಪಾತ್ರಗಳ ಬಗ್ಗೆ […]
ಸೆ.28 ರಂದು ‘ದಿ ವ್ಯಾಕ್ಸಿನ್ ವಾರ್’ ಚಿತ್ರ ತೆರೆಗೆ: ಮೊಟ್ಟ ಮೊದಲ ಬಯೋ ಸೈನ್ಸ್ ಚಿತ್ರ ದೇಶದ ಮಹಿಳಾ ವಿಜ್ಞಾನಿಗಳಿಗೆ ಅರ್ಪಣೆ
ದಿ ಕಾಶ್ಮೀರ್ ಫೈಲ್ಸ್‌ನ ಯಶಸ್ಸಿನ ನಂತರ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಸೆ. 28 ರಂದು ದೇಶಾದ್ಯಂತ ತೆರೆ ಕಾಣಲಿದೆ. ವ್ಯಾಕ್ಸಿನ್ ವಾರ್ ಚಿತ್ರವು ಭಾರತೀಯ ಜೈವಿಕ ವಿಜ್ಞಾನಿಗಳ ಬಗ್ಗೆ ನೈಜ ಕಥಾನಕವನ್ನು ಹೊಂದಿದೆ . ಕೋವಿಡ್ -19 ಸಾಂಕ್ರಾಮಿಕದ ಅನಿಶ್ಚಿತತೆಯ ಸಮಯದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ವ್ಯಾಕ್ಸೀನ್ ಅನ್ನು ತಯಾರಿಸಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಈ ಚಿತ್ರವು ಸಮರ್ಪಿಸಲ್ಪಟ್ಟಿದೆ. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ(NiV) ಹಾಗೂ ICMR […]
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಚುನಾವಣೆ: ಮೂರು ಸ್ಥಾನ ABVP ತೆಕ್ಕೆಗೆ
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (DUSU) ಚುನಾವಣೆಯಲ್ಲಿ ನಾಲ್ಕು ಸೆಂಟ್ರಲ್ ಪ್ಯಾನಲ್ ಹುದ್ದೆಗಳ ಪೈಕಿ ಮೂರರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಗೆಲುವು ಸಾಧಿಸಿದೆ. ಶನಿವಾರ ಸಂಜೆ ಮತ ಎಣಿಕೆ ಮುಕ್ತಾಯಗೊಂಡಾಗ ಎಬಿವಿಪಿಯ ತುಷಾರ್ ದೇಧಾ ಡಿಯುಎಸ್‌ಯು ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಎಬಿವಿಪಿಯ ಅಪರಾಜಿತಾ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸಚಿನ್ ಬೈಸ್ಲಾ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ, NSUI ಅಭ್ಯರ್ಥಿ ಅಭಿ ದಹಿಯಾ ಉಪಾಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ. ಶುಕ್ರವಾರ ವಿದ್ಯಾರ್ಥಿ ಸಂಘದ ಚುನಾವಣೆ […]
ಮಂಗಳೂರು: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಮಂಗಳೂರು: ನವೆಂಬರ್ ತಿಂಗಳ 4 ಮತ್ತು 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಲಯದ ಉದ್ಘಾಟನೆ ಮತ್ತು ಸ್ವಾಗತ ಸಮಿತಿಯ ಪ್ರಥಮ ಸಭೆ ಬೆಂದೂರ್‌ವೆಲ್ ನ ಟೈಟಸ್ ನೊರೊನ್ಹಾ ಅವರ ರಾಹುಲ್ ಎಡ್ವರ್ಟೈರರ್ಸ್ ಕಚೇರಿಯಲ್ಲಿ ನಡೆಯಿತು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ದೀಪ ಬೇಳಗಿಸಿ, ಸಮ್ಮೇಳನದ ಕಾರ್ಯಾಲಯ ಮತ್ತು ಸ್ವಾಗತ ಸಮಿತಿಯ ಪ್ರಥಮ ಸಭೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಾಹಿತ್ಯ ಅಕಾಡೆಮಿ […]