ಕರಾವಳಿ ಕರ್ನಾಟಕಕ್ಕೆ ಅಕ್ಟೋಬರ್ ಅಂತ್ಯದೊಳಗೆ ಬರಲಿದೆ ವಂದೇ ಭಾರತ್ ಎಕ್ಸ್ ಪ್ರೆಸ್? ಸಂಸದರಿಗೆ ರೈಲ್ವೆ ಸಚಿವರ ಭರವಸೆ

ಉಡುಪಿ/ಮಂಗಳೂರು: ಕರಾವಳಿಯ ಜನರ ಬಹುದಿನದ ಬೇಡಿಕೆ ವಂದೇ ಭಾರತ್ ಎಕ್ಸ್ ಪ್ರೆಸ್ ಸೌಲಭ್ಯ. ಹಲವಾರು ತಾಂತ್ರಿಕ ಕಾರಣಗಳಿಂದ ಕರಾವಳಿಯ ಅವಳಿ ಜಿಲ್ಲೆಗಳಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ನ ಸೌಕರ್ಯ ಲಭಿಸಿಲ್ಲ. ಆದರೆ ಇದೀಗ ಮಂಗಳೂರು ಮತ್ತು ಮಡ್ ಗಾಂವ್(ಗೋವಾ) ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಓಡುವ ನಿರೀಕ್ಷೆ ಇದೆ ಎಂದು ದ ಹಿಂದು ವರದಿ ಹೇಳಿದೆ. ಈ ಬಗ್ಗೆ ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ […]
ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಲಾಡ್ ಸಂಘದ ಪಾತ್ರ ಹಿರಿದು: ಜಗದೀಶ್ ಎಸ್ ಹೆಗ್ಡೆ

ಮುಂಬೈ: ಮಲಾಡ್ ಉಪನಗರದಲ್ಲಿ ಭಾಷೆ ಸಂಸ್ಕೃತಿಯ ಬೆಳವಣಿಗೆ ಉದ್ದೇಶದಿಂದ ಸ್ಥಾಪನೆಗೊಂಡ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ವೈದ್ಯಕೀಯ ಕಾರ್ಯ ಚಟುವಟಿಕೆಗಳೊಂದಿಗೆ ಬಹತ್ವದ ನೆಲೆಯಲ್ಲಿ ಸ್ಥಾಪನೆಗೊಂಡ ಮಲಾಡ್ ಕನ್ನಡ ಸಂಘ ಸದಸ್ಯರ ನಿಸ್ವಾರ್ಥ ಸೇವೆ ದಾನಿಗಳ ಕೊಡುಗೆಯಿಂದ ಮಹಾನಗರದಲ್ಲಿ ಹೆಸರುವಾಸಿ ಸಂಸ್ಥೆಯಾಗಿ ಬೆಳೆದಿದೆ. ಭವಿಷ್ಯದಲ್ಲಿ ಸದಸ್ಯರೆಲ್ಲರೂ ಸಹೃದಯ ಮನಸ್ಸಿನಿಂದ ಸಂಘದ ಬೆಳವಣಿಗೆಗೆ ಶ್ರಮಿಸಿದಾಗ ಸಂಘದ ವತಿಯಿಂದ ಇನ್ನಷ್ಟು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂದು ಸಂಘದ ಅಧ್ಯಕ್ಷ ಅಡ್ವಕೇಟ್ ಜಗದೀಶ್ ಎಸ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಸೆ. 17ರಂದು ಮಲಾಡ್ […]