ಅಖಂಡ ಭಾರತವರ್ಷವನ್ನು ಏಕಸೂತ್ರದಲ್ಲಿ ಬೆಸೆದ ಜಗದ್ಗುರು ಆದಿಶಂಕರಾಚಾರ್ಯರ 108 ಅಡಿಯ ‘ಏಕತ್ವದ ಪ್ರತಿಮೆ’ ಅನಾವರಣ

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 8ನೇ ಶತಮಾನದ ಹಿಂದೂ ತತ್ವಜ್ಞಾನಿ ಮತ್ತು ಸಂತ ಆದಿ ಶಂಕರಾಚಾರ್ಯರ ಬೃಹತ್ 108 ಅಡಿ ಪ್ರತಿಮೆಯನ್ನು ಸೆಪ್ಟೆಂಬರ್ 21, ಗುರುವಾರದಂದು ಪವಿತ್ರ ಪಟ್ಟಣವಾದ ಓಂಕಾರೇಶ್ವರದಲ್ಲಿ ಅನಾವರಣಗೊಳಿಸಿದ್ದಾರೆ. “ಏಕತ್ಮಾತಾ ಕಿ ಪ್ರತಿಮಾ” ಅಥವಾ “ಏಕತ್ವದ ಪ್ರತಿಮೆ” ಎಂದು ಹೆಸರಿಸಲಾದ ಈ ಪ್ರಭಾವಶಾಲಿ ಶಿಲ್ಪವು ಆದಿ ಶಂಕರಾಚಾರ್ಯರ ನಿರಂತರ ಪರಂಪರೆ ಮತ್ತು ಆಳವಾದ ಬೋಧನೆಗಳಿಗೆ ಒಂದು ಸ್ಮಾರಕ ಗೌರವವಾಗಿದೆ. ಖಾಂಡ್ವಾ ಜಿಲ್ಲೆಯ ನರ್ಮದಾ ನದಿಯ ಮೇಲಿರುವ ರಮಣೀಯ ಮಂಧಾತ ಬೆಟ್ಟದ […]
ವಿದ್ಯಾರ್ಥಿನಿಯರು ಎಲ್ಲಾ ರಂಗಗಳಲ್ಲಿ ಸಾಧಕರಾಗಬೇಕೆನ್ನುವ ಉದ್ದೇಶದಿಂದ ಮಹಿಳಾ ಮೀಸಲಾತಿ ಜಾರಿ: ಯಶ್ ಪಾಲ್ ಸುವರ್ಣ

ಉಡುಪಿ: ವಿದ್ಯಾರ್ಥಿನಿಯರು ಕೇವಲ ಅಧ್ಯಯನದಲ್ಲಿ ಮುಂದೆ ಇದ್ದರೆ ಸಾಲದು, ಎಲ್ಲಾ ರಂಗಗಳಲ್ಲಿ ಸಾಧಕರಾಗಬೇಕು ಸಮಾಜವನ್ನು ಮುನ್ನಡೆಸುವವರಾಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತಂದಿದೆ. ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಾಶಪಾಲ್ ಸುವರ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2023-24 ನೇ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮತ್ತು ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಮಾತನಾಡಿದರು. ಮುಖ್ಯ […]
ನಮಗೇ ಕುಡಿಯಲಿಕ್ಕೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ: ನಟಿ ಪೂಜಾ ಗಾಂಧಿ

ಬೆಂಗಳೂರು: ಕಾವೇರಿ ಜಲ ವಿವಾದವು ಮತ್ತೆ ಮುನ್ನೆಲೆಗೆ ಬಂದಿದ್ದು, ತಮಿಳುನಾಡಿಗೆ ನೀರು ಬಿಡಬೇಕೆನ್ನುವ ನಿರ್ಧಾರದ ವಿರುದ್ದ ಕನ್ನಡ ಚಿತ್ರ ನಟ ನಟಿಯರು ಧ್ವನಿ ಎತ್ತಿದ್ದಾರೆ. ನಟ ದರ್ಶನ್ ತೂಗುದೀಪ ಮತ್ತು ಕಿಚ್ಚ ಸುದೀಪ್ ಬಳಿಕ ಪೂಜಾ ಗಾಂಧಿಯೂ ಕರ್ನಾಟಕದ ಪರ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ವಿಡೀಯೋ ಸಂದೇಶ ನೀಡಿರುವ ಪೂಜಾ, “ಕರ್ನಾಟಕದಲ್ಲಿ ಭೀಕರವಾದ ಬರ ಇದೆ.175 ತಾಲೋಕು ಬರಪೀಡಿತ ಅಂತ ಹೇಳ್ತಿದಾರೆ. ಸೆಂಟ್ರಲ್ ವಾಟರ್ ಕಮಿಷನ್ ನ ಸದಸ್ಯರನ್ನು ಕೆ. ಆರ್. ಎಸ್ ಗೆ ಕರೆಸಬೇಕು. ಅವರು ಮುಳುಗುವಷ್ಟು […]
ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ: ಉಸ್ತುವಾರಿ ಸಚಿವೆ ಭಾಗಿ

ಕಟಪಾಡಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ – ಪಡುಕುತ್ಯಾರು ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ19ನೇ ವರ್ಷದ ಶೋಭಕೃತ್ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು ಜುಲೈ 3 ರಿಂದ ಸೆಪ್ಟೆಂಬರ್ 29 ತನಕ ಶ್ರೀ ಸರಸ್ವತೀ ಸತ್ಸಂಗ ಮಂದಿರ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಇಲ್ಲಿ ಜರುಗಿದ್ದು ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಲು ಸೆಪ್ಟೆಂಬರ್ 22ರಂದು ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಕರ್ನಾಟಕ ಸರಕಾರದ ಮಹಿಳಾ ಮತ್ತು […]
‘ಕಾವೇರಿ’ದ ಜಲ ಕದನ: ಪ್ರಾಧಿಕಾರದ ನಿರ್ಧಾರಕ್ಕೆ ‘ಸುಪ್ರೀಂ’ ಮನ್ನಣೆ; ಕರ್ನಾಟಕದಲ್ಲಿ ಭುಗಿಲೆದ್ದ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ನಿರ್ದೇಶಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಆದೇಶಗಳನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಕರ್ನಾಟಕದ ಕಾವೇರಿ ನದಿ ಜಲಾನಯನ ಜಿಲ್ಲೆಗಳಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಿವೆ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಸರ್ಕಾರಕ್ಕೆ […]