ಕುಂದಾಪುರ: ಸೆ. 22 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಕುಂದಾಪುರ: 110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಆವರ್ಸೆ, ಬಿದ್ಕಲ್‌ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕುಳುಂಜೆ, ಶಂಕರನಾರಾಯಣ, ಬಿದ್ಕಲ್‌ಕಟ್ಟೆ, ಹಾಲಾಡಿ, ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಕಕ್ಕುಂಜೆ, ಯಡಾಡಿ-ಮತ್ಯಾಡಿ, ಹೆಸ್ಕತ್ತೂರು, ಮಚ್ಚಟ್ಟು, ಅಮಾಸೆಬೈಲು, ಹಳ್ಳಾಡಿ-ಹರ್ಕಾಡಿ, ಅಲ್ಬಾಡಿ, ಆರ್ಡಿ, ಶೇಡಿಮನೆ, ಹೈಕಾಡಿ,ಗೋಳಿಯಂಗಡಿ, ಬೆಳ್ವೆ, ಹೆಂಗವಳ್ಳಿ, ಸೂರ್ಗೋಳಿ, ಬೈಲೂರು, ಕಾಜಾಡಿ ಮತ್ತು ಕೊಂಡಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ […]
ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನ ಬೈಲ್ ನಿಧನ
ಸಿದ್ದಾಪುರ: ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನ ಬೈಲ್ (57) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅದ್ಭುತ ಕಂಠಸಿರಿಯ ಯಕ್ಷಗಾನ ಭಾಗವತ ಹಾಗೂ ಕೃತಿ ರಚನಾಕಾರಾಗಿದ್ದ ಇವರು ಹಲವು ಮೇಳಗಳಲ್ಲಿ ಭಾಗವತರಾಗಿ ಪ್ರಸಿದ್ದಿ ಪಡೆದಿದ್ದರು.
ಸೆ. 22 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ನೇರ ಸಂದರ್ಶನ
ಉಡುಪಿ: ಜಿಲ್ಲೆಯ ರಾಷ್ಟೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್‌ನಲ್ಲಿ ಖಾಲಿ ಇರುವ ಹೆರಿಗೆ ತಜ್ಞರು -01 (ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ), ವೈದ್ಯಾಧಿಕಾರಿಗಳು-04 (ನಮ್ಮ ಕ್ಲಿನಿಕ್ ಟಿ.ಟಿ ರೋಡ್ ಕುಂದಾಪುರ, ನಮ್ಮ ಕ್ಲಿನಿಕ್ ಮರೀನಾಪುರ ಕಾರ್ಕಳ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ),ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಯಂಗ್ ಹಿಯರಿಂಗ್ ಇಂಪೈರ್ಡ್ ಚಿಲ್ಡ್ರನ್ ಇನ್ ಸ್ಟ್ರಕ್ಟರ್-01 ಹುದ್ದೆ (ಜಿಲ್ಲಾ ಆಸ್ಪತ್ರೆ) ಹಾಗೂ ಎಲ್.ಹೆಚ್.ವಿ -01 (ಉಡುಪಿಯ ನಗರ ಆರೋಗ್ಯ ಕೇಂದ್ರ) […]
NEET PG 2023: ಎಲ್ಲಾ ವಿಭಾಗಗಳಲ್ಲಿ ಕಟ್-ಆಫ್ ಅನ್ನು ಶೂನ್ಯಕ್ಕೆ ಇಳಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಇಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ (NEET PG) 2023 ಕಟ್-ಆಫ್ (ಅರ್ಹತಾ ಶೇಕಡಾ) ಅನ್ನು ಎಲ್ಲಾ ವಿಭಾಗಗಳಲ್ಲಿ ಶೂನ್ಯಕ್ಕೆ ಇಳಿಸಿದೆ. ಇದರರ್ಥ NEET PG 2023 ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಈಗ ಸ್ನಾತಕೋತ್ತರ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಹೇಳಿಕೆಯಲ್ಲಿ “2023 (NEET PG 2023) ಗಾಗಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಹತಾ […]
ಹದಗೆಟ್ಟ ಭಾರತ-ಕೆನಡಾ ಸಂಬಂಧ: ಖಲಿಸ್ತಾನಿ ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ತೀವ್ರಗೊಳಿಸಿದ NIA
ನವದೆಹಲಿ: ಭಾರತ-ಕೆನಡಾ ರಾಜತಾಂತ್ರಿಕ ಗಲಾಟೆ ತೀವ್ರಗೊಳ್ಳುತ್ತಿರುವಂತೆಯೇ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಖಲಿಸ್ತಾನಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಫೆಡರಲ್ ಏಜೆನ್ಸಿಯು ಖಲಿಸ್ತಾನಿಗಳ ಮಾಹಿತಿಗಾಗಿ ನಗದು ಬಹುಮಾನಗಳನ್ನು ಘೋಷಿಸಿದೆ. ಬುಧವಾರ ಐದು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಕಾರ್ಯಕರ್ತರ ಬಂಧನ ನಡೆದಿದೆ. ಭಯೋತ್ಪಾದಕರು ಅವರಿಗೆ ವಿತ್ತೀಯ ಪ್ರಯೋಜನಗಳ ಭರವಸೆ ನೀಡುವ ಮೂಲಕ ಬಿಕೆಐಗೆ ಹೊಸ ಸದಸ್ಯರನ್ನು ನೇಮಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಕೆಐ ಕಾರ್ಯಕರ್ತರಾದ ಹರ್ವಿಂದರ್ ಸಿಂಗ್ ಸಂಧು ಮತ್ತು ಲಖ್ಬೀರ್ ಸಿಂಗ್ ಸಂಧು ಅವರನ್ನು ಬಂಧಿಸಲಾಗಿದ್ದು, […]