ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಮೈಸೂರು ರೈಲ್ವೆ ವಿಭಾಗಕ್ಕೆ ಎರಡನೇ ಸ್ಥಾನ.. ಆದಾಯದಲ್ಲೂ ಉತ್ತಮ ಸಾಧನೆ

ಮೈಸೂರು: ಭಾರತೀಯ ರೈಲ್ವೆಯ ಮೈಸೂರು ವಿಭಾಗವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 28% ಕ್ಕಿಂತ ಹೆಚ್ಚು ಸರಕು ಸಾಗಣೆಯ ಅಸಾಧಾರಣ ಬೆಳವಣಿಗೆಯನ್ನು ಸಾಧಿಸುವ ಮೂಲಕ ದೇಶದಲ್ಲೇ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮೈಸೂರು ರೈಲ್ವೆ ವಿಭಾಗವೂ ಸರಕು ಸಾಗಣೆಯಲ್ಲೇ ಭಾರತೀಯ ರೈಲ್ವೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರಿಗೆ ಸೆ.19ರಂದು ನವದೆಹಲಿಯಲ್ಲಿ ರೈಲ್ವೆ ಮಂಡಳಿಯಿಂದ ಪ್ರಶಸ್ತಿ ನೀಡಿದರು. ಮೈಸೂರು ರೈಲ್ವೆ […]

ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆಯುವ ಹಿನ್ನೆಲೆ ನಗರದ ಈ ದಿನಗಳಲ್ಲಿ ಮದ್ಯ ಮಾರಾಟ ಬಂದ್​

ಬೆಂಗಳೂರು : ಗಣೇಶ ನಿಮಜ್ಜನ ವೇಳೆ ಮೆರವಣಿಗೆ ನಡೆಯುವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಗರದಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಗಣೇಶ ನಿಮಜ್ಜನ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಧ್ಯದಂಗಡಿ ಮುಚ್ಚುವಂತೆ ನಗರ ಪೊಲೀಸ್​ ಆಯುಕ್ತ ಬಿ ದಯಾನಂದ ಅವರು ಆದೇಶಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ‌ ನಿಗದಿತ ದಿನಗಳಲ್ಲಿ ಮದ್ಯದಂಗಡಿ ತೆರೆಯುವುದಿಲ್ಲ. ಅಲ್ಲದೆ‌ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಬೆಂಗಳೂರಿನ ಕೇಂದ್ರ, ಉತ್ತರ, […]

ಎಂಟು ತಿಂಗಳ ನಂತರ ಮತ್ತೆ ಅಗ್ರ ಸ್ಥಾನ : ಏಷ್ಯಾಕಪ್​ ಫೈನಲ್​ನಲ್ಲಿ ಸಿರಾಜ್​ ಕಾಮಾಲ್​ ಬೌಲಿಂಗ್​

ದುಬೈ: ಒಂದು ಅದ್ಭುತ ಆಟ ಎಲ್ಲವನ್ನೂ ಬದಲಾಯಿಸುತ್ತದೆ ಎಂಬುದಕ್ಕೆ ಮೊಹಮ್ಮದ್​ ಸಿರಾಜ್​ ಸಾಕ್ಷಿಯಾಗಿದ್ದಾರೆ. ಏಷ್ಯಾಕಪ್​ ಫೈನಲ್​ ಪ್ರದರ್ಶನದ ನಂತರ ಕ್ರಿಕೆಟ್​ ಹೊರತಾಗಿಯೂ ಸಿರಾಜ್​ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಫೈನಲ್​ ಪಂದ್ಯದ ಪ್ರದರ್ಶನ ಕಾರಣ ಐಸಿಸಿ ಶ್ರೇಯಾಂಕದಲ್ಲೂ ಸಿರಾಜ್​ ಅದ್ಭುತ ಏರಿಕೆ ಕಂಡಿದ್ದಾರೆ. ಬರೋಬ್ಬರಿ ಎಂಟು ಸ್ಥಾನಗಳನ್ನು ಜಿಗಿದಿರುವ ಸಿರಾಜ್​ ವಿಶ್ವದ ಏಕದಿನ ನಂ.1 ಬೌಲರ್​ ಆಗಿದ್ದಾರೆ. ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ 6 ವಿಕೆಟ್​ ಕಬಳಿಸಿ ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದ ಸಿರಾಜ್​ ಐಸಿಸಿ ಶ್ರೇಯಾಂಕದಲ್ಲಿ 8 ತಿಂಗಳ […]

2 ವರ್ಷಗಳಲ್ಲೇ ಗರಿಷ್ಠ : ಒಂದೇ ದಿನದಲ್ಲಿ 7 ಲಕ್ಷ ವಹಿವಾಟು ದಾಖಲಿಸಿದ ಬಿಟ್​ ಕಾಯಿನ್​

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಕಳೆದ ಒಂದು ವಾರದ ಅವಧಿಯಲ್ಲಿ ಬಿಟ್ ಕಾಯಿನ್ ವಹಿವಾಟು ಅಸಾಧಾರಣ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 7,00,000 ಕ್ಕೂ ಹೆಚ್ಚು ವಹಿವಾಟುಗಳನ್ನು ದಾಖಲಿಸಿದೆ ಎಂದು ಹೊಸ ಅಂಕಿ ಅಂಶಗಳು ತೋರಿಸಿವೆ. ವಿಶ್ಲೇಷಣಾ ಸಂಸ್ಥೆ ಇನ್ ಟು ದಿ ಬ್ಲಾಕ್ ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, ವರದಿಯಾದ ಬಿಟ್ ಕಾಯಿನ್ ವಹಿವಾಟುಗಳ ಸಂಖ್ಯೆ ಸುಮಾರು 7,03,000 ಕ್ಕೆ ಏರಿದೆ. ಇದು 2023 ರಲ್ಲಿ ದಾಖಲಾದ ಅತಿ ಹೆಚ್ಚಿನ ಸಂಖ್ಯೆಯ ವಹಿವಾಟು ಆಗಿದೆ. ಅಲ್ಲದೆ […]

ವಿಜಯನಗರದಲ್ಲಿ ಶಂಕಿತ ಡೆಂಗ್ಯೂಗೆ ಶಾಲಾ ಬಾಲಕಿ ಬಲಿ

ವಿಜಯನಗರ : ವಿಜಯನಗರದಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾಳೆ.ಶಾಲಾ ಬಾಲಕಿಯೋರ್ವಳು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.ಮೃತ ಜಾಹ್ನವಿಯ ತಂದೆ ತಿರುಮಲೇಶ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್​ ಆಗಿ ಕೆಲಸ ಮಾಡುತ್ತಿದ್ದಾರೆ. ನಗರದ ಟಿ.ಬಿ. ಡ್ಯಾಂನ ವಂಕಾಯಿ ಕ್ಯಾಂಪ್‌ನಲ್ಲಿ ಇವರು ವಾಸವಾಗಿದ್ದರು. ಕಳೆದ ಒಂದು ವಾರದಿಂದ ಬಾಲಕಿಗೆ ಜ್ವರ ಕಾಣಿಸಿಕೊಂಡಿದೆ. ವೈರಲ್ ಫೀವರ್ ಎಂದು ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಜ್ವರ ಕಡಿಮೆಯಾಗದ ಹಿನ್ನೆಲೆ […]