ಅ.31ರವರೆಗೆ ವಿಸ್ತರಣೆ: ಫಾರ್ಮ್ 10ಬಿ, 10 ಬಿಬಿ, ಐಟಿಆರ್ -7 ಸಲ್ಲಿಕೆ ಗಡುವು
ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಸೋಮವಾರ (ಸೆಪ್ಟೆಂಬರ್ 18) 2022-23ರ ಹಣಕಾಸು ವರ್ಷಕ್ಕೆ ಫಾರ್ಮ್ 10 ಬಿ ಮತ್ತು ಫಾರ್ಮ್ 10 ಬಿಬಿ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 31, 2023 ರವರೆಗೆ ವಿಸ್ತರಿಸಿದೆ. ಈ ಫಾರ್ಮ್ಗಳು ಮೂಲತಃ ಸೆಪ್ಟೆಂಬರ್ 30, 2023 ರಂದೇ ಬರಬೇಕಿದ್ದವು. ಫಾರ್ಮ್ 10 ಬಿ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಟ್ರಸ್ಟ್ಗಳಿಗೆ ಅನ್ವಯಿಸುತ್ತದೆ. ಇನ್ನು ಫಾರ್ಮ್ 10 ಬಿಬಿ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.ಫಾರ್ಮ್ 10 ಬಿ ಮತ್ತು […]
ದಾದಾಸಾಹೇಬ್ ಫಾಲ್ಕೆ ಜೀವನಾಧಾರಿತ ಸಿನಿಮಾ ಘೋಷಿಸಿದ ರಾಜಮೌಳಿ : ಮೇಡ್ ಇನ್ ಇಂಡಿಯಾ
ಆರ್ಆರ್ಆರ್ ಮೂಲಕ ಭರ್ಜರಿ ಯಶಸ್ಸು ಗಳಿಸಿರುವ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಅವರು ಭಾರತೀಯ ಸಿನಿಮಾ ರಂಗದ ಬಿಗ್ ಪ್ರಾಜೆಕ್ಟ್ ಒಂದನ್ನು ಘೋಷಿಸಿದ್ದಾರೆ. ಇದು ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಯೋಪಿಕ್. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಜೀವನಾಧಾರಿತ ಚಿತ್ರ ”ಮೇಡ್ ಇನ್ ಇಂಡಿಯಾ” ವನ್ನು ಪ್ರೇಕ್ಷಕರೆದುರು ಪ್ರಸ್ತುತಪಡಿಸುವುದಾಗಿ ತಿಳಿಸಿದ್ದಾರೆ. ಚಿತ್ರದ ನಿರೂಪಣೆಯನ್ನು ಕೇಳಿದಾಗ, ಸ್ಕ್ರಿಪ್ಟ್ ಭಾವನಾತ್ಮಕ ಎನಿಸಿತೆಂದು ಆರ್ಆರ್ಆರ್ ಸಾರಥಿ ರಾಜಮೌಳಿ ತಿಳಿಸಿದ್ದಾರೆ. ಎಸ್ಎಸ್ ರಾಜಮೌಳಿ ಟ್ವೀಟ್: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ […]
ಯುವಿ 6 ಬಾಲ್ಗೆ 6 ಸಿಕ್ಸ್ ಗಳಿಸಿ ಇಂದಿಗೆ 16 ವರ್ಷ
16 ವರ್ಷಗಳ ಹಿಂದೆ ಇದೇ ದಿನ ಭಾರತದ ಕ್ರಿಕೆಟ್ ಮೈದಾನದಲ್ಲಿ ಒಂದು ಚಮತ್ಕಾರವೇ ನಡೆದಿತ್ತು. ಚೊಚ್ಚಲ ಟಿ20 ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆಯುತ್ತಿತ್ತು. 2007ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಅಬ್ಬರದ 6 ಸಿಕ್ಸ್ಗಳನ್ನು ಗಳಿಸಿ ಇಂದಿಗೆ 16 ವರ್ಷ ಸಂದಿದೆ. ಇಂಗ್ಲೆಂಡ್ನ ಫ್ಲಿಂಟಾಫ್ ಎಂಬ ಆಟಗಾರ ಭಾರತದ ಆಟಗಾರ ಒಬ್ಬನನ್ನು ಮೈದಾನದಲ್ಲಿ ಕೆಣಕ್ಕಿದ್ದರು. ಇದಕ್ಕೆ ಮೈದಾನದಲ್ಲಿ ಮಾತಿನ ಮೂಲಕ ಉತ್ತರ ಕೊಟ್ಟಿದ್ದಲ್ಲದೇ, ಬ್ಯಾಟ್ನಿಂದಲೂ ಉತ್ತರಿಸಿದ್ದರು. ಆಂಡ್ರ್ಯೂ ಫ್ಲಿಂಟಾಫ್ ಮಾಡಿದ್ದ ತಪ್ಪಿಗೆ ಬೆಲೆ ತೆತ್ತಿದ್ದು ಮಾತ್ರ ಸ್ಟುವರ್ಟ್ […]
‘ಲಿಯೋ’ ದಳಪತಿ ವಿಜಯ್ ನಟನೆಯ ಚಿತ್ರದ ಕನ್ನಡ ಪೋಸ್ಟರ್ ಔಟ್
ಕಾಲಿವುಡ್ ಸೂಪರ್ಸ್ಟಾರ್ ನಟ ದಳಪತಿ ವಿಜಯ್ ಅವರ ‘ಲಿಯೋ’ 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ‘ಲಿಯೋ’ ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. “ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್” […]
ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ
ಮುಂಬೈ :ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ ಡಾಲರ್ ಎದುರು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.2675ಕ್ಕೆ ಕುಸಿದಿದೆ. “ವಿದೇಶಿ ವಿನಿಮಯ ಮೀಸಲುಗಳ ಸಾಕಷ್ಟು ಸಂಗ್ರಹ ಹೊಂದಿರುವ ಆರ್ಬಿಐ ರೂಪಾಯಿ ಮೌಲ್ಯವನ್ನು ಎತ್ತಿಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ ರೂಪಾಯಿ ಮೌಲ್ಯ ಕುಸಿತವು ಒಂದು ಹಂತ ಮೀರಿ ಹೋದರೆ ಆರ್ಬಿಐ ಏನೂ ಮಾಡಲಾಗಲ್ಲ” ಎಂದು ಖಾಸಗಿ ವಲಯದ ಬ್ಯಾಂಕಿನ ವಿದೇಶಿ ವಿನಿಮಯ […]