ಚೆಕ್ ಅಮ್ಯಾನ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ
ಉಡುಪಿ: ಉಡುಪಿ ಜಿಲ್ಲೆಯ ಹೆಗ್ಗುಂಜೆ ಗ್ರಾಮದ ಮಂದರ್ತಿ ನಿವಾಸಿ ಆರೋಪಿ ಉದಯ ಮರಕಾಲರವರ ವಿರುದ್ದ 2017ರ ಚೆಕ್‌ಬೌಸ್ ಪ್ರಕರಣದಲ್ಲಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ವಾರಂಟ್ ನೀಡಿದ ಕಾರಣ ಸೆ.16 ರಂದು ಶನಿವಾರ ಬ್ರಹ್ಮಾವರ ಪೊಲೀಸ್ ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು. ಉಡುಪಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಧೀಶ ವಿನಾಯಕ್ ಇವರು ಆರೋಪಿಗೆ ಸೆ.19 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ಪಿರ್ಯಾದಿದಾರ ಶಿರಿಯಾರ ಗ್ರಾಮದ ಖಾಯಂ ನಿವಾಸಿ ಸುರೇಂದ್ರ ಶೆಟ್ಟಿ ಪರ ಉಡುಪಿ ಹಿರಿಯ ನ್ಯಾಯವಾದಿ […]
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ
ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವ ಧ್ಯಾನ ಮಂದಿರದ ರಾಜಯೋಗ ಸಭಾಭವನದಲ್ಲಿ ಸೆ.16ರಂದು ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀಮದ್ ಭುವನೇಂದ್ರ ವಿದ್ಯಾಶಾಲಾ ಸಂಚಾಲಕ ಉದ್ಯಮಿ ಎಸ್. ನಿತ್ಯಾನಂದ ಪೈ ಮಾತನಾಡಿ ಗೀತೆಯ ಸಾರವನ್ನು ಅಳವಡಿಸಿದಾಗ ಮನಶಾಂತಿ ಸಿಗುತ್ತದೆ. ಸನಾತನ ಧರ್ಮದ ಉಳಿವಿನ ಬಗ್ಗೆ ಈ ರೀತಿಯ ಕಾರ್ಯಕ್ರಮಗಳಿಂದ ಜನರಲ್ಲಿ ಅರಿವು ಮೂಡಿಸಲು ಸಾಧ್ಯ ಎಂದರು. ತೀರ್ಪುಗಾರರಾಗಿ ಪುಲ್ಕೇರಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸಾಕಮ್ಮ ಭಾಗವಶಿಸಿ, ಮಕ್ಕಳು ಶ್ರೀಕೃಷ್ಣನ ಅವತಾರಗಳ ಬಾಲಪ್ರತಿಭೆಯನ್ನು ವಿವಿಧ ರೀತಿಯಿಂದ […]
ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳ ವಿಸರ್ಜನೆ ನಿಷೇಧ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆ, ಬಾವಿ, ನದಿ, ಕಾಲುವೆ ಹಾಗೂ ಇತರೇ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿರುವ ಹಾಗೂ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಿ, ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂದರ್ಭ ಗಣೇಶೋತ್ಸವ ಸಮಿತಿಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿರುವ ಗಣೇಶ ವಿಗ್ರಹಗಳನ್ನು ಬಳಸದೇ ಪರಿಸರ ಪ್ರೇಮಿ ಗಣೇಶ ವಿಗ್ರಹಗಳನ್ನು ಬಳಸುವಂತೆ ಮುಚ್ಚಳಿಕೆ ಪತ್ರವನ್ನು ಗಣೇಶೋತ್ಸವ ಸಮಿತಿ ಆಯೋಜಕರಿಂದ ಪಡೆದುಕೊಂಡು ಅನುಮತಿ ನೀಡಬೇಕು […]
ಮಣಿಪಾಲ: ಬಾಲಮಂದಿರದಿಂದ ಬಾಲಕ ನಾಪತ್ತೆ
ಉಡುಪಿ: ನಗರದ ಮಣಿಪಾಲ ಸಗ್ರಿಯ ಸರಕಾರಿ ಬಾಲಕರ ಬಾಲ ಮಂದಿರದಿಂದ ವಾಸವಿದ್ದ ಸುಮಾರು 14-16 ವರ್ಷದ ಶಬೀರ್ ಎಂಬ ಬಾಲಕನು ಸೆಪ್ಟಂಬರ್ 1 ರಿಂದ ನಾಪತ್ತೆಯಾಗಿರುತ್ತಾನೆ. ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಹಿಂದಿ ಬಾಷೆ ಮಾತನಾಡುತ್ತಾನೆ. ಇವನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಪಿ.ಐ ಮೊ.ನಂ: 9480805458, ಪಿ.ಎಸ್.ಐ ಮೊ.ನಂ: 8277988949, ಮಹಿಳಾ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2525599 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತವನ್ನು ವಿಶ್ವಗುರುವಾಗಿಸುವ ಪಣತೊಟ್ಟಿರುವ ವಿಶ್ವನಾಯಕ ನರೇಂದ್ರ ಮೋದಿಯವರಿಗೆ ಜನುಮ ದಿನದ ಶುಭಾಶಯಗಳು
ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್‌ನಗರದ ಪುಟ್ಟ ಊರಿನಲ್ಲಿ ನರೇಂದ್ರ ಮೋದಿಯವರ ಜೀವನದ ಪಯಣ ಪ್ರಾರಂಭವಾಯಿತು. ಸೆಪ್ಟೆಂಬರ್ 17, 1950 ರಂದು ದಾಮೋದರದಾಸ್ ಮೋದಿ ಮತ್ತು ಹೀರಾಬಾ ಮೋದಿಗೆ ಜನಿಸಿದ ಮೂರನೇ ಮಗುವಿಗೆ ನರೇಂದ್ರ ಎನ್ನುವ ಹೆಸರಿಡುತ್ತಾರೆ. ಅತ್ಯಂತ ಸಾಧಾರಣ ಕುಟುಂಬದಲ್ಲಿ ನರೇಂದ್ರ ಎನ್ನುವ ಬಾಲಕನ ಜನನ ಮತ್ತು ಪಾಲನೆಯಾಗುತ್ತದೆ. ಅವರ ಇಡೀ ಕುಟುಂಬವು ಸುಮಾರು 40 ಅಡಿ 12 ಅಡಿಗಳಷ್ಟು ಸಣ್ಣ ಒಂದೇ ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿತ್ತು. ಅಂದಿನಿಂದ ಇಂದಿನವರೆಗೂ ಅವರ ಪರಿವಾರ […]