ಎಕ್ಸಿಕ್ಯೂಟಿವ್ ಕಾನ್ ಸ್ಟೇಬಲ್ ಹುದ್ದೆಗಾಗಿ ಅರ್ಜಿ ಆಹ್ವಾನ

ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ದೆಹಲಿ ಪೋಲೀಸ್ ಪಡೆಗಳಲ್ಲಿ ಎಕ್ಸಿಕ್ಯೂಟಿವ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 2023 ರ ಜುಲೈ 1 ಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 21 ರಿಂದ 25 ವರ್ಷ ವಯೋಮಿತಿ ಹೊಂದಿರುವ (ಇತರೆ ವರ್ಗಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ), ಮಾನ್ಯತೆ ಪಡೆದ ಮಂಡಳಿಯಿಂದ 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಎಲ್.ಎಂ.ವಿ ವಾಹನಗಳ ಚಾಲನಾ ಪರವಾನಗಿ […]

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಚೇತನಾ ಮೊಬೈಲ್ ಆ್ಯಪ್ ಪೇ-ಡೈರೆಕ್ಟ್ ಎಟಿಎಂ ಕಾರ್ಡ್, ಪಿಗ್ಮಿ ಕಲೆಕ್ಷನ್ ಮೊಬೈಲ್ ಆ್ಯಪ್ ಬಿಡುಗಡೆ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಚೇತನಾ ಮೊಬೈಲ್ ಆ್ಯಪ್, ಪೇ-ಡೈರೆಕ್ಟ್ ಎಟಿಎಂ ಕಾರ್ಡ್, ಪಿಗ್ಮಿ ಕಲೆಕ್ಷನ್ ಮೊಬೈಲ್ ಆ್ಯಪ್ ಅನ್ನು ಭಾನುವಾರ ಅಜ್ಜರಕಾಡು ಪುರಭವನದಲ್ಲಿ ಅನಾವರಣಗೊಳಿಸಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚೇತನಾ ಮೊಬೈಲ್ ಆ್ಯಪ್, ಮಾಜಿ ಶಾಸಕ ರಘುಪತಿ ಭಟ್ ಪೇ-ಡೈರೆಕ್ಟ್ ಎಟಿಎಂ ಕಾರ್ಡ್ ಹಾಗೂ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಪಿಗ್ಮಿ ಕಲೆಕ್ಷನ್ ಆ್ಯಪ್ ಅನ್ನು ಅನಾವರಣಗೊಳಿಸಿದರು. ಜಿಲ್ಲಾ ಸಹಕಾರ […]

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ “ಬೋನ್ ಬ್ಯಾಂಕ್” ಉದ್ಘಾಟನೆ

ಮಣಿಪಾಲ: ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥ ಡಾ ರಂಜನ್ ಆರ್ ಪೈ ಅವರು ಬೋನ್ ಬ್ಯಾಂಕ್ (ಮೂಳೆ ನಿಧಿ) ಅನ್ನು ಉದ್ಘಾಟಿಸಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಇದು ಮಣಿಪಾಲ್ ಫೌಂಡೇಶನ್ ನ ಕೊಡುಗೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಫೌಂಡೇಶನ್ ನ ಸಿಇಒ ಡಾ.ಹರಿನಾರಾಯಣ ಶರ್ಮಾ , ಮಣಿಪಾಲ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಬೋನ್ ಬ್ಯಾಂಕ್ ಪ್ರಥಮವಾಗಿದ್ದು, ಈ ಮೂಲಕ ಉತ್ತರ ಕರಾವಳಿ ಕರ್ನಾಟಕದಲ್ಲಿ […]

ಯೆನೆಪೊಯ ವಿಶ್ವವಿದ್ಯಾಲಯದಿಂದ ಶೈಸಿಲ್ ಮ್ಯಾಥ್ಯೂ ಇವರಿಗೆ ಪಿಎಚ್‌ಡಿ ಪ್ರದಾನ

ಮಂಗಳೂರು: ಯೆನೆಪೊಯ ವಿಶ್ವವಿದ್ಯಾಲಯದಿಂದ ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕಿ ಶೈಸಿಲ್ ಮ್ಯಾಥ್ಯೂ ಇವರು ಜೀವನಶೈಲಿ ಅಭ್ಯಾಸಗಳು, ಹದಿಹರೆಯದವರ ಬಾಡಿ ಮಾಸ್ ಇಂಡೆಕ್ಸ್ನಿಂದ ಅಧಿಕ ತೂಕ ಮತ್ತು ಸ್ಥೂಲಕಾಯದ ಬಗ್ಗೆ ಪೋಷಕರನ್ನು ಒಳಗೊಂಡಿರುವ ಬಹು- ಘಟಕ ಮಧ್ಯಸ್ಥಿಕೆ ಕಾರ್ಯಕ್ರಮ ಎಂಬುದರ ಬಗ್ಗೆ ತಮ್ಮ ತನ್ನ ಪಿಎಚ್‌ಡಿ ಪ್ರಬಂಧವನ್ನು ಮಂಗಳವಾರ, ಸೆಪ್ಟೆಂಬರ್ 12, 2023 ರಂದು ಮಂಡಿಸಿದ್ದು, ಇದು ಜೀವನಶೈಲಿಯ ಅಭ್ಯಾಸಗಳ ಸುಧಾರಣೆ ಮತ್ತು ಬೆಳೆಯುತ್ತಿರುವ ಯುವಕರಲ್ಲಿ ಅಧಿಕ ತೂಕ […]

ಕುಸ್ತಿ ಪಂದ್ಯಾಟ: ಶ್ರೀ ವೆಂ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪೈಝಾನ್ 86 ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಲಕ್ಷ್ಮೀಶ್ 97+ ಕೆ ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.