ಮಲ್ಪೆ ಬಂದರಿನಲ್ಲಿ ಮೀನು ಆಯುತ್ತಿದ್ದ ಮಕ್ಕಳ ರಕ್ಷಣೆ

ಉಡುಪಿ: ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ , ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸದಲ್ಲಿ ತೊಡಗಿದ್ದ 3 ಮಕ್ಕಳು ಹಾಗೂ ಮಗುವನ್ನು ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ ಇಬ್ಬರು ತಾಯಿ ಜೊತೆ ಇದ್ದ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ […]

ಬ್ಯಾಂಕ್‌ ಆಫ್ ಬರೋಡದಿಂದ ಭರ್ಜರಿ ಫೆಸ್ಟಿವ್ ಆಫರ್- ‘BOB ಕೆ ಸಂಗ್‌ ತ್ಯೋಹಾರ್ ಕಿ ಉಮಂಗ್’

ಬ್ಯಾಂಕ್‌ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್‌ಗೆ ಒಳ್ಳೆಯ ಆಫರ್‌ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್‌ ಬಡ್ಡಿದರದಲ್ಲಿ ಗೃಹಸಾಲ, ವಾಹನಸಾಲ, ಶಿಕ್ಷಣ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಆಫರ್‌ ಮಾಡಿದೆ. ಹಾಗೆಯೇ, ನಾಲ್ಕು ವಿಶೇಷ ಸೇವಿಂಗ್ಸ್ ಅಕೌಂಟ್‌ಗಳನ್ನೂ ಚಾಲನೆಗೊಳಿಸಿದೆ. ಇವುಗಳ ಜೊತೆಗೆ ಈಗಿರುವ ಡೆಬಿಟ್‌ಕಾರ್ಡ್ ಮತ್ತು ಕ್ರೆಡಿಟ್‌ ಕಾರ್ಡ್ಗಳಿಗೂ ವಿವಿಧ ಡಿಸ್ಕೌಂಟ್‌ಗಳನ್ನುನೀಡಲಾಗುತ್ತಿದೆ. ಡಿಸೆಂಬರ್ 31,2023 ರವರೆಗೂ ಈ ಆಫರ್‌ಗಳು ಇರಲಿವೆ. ಬ್ಯಾಂಕ್‌ಆಫ್ ಬರೋಡ ಬಹಳ ಕಡಿಮೆ ಬಡ್ಡಿದರಗಳಿಗೆ ಸಾಲಗಳ ಆಫರ್ ಮಾಡುತ್ತಿದೆ.ಶೇ.8.40 ರಿಂದ ಅದರ ಸಾಲದ ದರ […]

ರಾಧಾಕೃಷ್ಣ ನೃತ್ಯ ನಿಕೇತನದಿಂದ ವರ್ಣಜತಿಮಾಲ ಭರತ ನಾಟ್ಯ ಕಾರ್ಯಕ್ರಮ 

ಉಡುಪಿ:   ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಇದರ ಆಶ್ರಯದಲ್ಲಿ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ಇವರ ಮಾಸಿಕ ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ “ವರ್ಣಜತಿಮಾಲ” ಭರತನಾಟ್ಯ ನೃತ್ಯ ಮಾರ್ಗ ಪದ್ಧತಿಯ ಪ್ರಮುಖ ನೃತ್ಯ ಬಂದಗಳಾದ ಜತಿಸ್ವರ ಹಾಗೂ ಪದವರ್ಣಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಸ್ಥೆಯ 40 ವಿದ್ಯಾರ್ಥಿಗಳು ರಾಜಾಂಗಣದ ವೇದಿಕೆಯಲ್ಲಿ ನೃತ್ಯ ಪ್ರದರ್ಶನವನ್ನು ನೀ ಡಿದರು. ವಿವಿಧ ರಾಗ, ತಾಳ, ರಚನೆಯಲ್ಲಿ ಹೊಂದಿದಂತಹ ಜತಿಸ್ವರ ಹಾಗೂ ಪದವರ್ಣಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. […]

ವಿಚಾರಣೆ ವೇಳೆ ಅಸ್ವಸ್ಥಳಾದ ಚೈತ್ರಾ ಕುಂದಾಪುರ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿರುವ ಚೈತ್ರಾ ಕುಂದಾಪುರ ತೀವ್ರ ಅಸ್ವಸ್ಥರಾದ ಹಿನ್ನೆಲೆ ಅಧಿಕಾರಿಗಳು ಇದೀಗ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೈತ್ರಾ ಮತ್ತು ಇತರರನ್ನು ಕೋರ್ಟ್‌ 10 ದಿನಗಳ ಅವಧಿಗೆ ಸಿಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ […]

ರಂಗಭೂಮಿ ಉಡುಪಿಯ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆ

ಉಡುಪಿ: ಗುರುವಾರದಂದು ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆ ರಂಗಭೂಮಿ ಉಡುಪಿಯ 58ನೇ ವಾರ್ಷಿಕ ಮಹಾಸಭೆ ನಡೆಯಿತು. 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಗೊಂಡರು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಡಾ. ಎಚ್​. ಎಸ್​ ಬಲ್ಲಾಳ್​, ಮಾರ್ಗದರ್ಶಕರಾಗಿ ಡಾ. ಎಚ್​. ಶಾಂತರಾಮ್​, ಉಪಾಧ್ಯಕ್ಷರಾಗಿ ಭಾಸ್ಕರ್​ ರಾವ್​ ಕಿದಿಯೂರು ಹಾಗೂ ಎನ್​. ರಾಜ ಗೋಪಾಲ ಬಲ್ಲಾಳ್​, ಪ್ರಧಾನ ಕಾರ್ಯದರ್ಶಿಯಾಗಿ ಪ್ರದಿಪ್​ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ […]