ಸೆ 11 ರಿಂದ 25 ರ ವರೆಗೆ ಕಂದುರೋಗ ಉಚಿತ ಲಸಿಕಾ ಕಾರ್ಯಕ್ರಮ

ಉಡುಪಿ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ 3ನೇ ಹಂತದ ಕಂದುರೋಗ ಲಸಿಕಾ ಕಾರ್ಯಕ್ರಮವನ್ನು ಸೆಪ್ಟಂಬರ್ 11 ರಿಂದ 25 ರ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ. 4 ರಿಂದ 8 ತಿಂಗಳ ಪ್ರಾಯದ ಹೆಣ್ಣು ಕರುಗಳಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯ ಇದಾಗಿದ್ದು, ಜಿಲ್ಲೆಯ ರೈತರು ಈ ಲಸಿಕಾ ಕಾರ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುವೈದ್ಯ ಸಂಸ್ಥೆಗೆ ಭೇಟಿ ನೀಡುವಂತೆ ಪಶುಪಾಲನಾ ಇಲಾಖೆ ಪ್ರಕಟಣೆ ತಿಳಿಸಿದೆ.    

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 26 ನೇ ವಾರ್ಷಿಕ ಮಹಾಸಭೆ: ಶೇ 20 ಡಿವಿಡೆಂಡ್ ಘೋಷಣೆ

ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 26 ನೇ ವಾರ್ಷಿಕ ಮಹಾಸಭೆಯು ಸೆ. 10ರಂದು ಉದುಪಿ ಶೋಕಮಾತಾ ಇಗರ್ಜಿಯ ಆವೆ ಮರಿಯಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ’ ಅಲ್ಮೇಡಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು 2022-23 ಸಾಲಿನಲ್ಲಿ 83.81 ಲಕ್ಷ ಲಾಭಾಂಶವನ್ನು ಗಳಿಸಿದ್ದು, ಪಾಲುದಾರರಿಗೆ ಶೇ. 20 ಡಿವಿಡೆಂಡ್ ಅನ್ನು ಘೋಷಿಸಲಾಯಿತು. ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ವಂದನೀಯ ರೋಯ್ ಲೋಬೋ , ಸಂಘದ ಸಾಧನೆಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನೀಡಿದ ಸಾಧನಾ ಪ್ರಶಸ್ತಿಯನ್ನು ಸಂಘದ […]

ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ ಬಹುಕೋಟಿ ವಂಚನೆ ಪ್ರಕರಣ: ಸ್ಪೀಕರ್ ಗೆ ಮನವಿ ಸಲ್ಲಿಸಿದ ಸಂತ್ರಸ್ತರು

ಉಡುಪಿ: ಕಳೆದ ಡಿಸೆಂಬರ್ ನಲ್ಲಿ ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಎಂಬ ಸೊಸೈಟಿಯಲ್ಲಿ ಬಹುಕೋಟಿ ಹಗರಣ ನಡೆದಿರುವ ಘಟನೆ ವರದಿಯಾಗಿತ್ತು. ಸಂಸ್ಥೆಯು ತನ್ನ ಠೇವಣಿದಾರ ಗ್ರಾಹಕರಿಗೆ ಬಡ್ಡಿ ಅಥವಾ ಅವಧಿ ಮುಗಿದ ಠೇವಣಿ ಮೊಬಲಗನ್ನು ಹಿಂತಿರುಗಿಸದೆ ಕೋಟಿಗಟ್ಟಲೆ ಆರ್ಥಿಕ ವಂಚನೆ ನಡೆಸಿದ್ದ ಬಗ್ಗೆ ಜಿಲ್ಲೆಯಾದ್ಯಂತ ವರದಿಯಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆ ಹಾಗೂ ಸೆನ್ ಠಾಣೆಗಳಲ್ಲಿ ದೂರು ದಾಖಲಿಸಿ ಎಫ್.ಐ.ಆರ್ ದಾಖಲಿಸಲಾಗಿತ್ತು. ಇದರ ಪರಿಣಾಮವಾಗಿ ಸೆನ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಸಂಸ್ಥೆಯ […]

ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ 1 ತಿಂಗಳ ಕಾಲ ವಿವಿಧ ಸೇವಾ ಕಾರ್ಯಗಳು: ವಿಜಯ್ ಕೊಡವೂರು

ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು, ಮೋದಿ ಉತ್ಸವ ಸಮಿತಿ ಉಡುಪಿ ಜಿಲ್ಲೆ, ಬ್ರಾಹ್ಮಣ ಸಮಾಜ ಕೊಡವೂರು, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮೋದಿ ಉತ್ಸವ- 2023 ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರಿಗೆ ಗೌರವಾರ್ಪಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವು ಕೊಡವೂರು ವಿಪ್ರಶ್ರೀ ಸಭಾ ಭವನದಲ್ಲಿ ಸೆ. 10 ರಂದು ನಡೆಯಿತು. ಕಾರ್ಯಕ್ರಮದ ಸಂಯೋಜಕ ನಗರಸಭಾ ಸದಸ್ಯ ಕೆ ವಿಜಯ್ ಕೊಡವೂರು ಮಾತನಾಡಿ, ಸೆ.17 ರಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ […]

ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಸೆ.11 ರಿಂದ 16 ರವರೆಗೆ ನಡೆಯುವ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಡುಪಿ ವಿಧಾನಸಬಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಇವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಮಿಷನ್ ಇಂದ್ರಧನುಷ್ ಅವಧಿಯಲ್ಲಿ, ಜಿಲ್ಲೆಯ 0-5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರು, ಲಸಿಕೆ ವಂಚಿತ ಮಕ್ಕಳು ದಡಾರ ರುಬೆಲ್ಲಾ ಇನ್ನಿತರ ನಿಗದಿತ ಲಸಿಕೆ ಪಡೆದು ಆರೋಗ್ಯವಂತ ಜಿಲ್ಲೆಯನ್ನಾಗಿಸಲು ಹಾಗೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು. […]