ಮಂಗಳೂರು: ಹೊಟೇಲಿನ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತದೇಹ ಪತ್ತೆ

ಮಂಗಳೂರು: ನಗರದ ಪ್ರತಿಷ್ಠಿತ ಹೊಟೇಲಿನ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಯೂನಿಯನ್ ಬ್ಯಾಂಕ್ ಅಧಿಕಾರಿ, ಕೇರಳದ ತಿರುವನಂತಪುರಂನಿವಾಸಿ ಗೋಪು ಆರ್ ನಾಯರ್ ಮೃತಪಟ್ಟ ವ್ಯಕ್ತಿ. ಗೋಪು ಆರ್ ನಾಯರ್ ಭಾನುವಾರದಂದು ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದರು. ಬ್ಯಾಂಕ್ ಅಧಿಕಾರಿ ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ […]

ಬ್ರಹ್ಮಾವರ: ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮ ಬೇಕರ್ಸ್ ಮೀಟ್ ಸಂಪನ್ನ

ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘ ಹಾಗೂ ಇಂಡಿಯನ್‌ ಬೇಕರಿ ಫೆಡರೇಶನ್‌ ಸಹಭಾಗಿತ್ವದಲ್ಲಿ ಸೆ. 10ರಂದು ಬ್ರಹ್ಮಾವರದ ಮದರ್‌ ಪ್ಯಾಲೇಸ್‌ ಸಭಾಂಗಣದಲ್ಲಿ ಜರಗಿದ “ಬೇಕರ್ಸ್‌ ಮೀಟ್‌’ ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವನ್ನು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತಾಧಿಕಾರಿ ಡಾ. ಪ್ರೇಮಾನಂದ ಕೆ. ಉದ್ಘಾಟಿಸಿದರು. ಬೇಕರಿ ಉದ್ಯಮವನ್ನು ಮತ್ತಷ್ಟು ಉನ್ನತಿಗೇರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಕಾನೂನುಮತ್ತು ನಿಯಮಗಳನ್ನು ಜಾರಿಗೆ ತರುತ್ತಿದ್ದು ಅದನ್ನು ಪಾಲನೆ ಮಾಡುವುದು ಅನಿವಾರ್ಯವಾಗಿದೆ. ನಮ್ಮ […]

ಪಡುಕುತ್ಯಾರು ವಿಶ್ವಕರ್ಮ ಸಮಾಜದ ಅಧಿಕೃತ ಧ್ವಜ ಅನಾವರಣ

ಕಾಪು: ಸಮಾಜದ ಎಲ್ಲಾ ದೇವಸ್ಥಾನಗಳ ಧರ್ಮದರ್ಶಿಗಳು, ವಿದ್ವಾಂಸರು, ವೈದಿಕ ಮುಖಂಡರು, ಸಂಘಟನೆಯ ಮುಖಂಡರುಗಳು ಒಮ್ಮತದ ಅಭಿಪ್ರಾಯದೊಂದಿಗೆ ವಿಶ್ವಕರ್ಮ ಧ್ವಜ ಮೂಡಿ ಬಂದಿರುವುದು ಸಂತಸ ತಂದಿದೆ. ವಿಶ್ವಕರ್ಮ ಧ್ವಜವು ಸಮಾಜದ ಏಕತೆಯ ದ್ಯೋತಕವಾಗಬೇಕು ಎಂದು ಶ್ರೀಮತ್ ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ರವಿವಾರ ಪಡುಕುತ್ಯಾರು ಶ್ರೀ ಆನೆಗುಂದಿ ಮಹಾಸಂಸ್ಥಾನದಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಿಗೆ ವಿಶ್ವಕರ್ಮ ಧ್ವಜ ಹಸ್ತಾಂತರಿಸಿ, ಆಶೀರ್ವಚನ ನೀಡಿದರು. ಮುಂದಿನ ವಿಶ್ವಕರ್ಮ ಮಹೋತ್ಸವದ ದಿನದಂದು ಮಹಾಸಂಸ್ಥಾನದ […]

ಕಾಸರಗೋಡು-ಮಂಗಳೂರು ಮಾರ್ಗದಲ್ಲಿ “ವಂದೇ ಭಾರತ್” ಸೂಚನಾ ಫಲಕಗಳ ಅಳವಡಿಕೆ

ಕಣ್ಣೂರು: ಕೇರಳದಲ್ಲಿ ಓಡಲಿರುವ ಸಂಭವನೀಯ ಎರಡನೇ ವಂದೇ ಭಾರತ್ ರೈಲಿನ ಅಂತಿಮ ಮಾರ್ಗವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದಾಗ್ಯೂ, ಮಂಗಳೂರು-ಕಾಸರಗೋಡು ವಿಭಾಗದ ನಿಲ್ದಾಣಗಳಲ್ಲಿ “ವಂದೇ ಭಾರತ್” ಎಂದು ಸೂಚಿಸುವ ಫಲಕಗಳನ್ನು ಅಳವಡಿಸಲಾಗಿದ್ದು ಇದು ಈ ಭಾಗದಲ್ಲಿ ಇಂಜಿನ್ ಅನ್ನು ನಿಲ್ಲಿಸಲು ಲೋಕೋ ಪೈಲಟ್‌ಗಳಿಗೆ ಸೂಚನೆಯಾಗಿದೆ. ಈ ಅಳವಡಿಕೆಯು ವಂದೇ ಭಾರತ್ ರೈಲು ಕಾಸರಗೋಡು-ಮಂಗಳೂರು ಮಾರ್ಗವನ್ನು ಒಳಗೊಳ್ಳುತ್ತದೆ ಎಂದು ಸೂಚಿಸುತ್ತದೆ. ಈಗಿರುವ ರೈಲು ತಿರುವನಂತಪುರ-ಕಾಸರಗೋಡು ಮಾರ್ಗದಲ್ಲಿ ಸಂಚರಿಸುತ್ತದೆ. ಮಂಗಳೂರು-ತಿರುವನಂತಪುರಂ, ಮಂಗಳೂರು-ಕೊಟ್ಟಾಯಂ, ಮಂಗಳೂರು-ಎರ್ನಾಕುಲಂ, ಮತ್ತು ಮಂಗಳೂರು-ಕೊಯಂಬತ್ತೂರು ಇವು ಕೇರಳದಲ್ಲಿ ಎರಡನೇ […]

ಯುಎಸ್ ಓಪನ್‌: 24 ನೇ ಗ್ರ್ಯಾನ್‌ಸ್ಲಾಮ್ ಗೆದ್ದು ಇತಿಹಾಸ ರಚಿಸಿದ ನೊವಾಕ್ ಜೊಕೊವಿಕ್

2008 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ನೊವಾಕ್ ಜೊಕೊವಿಕ್ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ವಿಜಯ ಹದಿನೈದು ವರ್ಷಗಳ ಬಳಿಕವೂ ಹತ್ತಾರು ಆಟಗಾರರ ಸವಾಲುಗಳ ಮಧ್ಯೆಯೂ ಈ ಆಟದಲ್ಲಿ ತಮ್ಮ ಹಿಡಿತವನ್ನು ಸಡಿಲಗೊಳಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಡೇನಿಯಲ್ ಮೆಡ್ವೆಡೆವ್ ಅವರನ್ನು ಮಣಿಸಿದ 36 ವರ್ಷದ ನೊವಾಕ್ ಯುಎಸ್ ಓಪನ್ ನಲ್ಲಿ ತನ್ನ 24ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ರಚಿಸಿದ್ದಾರೆ. ನೋವಾಕ್ ಯುವ ಪೀಳಿಗೆಯ ಎದುರಾಳಿಗಳೊಂದಿಗೆ ದೈಹಿಕವಾಗಿ ಸೆಣಸಾಡಿದ್ದಾರೆ ಮಾತ್ರವಲ್ಲದೆ ಯುದ್ಧತಂತ್ರದಿಂದ ಅವರನ್ನು ಸಂಪೂರ್ಣವಾಗಿ ಸೋಲಿಸಿದ್ದಾರೆ. ಅವರು […]