ವಿಶ್ವ ಮಾಧ್ಯಮಗಳಲ್ಲಿ ಭಾರತದ ಗುಣಗಾನ : G20 ಶೃಂಗಸಭೆ ಯಶಸ್ಸು
ನವದೆಹಲಿ: G20 ಶೃಂಗಸಭೆ ಶೇ 100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ. ಭಾರತದ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಗೆ ಜಾಗತಿಕ ಪತ್ರಿಕೆಗಳಲ್ಲಿ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿದೆ. ಹಲವು ವಿಶ್ವ ಮಾಧ್ಯಮಗಳು ಭಾರತದ ನೇತೃತ್ವ ಹಾಗೂ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾದ ಬಗೆಯನ್ನು ಗುಣಗಾನ ಮಾಡಿವೆ. .ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಕಾಳಜಿ ವಹಿಸುವಲ್ಲಿ ಭಾರತದ ಅಧ್ಯಕ್ಷತೆ ಜಿ-20 ಶೃಂಗಸಭೆ ಯಶಸ್ವಿಯಾಗಿದೆ. ಎಲ್ಲ ಅಭಿವೃದ್ಧಿ ಮತ್ತು ಭೌಗೋಳಿಕ ಹಾಗೂ ರಾಜಕೀಯ ವಿಷಯಗಳ ಬಗ್ಗೆ 100 ಪ್ರತಿಶತದಷ್ಟ ಒಮ್ಮತ […]
ಚಿತ್ರತಂಡದಿಂದ ಅಧಿಕೃತ ಘೋಷಣೆ : ಬಹುನಿರೀಕ್ಷಿತ ‘ಪುಷ್ಪ 2’ ರಿಲೀಸ್ಗೆ ಮುಹೂರ್ತ ಫಿಕ್ಸ
ಪುಷ್ಪ: ದಿ ರೈಸ್ ಹಿಟ್: 2021ರ ಡಿಸೆಂಬರ್ 17 ರಂದು ಪುಷ್ಪ: ದಿ ರೈಸ್ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನೂ ಸೆಳೆದಿತ್ತು. ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು. ಡಿಫರೆಂಟ್ ಪೋಸ್ಟರ್ ಮೂಲಕ ಪುಷ್ಪ 2 ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಸೀಕ್ವೆಲ್ ನೋಡಲು ಸಿನಿ ಪ್ರೇಮಿಗಳು […]
ಸಾರ್ವಕಾಲಿಕ ದಾಖಲೆ, 20 ಸಾವಿರದ ಗಡಿ ದಾಟಿದ ನಿಫ್ಟಿ-50
ನವದೆಹಲಿ: ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ ಶೇಕಡಾ 1 ರಷ್ಟು ಏರಿಕೆ ಕಾಣುವ ಮೂಲಕ 20000.40 ರಲ್ಲಿ ವಹಿವಾಟು ನಡೆಸುತ್ತಿದೆ. ಅತ್ತ ಬಿಎಸ್ಇ ಸೆನ್ಸೆಕ್ಸ್ 67,127 ರಲ್ಲಿ ವಹಿವಾಟು ನಡೆಸುತ್ತಿದೆ. ಮಧ್ಯಾಹ್ನ 3;30ಕ್ಕೆ ಅಂದರೆ ವಹಿವಾಟು ಕೊನೆಗೊಳ್ಳುವ ವೇಳೆ ನಿಫ್ಟಿ ಈ ಸಾಧನೆ ಮಾಡಿದೆಜಾಗತಿಕ ಸವಾಲುಗಳು ಮತ್ತು ಷೇರು ಮಾರುಕಟ್ಟೆಯ ಏರಿಳಿತವನ್ನು ಮೀರಿದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಇದೇ ಮೊದಲ ಬಾರಿಗೆ 20 ಸಾವಿರ ಗಡಿ ದಾಟಿ ದಾಖಲೆ ಬರೆಯಿತು. ಜುಲೈನಲ್ಲಿ ಎನ್ಎಸ್ಇ 19,900 […]
ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಡಿಪ್ಲೊಮಾ ಇನ್ ಮಾಂಟೆಸ್ಸರಿ ಚೆಲ್ಡ್ ಎಜ್ಯುಕೇಶನ್ ತರಬೇತಿಯ ಪ್ರಮಾಣ ಪತ್ರ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ
ಮಣಿಪಾಲ: ಮಣಿಪಾಲ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ (ಆ.ಒಇಜ) ಶಿಕ್ಷಕಿಯರಿಗೆ 2022-23 ಸಾಲಿನ ವಿದ್ಯಾರ್ಥಿ ಶಿಕ್ಷಕಿಯರಿಗೆ ಡಿಪ್ಲೊಮಾ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಶಿಕ್ಷಕಿಯರಿಗೆ ಪುರಸ್ಕಾರ ಸಮಾರಂಭವು ಕ್ರಿಸ್ಟಲ್ ಬಿಜ್ಹ್ ಹಬ್ನಲ್ಲಿ, ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಜ್ಜರ್ಕಾಡು ಇಶ್ನಾ ಪ್ಲೇ ಸ್ಕೂಲ್’ನ ಸಹ-ಸ್ಥಾಪಕರಾದ ಶ್ರೀಮತಿ ಶಿಲ್ಪಾ ಆರ್. ಶೆಟ್ಟಿ ಮಾತನಾಡಿ, ಶಿಕ್ಷಕಿಯರು ತಾಳ್ಮೆಯು ಶಿಕ್ಷಕಿಯರಿಗೆ ಇರಲೇ ಬೇಕಾದ ಅನಿವಾರ್ಯ ಗುಣ. […]
ಹಿರಿಯಡಕ: ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟನೆ
ಹಿರಿಯಡಕ: ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ಕೊಠಡಿಯ ಉದ್ಘಾಟನೆಯನ್ನು ಇಂದು(ಸೆ.11) ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಶಾಸಕರು ಮಾತನಾಡಿ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಮುಚ್ಚುವ ಸ್ಥಿತಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 200 ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಶ್ಲಾಘನೀಯ ಇಂತಹ ಶಾಲೆಗಳ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು ಹಾಗೂ ಶಾಲೆಗೆ ಬೇಕಾದ ಸಂಪೂರ್ಣ […]