ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 22 ಕೊನೆ ದಿನ

ಉಡುಪಿ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ದಿನಾಂಕ:31-03-2023 ರ ಮೊದಲು ನೋಂದಣಿಯಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಪೈಕಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ದ್ವಿತಿಯ ಪಿಯುಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಮಿಕ ಅಧಿಕಾರಿ, ಉಡುಪಿ ಉಪವಿಭಾಗ, ಇವರ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಅರ್ಜಿ ನಮೂನೆಯನ್ನು ತಾವು […]
ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆ ಉರ್ವ ಸ್ಟೋರ್ ಗೆ ಸ್ಥಳಾಂತರ

ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆಯನ್ನು ಉರ್ವ ಸ್ಟೋರ್‌ನಲ್ಲಿರುವ ಪಾರಿಜಾತಾ ಕಾಂಪ್ಲೆಕ್ಸ್ನ ನೆಲಮಹಡಿಗೆ ಸೆ. 9 ರಂದು ಸ್ಥಳಾಂತರಿಸಲಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಬಿಜೈ ಚರ್ಚ್ನ ಧರ್ಮಗುರುಗಳಾದ ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾ ಇವರು ಸ್ಥಳಾಂತರಗೊಂಡ ಹೊಸ ಶಾಖೆಯನ್ನು ಉದ್ಘಾಟಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊ ಮಾತನಾಡಿ, ಆಡಳಿತ ಮಂಡಳಿಯು ಒಂದು ವರ್ಷದ ಹಿಂದೆ ಗ್ರಾಹಕರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆಯನ್ನು ಅಶೋಕನಗರ ಶಾಖೆಯ ಸ್ಥಳಾಂತರದ ಮೂಲಕ ಈಡೇರಿಸಿದೆ. ಬ್ಯಾಂಕ್, ಭಾರತೀಯ ರಿಸರ್ವ್ […]
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆ 33ನೇ ವಾರ್ಷಿಕ ಮಹಾ ಸಭೆ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆಯ 33ನೇ ವಾರ್ಷಿಕ ಮಹಾ ಸಭೆಯನ್ನು ಬಂಟವರ ಯಾನೆ ನಾಡವರ ಸಂಘ ಉಡುಪಿ ವಲಯದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಛಾಯಾಗ್ರಹಣ ಕ್ಷೇತ್ರಕ್ಕೆ ಇರುವಷ್ಟು ಮಾನ್ಯತೆ ಬೇರೆ ಯಾವ ಕ್ಷೇತ್ರಕ್ಕೂ ಇಲ್ಲ. ಎಸ್ ಕೆಪಿಎ ಸಂಘಟನೆ ಅತ್ಯಂತ ಬಲಿಷ್ಠವಾಗಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು. ಎಸ್ ಕೆ ಪಿ ಎ ದ .ಕ-ಉಡುಪಿ ಜಲ್ಲಾಧ್ಯಕ್ಷ ಆನಂದ ಎನ್ ಕುಂಪಲ […]
ಮೊರಾಕೊ ಭೂಕಂಪ: 2,000 ಕ್ಕೂ ಹೆಚ್ಚು ಜನ ಸಾವು; 3 ಲಕ್ಷ ಜನ ಬಾಧಿತ

ಶುಕ್ರವಾರ ತಡರಾತ್ರಿ ಮೊರಾಕೊದ ಅಟ್ಲಾಸ್ ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಹಲವಾರು ಕಟ್ಟಡಗಳು ಧರಾಶಾಯಿಯಾಗಿದ್ದು ಜನರು ತಮ್ಮ ಮನೆಗಳಿಂದ ಪಲಾಯನಗೈದಿದ್ದಾರೆ. ಸುಮಾರು 2,000 ಜನರು ಗಾಯಗೊಂಡಿದ್ದಾರೆ. ಮರಕೆಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊರಾಕೊಗೆ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. […]
ಶೀಘ್ರದಲ್ಲಿಯೇ ರಾಜ್ಯ ರಾಜಧಾನಿಯಲ್ಲಿ ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕಿನ ಶಾಖೆ ಪ್ರಾರಂಭ: ಯಶ್ ಪಾಲ್ ಎ. ಸುವರ್ಣ

ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ 2022-23ರ ಆರ್ಥಿಕ ವರ್ಷದ 45ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷ, ಶಾಸಕ ಯಶ್ ಪಾಲ್ ಎ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ಜರುಗಿತು. ಯಶ್ ಪಾಲ್ ಸುವರ್ಣಮಾತನಾಡಿ, ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ನಿರಂತರ 14 ವರ್ಷಗಳಿಂದ ಅತಿಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು […]