ಪವರ್ ಪಾಯಿಂಟ್​ ಸಾಫ್ಟ್​ವೇರ್ ತಯಾರಕ ಡೆನ್ನಿಸ್ ಆಸ್ಟಿನ್ ವಿಧಿವಶ

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸುಮಾರು 36 ವರ್ಷಗಳ ಹಿಂದೆ ಮತ್ತೊಬ್ಬ ಸಾಫ್ಟವೇರ್​ ಎಂಜಿನಿಯರ್​ ಜೊತೆಗೂಡಿ ಪವರ್ ಪಾಯಿಂಟ್ ಸಾಫ್ಟ್ ವೇರ್ ಅನ್ನು ರಚಿಸಿದ್ದ ಡೆನ್ನಿಸ್ ಆಸ್ಟಿನ್ ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ.ಎಂಎಸ್​ ಪವರ್​ ಪಾಯಿಂಟ್​ ಸಾಫ್ಟ್​ವೇರ್ ತಯಾರಿಸಿದ ಡೆನ್ನಿಸ್ ಆಸ್ಟಿನ್ 76ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಿಧನರಾಗಿದ್ದಾರೆ. 76 ವರ್ಷದ ಆಸ್ಟಿನ್ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 1993 ರ ಹೊತ್ತಿಗೆ ಪವರ್​ ಪಾಯಿಂಟ್​ $ 100 ಮಿಲಿಯನ್ ಡಾಲರ್​ಗಿಂತ ಹೆಚ್ಚು ಆದಾಯ […]

ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ, ನಾಳೆ ಬಹುನಿರೀಕ್ಷಿತ ಯುಐ ಟೀಸರ್​ ಅನಾವರಣ

ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಯುಐ’. ಶೀರ್ಷಿಕೆಯಿಂದಲೇ ದಕ್ಷಿಣ ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡುತ್ತಿದೆ.ಬಹುನಿರೀಕ್ಷಿತ ಯುಐ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ​ ಅನಾವರಣಗೊಳ್ಳಲಿದೆ. ಚಿತ್ರತಂಡ ಎಡಿಟಿಂಗ್​ ಕೆಲಸ ಚುರುಕುಗೊಳಿಸಿದೆ. ಚಿತ್ರದಲ್ಲಿ 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. 3ಡಿ ಬಾಡಿ […]

ಪಾಕ್​ – ಭಾರತ ಪಂದ್ಯಕ್ಕೆ ಮತ್ತೆ ಕಾಡಿದ ವರುಣ.. ಮಳೆಗೂ ಮುಂಚೆ ಭಾರತ 147/2

ಕೊಲಂಬೊ (ಶ್ರೀಲಂಕಾ): ನೀಲಾಕಾಶದ ಅಡಿಯಲ್ಲಿ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಒಮ್ಮೆಗೆ ಮಳೆ ಕಾಡಿದೆ. 25ನೇ ಓವರ್​ ವೇಳೆ ಜೋರಾಗಿ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡಲದೇ ಸುರಿದಿದೆ. ವಾರದ ಹಿಂದೆ ನಡೆದ ಲೀಗ್ ಹಂತದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಈಗ ಸೂಪರ್​ ಫೋರ್​ ಹಂತದ ಪಂದ್ಯಕ್ಕೂ ವರುಣ ಅಡ್ಡಿಯಾಗಿದ್ದಾನೆ.​ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಏಷ್ಯಾಕಪ್​ನ ಲೀಗ್​ ಹಂತದ ಪಂದ್ಯದಲ್ಲಿ ಪಾಕ್​ ಬೌಲರ್​​ಗಳಿಗೆ ನಲುಗಿದ್ದ ಗಿಲ್ […]

ಶೇ 7ರಷ್ಟು ಮಾರುಕಟ್ಟೆ ಪಾಲು ಪಡೆದ ಆಯಪಲ್ : ಭಾರತೀಯರಲ್ಲಿ ಹೆಚ್ಚುತ್ತಿದೆ ಐಫೋನ್​ ಒಲವು

ನವದೆಹಲಿ: ಭಾರತದಲ್ಲಿ ಐಫೋನ್​ಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಆಯಪಲ್ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುತ್ತಿದೆ.ಈಗ ಭಾರತದಲ್ಲೇ ತನ್ನ ಸ್ಮಾರ್ಟ್​ಫೋನ್​ಗಳನ್ನು ತಯಾರಿಸುತ್ತಿರುವ ಆಯಪಲ್​ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶೇ 7ರಷ್ಟು ಪಾಲು ಪಡೆಯುವತ್ತ ಮುನ್ನಡೆದಿದೆ. ವರ್ಷದ ಮೊದಲಾರ್ಧದಲ್ಲಿ ಆಯಪಲ್ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 6 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ ಮತ್ತು ಸೂಪರ್-ಪ್ರೀಮಿಯಂ ಸ್ಮಾರ್ಟ್​ಫೋನ್ ವಿಭಾಗದಲ್ಲಿ (50,000-100,000 ರೂ.ಗಳ ನಡುವೆ ಬೆಲೆ) ಪ್ರಾಬಲ್ಯ ಸಾಧಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಅಂಕಿ ಅಂಶಗಳು […]

ರೈತರಿಗೆ ಜೇನು ಕೃಷಿ ತರಬೇತಿ ಕಾರ್ಯಕ್ರಮ

ಉಡುಪಿ: ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಜೇನು ಸಾಕಾಣಿಕೆ ಯೋಜನೆ ಹಾಗೂ ರಾಜ್ಯವಲಯ ಮಧುವನ ಮತ್ತು ಜೇನು ಸಾಕಾಣೆ ಯೋಜನೆಯಡಿ ಜೇನು ಕೃಷಿ ಪ್ರೋತ್ಸಾಹಕ್ಕಾಗಿ ಉಡುಪಿ ತಾಲೂಕಿನ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಸದರಿ ತರಬೇತಿ ಕಾರ್ಯಕ್ರಮಕ್ಕೆ ಆಸಕ್ತ ರೈತರು ತಮ್ಮ ಹೆಸರನ್ನು ಸೆಪ್ಟಂಬರ್ 16 ರೊಳಗೆ ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ: 8095991105, 9008284192 ಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.