ಇಂದು ಮಧ್ಯರಾತ್ರಿಯಿಂದ BMTC ಹೆಚ್ಚುವರಿ ಬಸ್ ಸೇವೆ.. ನಾಳೆ ಬೆಂಗಳೂರು ಬಂದ್..

ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್​ ಪ್ರಯಾಣದಶಕ್ತಿ ಯೋಜನೆಯನ್ನು ಖಾಸಗಿ ಬಸ್​ಗಳಿಗೂ ವಿಸ್ತರಣೆ ಮಾಡಬೇಕು ಹಾಗೂ ರಸ್ತೆ ತೆರಿಗೆ ರದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆಗಳ ಒಕ್ಕೂಟ ಸೋಮವಾರ ಬೆಂಗಳೂರು ಬಂದ್ ಕರೆ ನೀಡಿದೆ. ಸೋಮವಾರ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೌಲಭ್ಯ ಇರಲಿದೆ. . ನಾಳೆ ನಡೆಯುತ್ತಿರುವ ಬೆಂಗಳೂರು ಬಂದ್​​ಗೆ ಆಟೋ, ಖಾಸಗಿ ಬಸ್, ಕ್ಯಾಬ್ ಸೇರಿದಂತೆ ಪ್ರಯಾಣಿಕ ಆಧಾರಿತ ಸೇವೆಯಲ್ಲಿ […]

ವಿಯೆಟ್ನಾಂಗೆ ತೆರಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ನವದೆಹಲಿ : ಜಿ20 ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ವಿಯೆಟ್ನಾಂ ಪ್ರವಾಸ ಕೈಗೊಂಡರು. ದ್ವಿಪಕ್ಷೀಯ ಮಾತುಕತೆ ವೇಳೆ ಭಾರತ ಮತ್ತು ಯುಎಸ್ ನಡುವೆ ಮತ್ತಷ್ಟು ಬಾಂಧವ್ಯ ವೃದ್ಧಿಸಲು ಆರ್ಥಿಕ, ಸಾರ್ವಜನಿಕ ಸಂಪರ್ಕ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಗಿತ್ತು. ಭಾರತ ಮತ್ತು ಯುಎಸ್ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಉಭಯ ದೇಶಗಳ ನಾಯಕರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಒಳಗೊಳ್ಳುವಿಕೆ ಸೇರಿದಂತೆ ಎಲ್ಲಾ ನಾಗರಿಕರಿಗೆ ಸಮಾನ […]

ಬ್ರೆಜಿಲ್​ ಅಧ್ಯಕ್ಷ : ‘ಆರ್​ಆರ್​ಆರ್​ ನನ್ನ ಮೆಚ್ಚಿನ ಚಿತ್ರ’ 

ಇದೀಗ ಬ್ರೇಜಿಲ್​ ಅಧ್ಯಕ್ಷ ಲೂಯಿಜ್​​ ಇನಾಸಿಯೋ ಲುಲಾ ಡಾ ಸಿಲ್ವಾ (Luiz Inácio Lula da Silva) ಸಿನಿಮಾ ಕುರಿತು ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಂಭೆ​ಯಲ್ಲಿ ಭಾಗಿಯಾಗಿರುವ ಬ್ರೆಜಿಲ್​​ ಅಧ್ಯಕ್ಷರು ಆರ್​ಆರ್​ಆರ್​ ವಿಷಯ ಪ್ರಸ್ತಾಪಿಸಿದ್ದಾರೆ. ಇದು ನನ್ನ ಮೆಚ್ಚಿನ ಭಾರತೀಯ ಸಿನಿಮಾ. ಚಿತ್ರ ಅದ್ಭುತವಾಗಿದೆ ಎಂದು ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ಸಿನಿ ಗಣ್ಯರು ಮಾತ್ರವಲ್ಲದೇ ಕ್ರೀಡಾಪಟುಗಳು, ರಾಜಕಾರಣಿಗಳೂ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಗಣ್ಯರು ಆರ್​ಆರ್​ಆರ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ‘RRR’…ವಿಶೇಷ ಪರಿಚಯ ಬೇಕಿಲ್ಲ. ಭಾರತ ಮಾತ್ರವಲ್ಲದೇ ಜಾಗತಿಕ […]

ವಿಶ್ವದ ನಂ.1 ಆಟಗಾರ್ತಿ ಸೋಲಿಸಿ , ತವರು ಯುಎಸ್ ಓಪನ್ 2023ರ ಪ್ರಶಸ್ತಿ ಮುಡಿಗೇರಿಸಿ ಕೊಂಡ ಕೊಕೊ ಗೌಫ್

ನ್ಯೂಯಾರ್ಕ್: ಅಮೆರಿಕದ ಹದಿಹರೆಯದ ಆಟಗಾರ್ತಿ ಕೊಕೊ ಗೌಫ್ ವಿಶ್ವದ ನಂ.1 ಆಟಗಾರ್ತಿ ಅರೀನಾ ಸಬಲೆಂಕಾ ಅವರನ್ನು ಸೋಲಿಸಿ ಯುಎಸ್ ಓಪನ್​ ಅನ್ನು ತವರು ನೆಲದಲ್ಲಿ ಗೆದ್ದುಕೊಂಡರು.ಕೊಕೊ ಗೌಫ್ ಯುಎಸ್ ಓಪನ್ 2023ರ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಟೀನೇಜ್​ನಲ್ಲಿ ಸೆರೆನಾ ವಿಲಿಯಮ್ಸ್​​ ನಂತರ ತವರು ಪ್ರಶಸ್ತಿ ಗೆದ್ದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ 19 ವರ್ಷ ವಯಸ್ಸಿನ ಕೊಕೊ ಗೌಫ್ ಟೀನೇಜ್​ನಲ್ಲಿ ಪ್ರಶಸ್ತಿಗೆ ಗೆದ್ದ 10ನೇ ಆಟಗಾರ್ತಿ ಆಗಿದ್ದಾರೆ. ಸೆರೆನಾ ವಿಲಿಯಮ್ಸ್ 1999 ರಲ್ಲಿ 17 ವರ್ಷ ವಯಸ್ಸಿನವರಾಗಿದ್ದಾಗ […]

ಇಂಡೋನೇಷ್ಯಾ ಮಾಸ್ಟರ್ಸ್ ಪ್ರಶಸ್ತಿಗೆ ಭಾಜನ : ಕಿರಣ್ ಜಾರ್ಜ್..

ಜಕಾರ್ತ (ಇಂಡೋನೇಷ್ಯಾ): ಭಾರತದ ಶಟ್ಲರ್ ಕಿರಣ್ ಜಾರ್ಜ್ ಅವರು ಭಾನುವಾರ ಇಂಡೋನೇಷ್ಯಾ ಮಾಸ್ಟರ್ಸ್ 2023 ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.ಇಂಡೋನೇಷ್ಯಾ ಮಾಸ್ಟರ್ಸ್ 2023 ರ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಭಾರತದ ಶಟ್ಲರ್ ಕಿರಣ್ ಜಾರ್ಜ್ ಗೆದ್ದಿದ್ದಾರೆ . ಜಪಾನ್‌ನ ವಿಶ್ವದ ನಂ 82 ನೇ ಶ್ರೇಯಾಂಕದ ಕೂ ತಕಾಹಶಿ ಅವರನ್ನು 21-19, 22-20 ರಿಂದ ಸೋಲಿಸಿದ ಕಿರಣ್ ಜಾರ್ಜ್ ತಮ್ಮ ಎರಡನೇ ಬಿಡಬ್ಲ್ಯೂಎಫ್​ ವರ್ಲ್ಡ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಪಡೆದರು. ಜಾರ್ಜ್ ಕಳೆದ […]