ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಇಲಾಖಾ ತನಿಖೆಗೆ ಆದೇಶ ನೀಡಿದ ಸರ್ಕಾರ

ಬೆಂಗಳೂರು: 2018-19ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸ್ಪಂದಿಸಿ ಸರ್ಕಾರ ನಿರ್ಣಾಯಕ ಕ್ರಮ ಕೈಗೊಂಡಿದೆ. ಮೈಸೂರು ಡಿಸಿ ನಿವಾಸದ ನವೀಕರಣ ಮತ್ತು ಬಟ್ಟೆ ಮತ್ತು ಬ್ಯಾಗ್‌ಗಳ ಖರೀದಿಯಲ್ಲಿ ನಡೆದಿರುವ ಅಕ್ರಮದ ಆರೋಪದ ಬಗ್ಗೆ ತನಿಖೆ ನಡೆಸಲು ಅಧಿಕೃತ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಈ ಆರೋಪಗಳ ತನಿಖೆಯು ನವೆಂಬರ್ 24, 2022 ರಲ್ಲಿ ಪ್ರಾರಂಭವಾಗಿದ್ದು, ಪ್ರಾಥಮಿಕ ವಿಚಾರಣೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಪೂರ್ವಭಾವಿ ತನಿಖೆಯ […]
ಬಹು ನಿರೀಕ್ಷಿತ ಕೊಂಕಣಿ ಚಲನಚಿತ್ರ ‘ಅಸ್ಮಿತಾಯ್’ ಸೆಪ್ಟೆಂಬರ್ 15 ರಂದು ತೆರೆಗೆ

ಮಂಗಳೂರು: ಕೊಂಕಣಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ, ಗಿನ್ನೆಸ್ ದಾಖಲೆ ಬರೆದ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಸ್ಮಿತಾಯ್ ಚಲನಚಿತ್ರವನ್ನು ನಿರ್ಮಿಸಿದ್ದು ಈ ಸಿನೆಮಾವು ಸೆಪ್ಟೆಂಬರ್ 15 ರಂದು ತೆರೆ ಕಾಣಲಿದೆ. ಈ ಬಗ್ಗೆ ಚಿತ್ರತಂಡವು ಗುರುವಾರದಂದು ನಗರದ ಕೆನರಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಚಿತ್ರದ ಬಗ್ಗೆ ಮಾಹಿತಿ ನೀಡಿದ ತಂಡವು, ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ […]
ಕುಂದಾಪುರ: ತಾಲೂಕು ಆರೋಗ್ಯ ಕೇಂದ್ರದಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಕಾರ್ಯಾಗಾರ

ಕುಂದಾಪುರ: ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಮತ್ತು ಸೇವಾ ಭಾರತಿ ಇವರ ವತಿಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕುಂದಾಪುರ ತಾಲೂಕು ಆರೋಗ್ಯ ಕೇಂದ್ರದಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಕಾರ್ಯಾಗಾರವು ಸೆ. 01 ರಂದು ನಡೆಯಿತು. ದಿವ್ಯಾಂಗ ರಕ್ಷಣಾ ಸಮಿತಿಯ ಮ್ಯಾನೇಜರ್ ಅಖಿಲೇಶ್ ಎ. ಬೆನ್ನುಹುರಿ ಅಪಘಾತದ ಕಾರಣ, ಪರಿಣಾಮ ಹಾಗೂ ದ್ವಿತಿಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಶ್ರೀಮತಿ ಶೋಭಾ, ಡಾ. ಅಂಜಲಿ, ಸೇವಾ ಭಾರತಿಯ ಕ್ಷೇತ್ರ ಸಂಯೋಜಕ […]
ಸೀ ಫೋಕ್ ಅವತಾರದಲ್ಲಿ ಮಿಂಚಿದ ರವಿ ಕಟಪಾಡಿ

ಉಡುಪಿ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಹಗಲು ವೇಷ ಧರಿಸಿರುವ ರವಿ ಕಟಪಾಡಿ ಸಮುದ್ರ ಜೀವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೀತಿ ವೇಷ ಧರಿಸಿ ಅವರು ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಾ ಬಂದಿದ್ದಾರೆ. ಕಳೆದ ಎಂಟು ವರ್ಷಗಳಿಂದ ರವಿ ಕಟಪಾಡಿ ಈ ಸಂಪ್ರದಾಯವನ್ನು ನಿಷ್ಠೆಯಿಂದ ಮುಂದುವರೆಸಿಕೊಂಡು ಬಂದಿದ್ದು ಇದುವರೆಗೂ 90 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ ಮತ್ತು ತಮ್ಮ ನಿಸ್ವಾರ್ಥ ಪ್ರಯತ್ನದ ಮೂಲಕ ಅಗತ್ಯವಿರುವ 65 ಕ್ಕೂ ಹೆಚ್ಚು ಬಡ […]
ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಹುಲಿವೇಷ ಮತ್ತು ಜಾನಪದ ತಂಡಗಳ ಸ್ಪರ್ಧೆ ಉದ್ಘಾಟನೆ

ಉಡುಪಿ: ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ರಥಬೀದಿಯ ಉತ್ಸವ ಗುತ್ತಿನ ಶೀರೂರು ಮಠದ ವೇದಿಕೆಯಲ್ಲಿ ಹುಲಿವೇಷ ಮತ್ತು ಜಾನಪದ ತಂಡಗಳ ಸ್ಪರ್ಧೆಯನ್ನು ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶೀರೂರು ಮಠದ ದಿವಾನರಾದ ವಿದ್ವಾನ್ ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು. ಕೃಷ್ಣ ಮಠದ ರಥಬೀದಿಯಲ್ಲಿ ವಿವಿಧ ವೇಷಗಳು ಜನರ ಮನರಂಜಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೋಬಿ ಚಿತ್ರದ ವೇಷವು ಗಮನ ಸೆಳೆಯಿತು.