ಕನಕದಾಸರ ಭಕ್ತಿ ಸಾರದಂತೆ ಎಲ್ಲರೂ ಒಂದೇ ಕುಲ ಎಂಬ ಭಾವನೆಯಿಂದ ಬಾಳಬೇಕು ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಇಲ್ಲಿನ ಕನಕನ ಕಿಂಡಿಯಿಂದಾಗಿ ಉಡುಪಿ ಜಿಲ್ಲೆಯು ವಿಶ್ವವ್ಯಾಪಿ ಹೆಸರುವಾಸಿಯಾಗಿದೆ. ದಯೆಯೇ ಧರ್ಮದ ಮೂಲ. ಧರ್ಮವನ್ನು ದಯೆಯ ಮೂಲಕ ಹುಡುಕಬೇಕು. ಧರ್ಮವನ್ನು ರಕ್ಷಣೆ ಮಾಡುವ ಕೆಲಸ ನಮ್ಮಿಂದಾಗಬೇಕು ಕನಕದಾಸರ ಕೀರ್ತನೆಯಲ್ಲಿರುವ ಸಾರದಂತೆ ಸಮಾಜದಲ್ಲಿ ನಾಗರೀಕರು ಕುಲ-ಕುಲವೆಂದು ಹೊಡೆದಾಡದೇ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿ ಬಾಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಬುಧವಾರ ನಗರದ ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ […]

ಸೆ.8 ರಂದು ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

ಉಡುಪಿ: ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯು ಎಂಜಿಎಂ ಕಾಲೇಜು ಎದುರುಗಡೆ ಇರುವ ಶ್ರೀ ಗಣೇಶ್ ಬಿಲ್ಡಿಂಗ್ ನ ನೆಲಮಹಡಿಯಲ್ಲಿ ಸೆ.8 ರಂದು ಸಂಜೆ 4 ಗಂಟೆಗೆ ಉದ್ಘಾಟನೆಯಾಗಲಿದ್ದು, ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಲ್ಯಾಣಪುರ ಮಿಲಾಗ್ರೀಸ್ ಕೆಥೆಡ್ರಲ್ ಚರ್ಚಿನ ಧರ್ಮಗುರು ಫಾ. ವಲೇರಿಯನ್ ಮೆಂಡೋನ್ಸಾ ಆಶೀರ್ವಚನ ನೀಡಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಚೇರಿಯನ್ನು, ಅಮ್ಮುಂಜೆ ಸೈಂಟ್ ಅಂಟೋನಿ ಆರ್ಥೊಡಾಕ್ಸ್ ಸಿರಿಯನ್ ಚರ್ಚಿನ ಫಾ. ಲಾರೆನ್ಸ್ ಡೇವಿಡ್ […]

ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು: ಶಿಕ್ಷಕ ವೃತ್ತಿಎಂಬುದು ಅತೀ ಶ್ರೇಷ್ಟವಾದ ವೃತ್ತಿಯಾಗಿದ್ದು, ಪ್ರತಿಯೊಬ್ಬ ಶಿಕ್ಷಕನೂ ಆಯಾಯ ವಿಷಯಗಳಲ್ಲಿ ಜ್ಞಾನವನ್ನು ಹೊಂದಿದ್ದು, ತರಗತಿಗೆ ಪೂರ್ವ ಸಿದ್ಧತೆಯೊಂದಿಗೆ ಹೋಗಬೇಕು. ಅಂತಹ ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗುತ್ತಾರೆ. ಅಂತಹ ಗುರುಗಳೇ ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳಾಗುತ್ತಾರೆ. ಶಿಕ್ಷಕರು ಕೇವಲ ಪಾಠ ಮಾಡುವುದರಿಂದ ಆದರ್ಶ ವ್ಯಕ್ತಿಗಳಾಗುವುದಿಲ್ಲ, ವಿದ್ಯಾರ್ಥಿಗಳೊಂದಿಗಿನ ಒಡನಾಟ, ಆತ್ಮೀಯತೆ, ವಿಷಯವನ್ನು ಮನದಟ್ಟು ಮಾಡುವ ವಿಧಾನ, ವಿಷಯ ಜ್ಞಾನ ಇದರಿಂದ ಶಿಕ್ಷಕರು ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಪ್ರೊ.ಬಿ.ರಾಜಗೋಪಾಲ್ ಭಟ್‌ ಹೇಳಿದರು. ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, […]

ಹೆಬ್ರಿ: ಸಾಹಿತಿ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಸೀಮಾ ಕಾಮತ್ ಕಾಕ೯ಳ ಇವರಿಗೆ ಚಾಣಕ್ಯ ಅತ್ಯುತ್ತಮ ಶಿಕ್ಷಕ- 2023 ಪ್ರಶಸ್ತಿ

ಹೆಬ್ರಿ: ಸಮಾಜದ ಭದ್ರ ಬುನಾದಿಗೆ ಶಿಕ್ಷಣ ಕಾರಣವಾದರೆ, ಶಿಕ್ಷಕರು ಈ ಸಮಾಜದ ಆಸ್ತಿಯಾಗಿದ್ದು ವಿದ್ಯಾರ್ಥಿಯ ಸರ್ವತೋಮುಖ ಬದಲಾವಣೆಯ ಹರಿಕಾರರಾಗಿದ್ದಾರೆ. ನಾಲ್ಕು ಗೋಡೆಗಳ ಒಳಗೆ ಸೀಮಿತವಾದ ಪಠ್ಯ ಕ್ರಮ ಹೊರತು ಪಡಿಸಿ, ವಿಭಿನ್ನವಾಗಿ ಯೋಚಿಸುವ ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಅವಿಭಜಿತ ಜಿಲ್ಲೆಯ ಜವಳಿ ವತ೯ಕರ ಸಂಘದ ಅಧ್ಯಕ್ಷ ಯೋಗೀಶ್ ಭಟ್ ಹೇಳಿದರು. ಅವರು ಸೆ.5ರಂದು ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಹೆಸರಾಂತ ಸಾಹಿತಿ […]