ಮಧ್ಯರಾತ್ರಿ ಹೊತ್ತು ಕೃಷ್ಣಮಠಕ್ಕೆ ಭೇಟಿ ನೀಡಿ ಕೃಷ್ಣ ಕೃಪೆಗೆ ಪಾತ್ರರಾದ ಯು.ಟಿ.ಖಾದರ್

ಉಡುಪಿ: ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರು ಜನ್ಮಾಷ್ಟಮಿಯ ಸಂದರ್ಭದಲ್ಲಿ ಮಧ್ಯರಾತ್ರಿಯ ಹೊತ್ತು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಜಗದ್ಗುರುವಿನ ಕೃಪೆಗೆ ಪಾತ್ರರಾಗಿದ್ದಾರೆ. ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಮಂಗಳೂರಿನಲ್ಲಿ ವಿವಿಧೆಡೆ ಕೃಷ್ಣಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡುಪಿಯ ಕಡಿಯಾಳಿಯಲ್ಲಿ ಪ್ರಸಾದ್ ಕಾಂಚನ್ ನೇತೃತ್ವದಲ್ಲಿ ಶಶಿರಾಜ್ ಕುಂದರ್ ಮತ್ತು ತಂಡದಿಂದ ಟೈಗರ್ ಫ್ರೆಂಡ್ಸ್ ನ ಹುಲಿವೇಷ ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅವರು ಹಿತೈಷಿಗಳ ಕೋರಿಕೆ ಮೇರೆಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. […]
ಪುತ್ತೂರು: ಗ್ರಾ.ಪಂ ಮಾಜಿ ಸದಸ್ಯನ ಮನೆಯಲ್ಲಿ ದರೋಡೆ; ಮನೆ ಸದಸ್ಯರನ್ನು ಕಟ್ಟಿಹಾಕಿ ನಗ ದೋಚಿದ ದರೋಡೆಕೋರರು

ಪುತ್ತೂರು: ಗ್ರಾಮಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಮನೆಗೆ ದರೋಡೆಕೋರರು ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ. ಬಡಗನ್ನೂರು ಗ್ರಾಮಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಲ್ಲಿ ದರೋಡೆ ನಡೆದಿದ್ದು ಸೆಪ್ಟೆಂಬರ್ 7 ರ ಮುಂಜಾನೆ ಸುಮಾರು 2 ಗಂಟೆಗೆ ಮನೆಯ ಬಾಗಿಲು ಒಡೆದು ನುಗ್ಗಿದ ಸುಮಾರು 8 ಮಂದಿ ಮುಸುಕುಧಾರಿ ದರೋಡೆಕೋರರ ತಂಡವು ಗುರುಪ್ರಸಾದ್ ಅವರನ್ನು ಕಟ್ಟಿಹಾಕಿ, […]
ಆದಿತ್ಯ ಎಲ್ 1 ನಿಂದ ಬಂತು ಭೂಮಿ ಮತ್ತು ಚಂದ್ರನ ಮೊದಲ ಚಿತ್ರ!!

ಬೆಂಗಳೂರು: ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಶೋಧಕ ಆದಿತ್ಯ-ಎಲ್1 (Aditya L1) ಲಾಗ್ರೇಂಜ್ ಪಾಯಿಂಟ್ 1 ಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಭೂಮಿ ಮತ್ತು ಚಂದ್ರನ ಚಿತ್ರ ಮತ್ತು ತನ್ನ ಸೆಲ್ಫಿ ತೆಗೆದುಕೊಂಡಿದೆ! ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ (ISRO) ಪ್ರಕಾರ, ಆದಿತ್ಯ-L1 ಆನ್‌ಬೋರ್ಡ್‌ನಲ್ಲಿರುವ ಕ್ಯಾಮೆರಾ ತನ್ನ ಅತಿದೊಡ್ಡ ಪೇಲೋಡ್, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಮತ್ತು SUIT ಉಪಕರಣಗಳ ಹಾಗೂ ಭೂಮಿ ಮತ್ತು ಚಂದ್ರನ ಚಿತ್ರವನ್ನು ಸೆಪ್ಟೆಂಬರ್ 4 ರಂದು ಸೆರೆಹಿಡಿದಿದೆ. Aditya-L1 […]
Motorola Moto G54 ಭಾರತದಲ್ಲಿ ಬಿಡುಗಡೆ: 14,999 ರೂ ಬೆಲೆಯಿಂದ ಪ್ರಾರಂಭ

ಚೀನೀ ಮಾರುಕಟ್ಟೆಗೆ ತನ್ನ ಹೊಸ ಮಾದರಿಯನ್ನು ಅನಾವರಣಗೊಳಿಸಿದ ಬಳಿಕ ಮೊಟೊರೊಲಾ ಭಾರತದಲ್ಲಿ ಹೊಸ Moto G54 ಅನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್‌ಗಳು ಒಂದೇ ಹೆಸರನ್ನು ಹೊಂದಿದ್ದರೂ, ವಿಶೇಣಗಳಿಗೆ ಬಂದಾಗ ಅವು ಪರಸ್ಪರ ಭಿನ್ನವಾಗಿವೆ. Moto G ಸರಣಿಯ ಫೋನ್‌ಗಳು ಕೈಗೆಟುಕುವ ಬೆಲೆಯಲ್ಲಿ ಯೋಗ್ಯವಾದ ವೈಶಿಷ್ಟ್ಯಗಳನ್ನು ನೀಡುತ್ತವೆ ಎಂದು ತಿಳಿದುಬಂದಿದೆ ಮತ್ತು ಹೊಸ Moto G54 ಸಹ ಅದೇ ರೀತಿ ಮಾಡುವುದಾಗಿ ಹೇಳಿಕೊಂಡಿದೆ. ಭಾರತದಲ್ಲಿ Motorola Moto G54 ಬೆಲೆ ಭಾರತದಲ್ಲಿ Motorola Moto G54 ಬೆಲೆಯು ಭಾರತದಲ್ಲಿ […]
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕರ ದಿನಾಚರಣೆ

ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ, ಲಯನ್ಸ್ ಜಿಲ್ಲೆ 317 ಸಿ ಮತ್ತು ಲಿಯೋ ಕ್ಲಬ್ 317 ಸಿ, ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಉಡುಪಿ ಇಂದ್ರಾಳಿ, ಆಶಾ ನಿಲಯ ವಿಶೇಷ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಕೇಂದ್ರ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘ ಉಡುಪಿ ಜಿಲ್ಲೆಇದರ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಮಂಗಳವಾರದಂದು ಆಶಾನಿಲಯದಲ್ಲಿ ಆಚರಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ದೀಪ ಬೆಳಗಿಸಿ ಚಾಲನೆ […]