ಸಿಡ್ನಿಯಲ್ಲಿ ಪುತ್ತಿಗೆ ಮಠದ ವತಿಯಿಂದ ತಲೆ ಎತ್ತಲಿರುವ ಅತಿ ದೊಡ್ಡ ವೆಂಕಟ ಕೃಷ್ಣ ದೇವಸ್ಥಾನದ ಕಾಮಗಾರಿಯ ಭೂಮಿಪೂಜೆ

ಸಿಡ್ನಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೆಂಕಟ ಕೃಷ್ಣ ದೇವಸ್ಥಾನವನ್ನು ನಿರ್ಮಿಸಲಿದ್ದು, ದೇವಾಲಯದ ಭೂಮಿ ಪೂಜೆ ಇತ್ತೀಚೆಗೆ ನಡೆಯಿತು. ಮಂಗಳವಾರ ಸಿಡ್ನಿಯಲ್ಲಿ ‘ದಿ ಹ್ಯಾನ್ಸ್ ಇಂಡಿಯಾ’ದೊಂದಿಗೆ ಮಾತನಾಡಿದ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಸಿಡ್ನಿಯ ಕೃಷ್ಣ ಭಕ್ತರು ಶ್ರೀ ವೆಂಕಟ ಕೃಷ್ಣ ದೇವಸ್ಥಾನದ ಭೂಮಿಪೂಜೆಯ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಪ್ರಸ್ತಾವಿತ ದೇವಾಲಯವನ್ನು 4738 ಚದರ ಮೀಟರ್‌ನಲ್ಲಿ ನಿರ್ಮಿಸಲಾಗುವುದು. ಸಿಡ್ನಿ ಮತ್ತು ಆಸ್ಟ್ರೇಲಿಯಾದಲ್ಲಿ ವಾಸಿಸುವ ಎಲ್ಲಾ ಹಿಂದೂಗಳಿಗೆ ದೊಡ್ಡ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಇದು […]
ಶ್ರೀ ವೆಂಕಟರಮಣ ಪ.ಪೂ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ ಹಾಗೂ ಶಿಕ್ಷಕರ ದಿನ ಆಚರಣೆ

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 05 ರಂದು ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮೆರೆದಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಗ್ರಷ್ಮಿಶ್ ಕುಂದರ್ ಮತ್ತು ಮೇಘನಾ ಕುಂದಾಪುರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸುಂದರ ಕಾರ್ಯಕ್ರಮದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿ ಅನುಷಾ ಪ್ರಭು ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ರಾಗಿಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೆಂಕಟರಮಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ್ […]
ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ರೂ 2.25 ಕೋಟಿ ಲಾಭ, ಶೇ. 13 ಡಿವಿಡೆಂಡ್ ಘೋಷಣೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಪರ್ಕಳ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷಅಶೋಕ್ ಕಾಮತ್ ಅಧ್ಯಕ್ಷತೆಯಲ್ಲಿ ಜರಗಿತು. 2022-23ರ ಅಂತ್ಯಕ್ಕೆ ಸಂಘದ ಪಾಲು ಬಂಡವಾಳ ರೂ 1.64 ಕೋಟಿ, ನಿಧಿಗಳು ರೂ 9.82 ಕೋಟಿ, ಠೇವಣಿ ರೂ 102.35 ಕೋಟಿ, ಸಾಲಗಳು ರೂ 67.48 ಕೋಟಿ, ನಿವ್ವಳ ಲಾಭ ರೂ 2.25 ಕೋಟಿ ಗಳಿಸಿ ಶೇ 13% ಪಾಲು ಲಾಭ ಘೋಷಿಸಿ […]
ಬ್ರಹ್ಮಾವರ: ಸೆ.10 ರಂದು ಬೇಕರಿ ಖಾದ್ಯ ತಿನಿಸು ತಯಾರಕ ಹಾಗೂ ಮಾರಾಟಗಾರರಿಗಾಗಿ ಮಾಹಿತಿ ಕಾರ್ಯಾಗಾರ

ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ಮತ್ತು ಇಂಡಿಯನ್ ಬೇಕರಿ ಫೆಡರೇಶನ್, ಇದರ ಸಹಭಾಗಿತ್ವದಲ್ಲಿ ಬೇಕರ್ಸ್ ಮೀಟ್, ಎಂಬ ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವು ಸೆ.10 ರಂದು ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿರುವುದು. ತಯಾರಿಕ ಘಟಕಗಳು ಮತ್ತು ಮಾರಾಟ ಮಳಿಗೆಗಳ ಸ್ವಚ್ಛತೆ, ಸರಕಾರದ ನಿಯಮಾವಳಿಗಳ ಅನುಸಾರ ಉದ್ಯಮವನ್ನು ನಡೆಸುವುದರ ಬಗ್ಗೆ ಮಾಹಿತಿ ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಕಾರ್ಯಾಗಾರ ನಡೆಯಲಿದೆ. ಡಾಕ್ಟರ್ ಪ್ರೇಮಾನಂದ ಕೆ, […]
ರಾಜ್ಯಮಟ್ಟದ 6ನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ: ಮನೋಜ್ ಕಡಬ ಇವರಿಗೆ ಅಮೃತ ಸಮ್ಮಾನ್ ಪ್ರಶಸ್ತಿ

ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 5 ಮಂಗಳವಾರದಂದು ಅಂಬಲಪಾಡಿಯಲ್ಲಿ ನಡೆದ ಶಿಕ್ಷಕ ಸಾಹಿತಿಗಳ 6ನೇ ಸಮ್ಮೇಳನ ಸಂಭ್ರಮ ಕಾರ್ಯಕ್ರಮದಲ್ಲಿ ಇತರ ಸಾಧಕರೊಂದಿಗೆ ಮನೋಜ್ ಕಡಬ ಅವರು ರಾಜ್ಯಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು. ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ನಿರ್ದೇಶಕ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತುದಾರರಾದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ […]