ರೋಟರಿ ಮಣಿಪಾಲ ಹಿಲ್ಸ್ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ
ಮಣಿಪಾಲ: ರೋಟರಿ ಮಣಿಪಾಲ ಹಿಲ್ಸ್ ನ ಪ್ರಾಯೋಜಕತ್ವದಲ್ಲಿರುವ ರಾಜೀವನಗರ, ನೇತಾಜಿನಗರ, ಪ್ರಗತಿನಗರ, ಆದರ್ಶನಗರ, ಮಂಚಿಕೋಡಿ, ಮೂಡುಅಲೆವೂರು ರೋಟರಿ ಸಮುದಾಯ ದಳಗಳ ವ್ಯಾಪ್ತಿಯಲ್ಲಿಯ ಗ್ರಾಮೀಣ ಮಕ್ಕಳಿಗಾಗಿ ಏರ್ಪಡಿಸಲಾದ ಮುದ್ದುಕೃಷ್ಣ ಸ್ಪರ್ಧೆಯು ಸೆ.4ಸೋಮವಾರದಂದು ಮಣ್ಣಪಳ್ಳದಲ್ಲಿರುವ ರೋಟರಿ ಹಾಲಿನಲ್ಲಿ ಜರುಗಿತು. ರೋಟರಿ ಜಿಲ್ಲಾ ಉಪರಾಜ್ಯಪಾಲ ರೊ. ಡಾ ಕೆಂಪರಾಜ್ ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಸೇನಾನಿ ರೊ. ತಾರಾ ಶೆಟ್ಟಿಯವರು ಶುಭ ಹಾರೈಸಿದರು. ಮೂರು ವಯೋಮಿತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 67 ಮಕ್ಕಳು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಲಯ ತರಬೇತುದಾರ […]
ಮಂಜೇಶ್ವರ: ಸ್ನೇಹಾಲಯ ರಿಹಾಬಿಲಿಟೇಶನ್ ಸೆಂಟರ್ ನಲ್ಲಿ ಸಂಭ್ರಮದ ಓಣಂ ಆಚರಣೆ
ಮಂಜೇಶ್ವರ: ಸ್ನೇಹಾಲಯ ಸೈಕೋ-ಸೋಷಿಯಲ್ ರಿಹಾಬಿಲಿಟೇಶನ್ ಸೆಂಟರ್ ಫಾರ್ ಮೆನ್ ಎಂಡ್ ವುಮೆನ್ ಇಲ್ಲಿ ದಿ ಕಲರ್ ಓಣಂ ಅನ್ನು ಉತ್ಸಾಹ ಮತ್ತು ವಿಜ್ರಂಭಣೆಯಿಂದ ಆಚರಿಸಲಾಯಿತು. ಕೇರಳದ ಸುಗ್ಗಿಯ ಹಬ್ಬವಾದ ಓಣಂ ಅನ್ನು ದಕ್ಷಿಣ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಸ್ನೇಹಾಲಯದ ನಿವಾಸಿಗಳು ಮತ್ತು ಸಿಬ್ಬಂದಿಗಳು ಒಗ್ಗೂಡಿ ಭಾಗವಹಿಸಿದ ಕಾರಣ ಎಲ್ಲರಿಗೂ ಒಂದು ಅವಿಸ್ಮರಣೀಯ ಅನುಭವವನ್ನು ನೀಡಿತು. ಪುನರ್ವಸತಿ ಕೇಂದ್ರದ ಆವರಣವನ್ನು ಸಾಂಪ್ರದಾಯಿಕ ಓಣಂ ಅಲಂಕಾರದಿಂದ ಅಲಂಕರಿಸಲಾಗಿತ್ತು, ಇದರಲ್ಲಿ ಹೂವಿನ ರಂಗೋಲಿಗಳು (ಪೂಕಳಂಗಳು) ಮತ್ತು ವರ್ಣರಂಜಿತ ಹೂವಿನ ಅಲಂಕಾರಗಳು ಸೇರಿದ್ದವು. […]
ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಮನೋಜ್ ಕಡಬ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ
ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅಂಬಲಪಾಡಿ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ 5 ಮಂಗಳವಾರದಂದು ಅಂಬಲಪಾಡಿಯಲ್ಲಿ ನಡೆಯಲಿರುವ ಶಿಕ್ಷಕ ಸಾಹಿತಿಗಳ ಆರನೇಯ ಸಮ್ಮೇಳನ ಸಂಭ್ರಮ ಕಾರ್ಯಕ್ರಮದಲ್ಲಿ ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ನಿರ್ದೇಶಕ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತುದಾರ ಮನೋಜ್ ಕಡಬ ಇವರು ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನವನ್ನು ಆರಂಭಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ […]
ಹದಿಹರೆಯದ ದೈಹಿಕ-ಮಾನಸಿಕ ಬದಲಾವಣೆಗಳ ಬಗ್ಗೆ ಕೀಳರಿಮೆ ಸಲ್ಲದು: ಡಾ. ಅಪೇಕ್ಷಾ ಡಿ ರಾವ್
ಉಡುಪಿ: ಹದಿಹರೆಯ ಒಬ್ಬ ವ್ಯಕ್ತಿಯ ಜೀವನದ ಸಂಕ್ರಮಣ ಕಾಲ. ಈ ಸಂದರ್ಭದಲ್ಲಿ ಜೀವಜಗತ್ತಿನ ಎಲ್ಲ ಜೀವಿಗಳಲ್ಲಿ ಆಗುವಂತೆ ಮನುಷ್ಯನಲ್ಲಿಯೂ ಕೂಡ ಪ್ರಾಕೃತಿಕ ಬದಲಾವಣೆಗಳು ಆಗುವುದು ಸಹಜ. ಈ ವಿಷಯದಲ್ಲಿ ಕೀಳರಿಮೆ, ಸಂಕೋಚ, ಮುಜುಗರಪಡುವ ಅಗತ್ಯ ಇಲ್ಲ. ಈ ಬದಲಾವಣೆಯನ್ನು ಸಹಜ ಎಂಬಂತೆ ತಿಳಿದು ದೈಹಿಕ, ಮಾನಸಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಡೆ ಗಮನ ಹರಿಸಿದರೆ ಸಾಕು ಎಂದು ಡಾ| ಅಪೇಕ್ಷಾ ಡಿ ರಾವ್ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ […]
ದೊಡ್ಡಣ್ಣಗುಡ್ಡೆ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಮರ್ಧಾತ್ಮಕ ಕಾರ್ಯಕ್ರಮಗಳನ್ನು ಶಾಲಾ ಸಂಸ್ಥಾಪಕ ರಮಾನಂದ ಗುರೂಜಿಯವರು ಉದ್ಘಾಟಿಸಿದರು. ಹಲವು ಪ್ರತಿಭಾನ್ವಿತ ಶಿಕ್ಷಕರನ್ನು ಒಳಗೊಂಡ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸಂಭ್ರಮಾಚರಣೆಗೆ ಕಾರಣರಾದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಭಾವನೆಗಳ ಕೊಂಡಿ ಇದ್ದಂತೆ. ಪ್ರಾಥಮಿಕ […]