ಸಮುದಾಯ ಆರೋಗ್ಯಾಧಿಕಾರಿಗಳಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಕಾರ್ಯಾಗಾರ

ಉಡುಪಿ: ಸೇವಾಭಾರತಿ ಕನ್ಯಾಡಿ ಹಾಗೂ ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇವರ ವತಿಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತಾಲೂಕು ಆರೋಗ್ಯ ಕೇಂದ್ರದಲ್ಲಿ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ಆಗಸ್ಟ್ 28 ರಂದು ನಡೆಸಲಾಯಿತು. ದಿವ್ಯಾಂಗ ರಕ್ಷಣಾ ಸಮಿತಿಯ ಮ್ಯಾನೇಜರ್ ಅಖಿಲೇಶ್ ಎ. ಬೆನ್ನುಹುರಿ ಅಪಘಾತದ ಕಾರಣ, ಪರಿಣಾಮ ಹಾಗೂ ದ್ವಿತಿಯಾಂತರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ಅಂಜಲಿ, ನಗರಸಭಾ ಸದಸ್ಯ ವಿಜಯ ಕೊಡವೂರು, […]
ವಾಹನ ಸುರಕ್ಷತೆಯ ಹೊಸ ನಿಯಂತ್ರಕ ವಿಶೇಷಣವು ವಾಣಿಜ್ಯ ವಾಹನಗಳ ಬೆಲೆಯನ್ನು 10-12% ರಷ್ಟು ಹೆಚ್ಚಿಸಬಹುದು: ICRA

ನವದೆಹಲಿ: ಬಹು ಪ್ರಸ್ತಾವಿತ ನಿಯಂತ್ರಕ ವಿಶೇಷಣಗಳ ಅನುಷ್ಠಾನವು ವಾಣಿಜ್ಯ ವಾಹನಗಳ ಬೆಲೆಗಳನ್ನು ಶೇಕಡಾ 10-12 ರಷ್ಟು ಹೆಚ್ಚಿಸಬಹುದು ಎಂದು ರೇಟಿಂಗ್ ಏಜೆನ್ಸಿ ICRA ಸೋಮವಾರ ತಿಳಿಸಿದೆ. ಭಾರತೀಯ ವಾಣಿಜ್ಯ ವಾಹನ ಉದ್ಯಮದ ಕುರಿತಾದ ತನ್ನ ವರದಿಯಲ್ಲಿ, ICRA ದೇಶೀಯ ವಾಹನ ಉದ್ಯಮವು ಕ್ಷಿಪ್ರ ರೂಪಾಂತರಗಳಿಗೆ ಒಳಗಾಗುತ್ತಿದೆ ಎಂದು ಹೇಳಿದ್ದು, ಹೊರಸೂಸುವಿಕೆ ನಿಯಮಗಳು, ಸುರಕ್ಷತಾ ವ್ಯವಸ್ಥೆಗಳು ಮತ್ತು ಇತರ ಮಾನದಂಡಗಳನ್ನು ಜಾರಿಗೆ ತರಲು ಸರ್ಕಾರವು ಹೆಚ್ಚಿನ ಗಮನವನ್ನು ಹೊಂದಿದೆ, ಅದು ದೇಶವನ್ನು ಇತರ ಪ್ರಮುಖ ವಾಹನ ಮಾರುಕಟ್ಟೆಗಳಿಗೆ ಸರಿಸಮವಾಗಿಸುತ್ತದೆ […]
ಕುಸ್ತಿ ಪಂದ್ಯಾಟ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮೂಕಾಂಬಿಕಾ ಪದವಿ ಪೂರ್ವ ಕಾಲೇಜು ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮಹಮ್ಮದ್ ಪೈಜಾನ್ ಮತ್ತು ಲಕ್ಷ್ಮೀಶ್ ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಸಾಧನೆ ಮಾಡಿದ್ದಾರೆ. ಸ್ರವೀಶ್ ಶೆಟ್ಟಿ ಬೆಳ್ಳಿ ಪದಕ ಹಾಗೂ ಎನ್. ಆಶ್ರಯ ಕಾಮತ್ ಮತ್ತು ಪ್ರತೀಕ್ ಕಂಚಿನ ಪದಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ […]
ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆಯ ಅನಾವರಣ: ರಶ್ಮಿ ಸಿ. ಭಟ್

ಉಡುಪಿ: ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ ಮತ್ತು ಪ್ರತಿಭೆಯ ಅನಾವರಣವಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ತಮಗೆ ಲಭಿಸಿರುವ ಭಾಗವಹಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಸ್ಪರ್ಧಾತ್ಮಕ ವಾತಾವರಣದಲ್ಲಿ ಕಲಿಕೆಯೂ ಕೂಡ ವೇಗವಾಗಿ ಸಾಗುತ್ತಿರುತ್ತದೆ ಎಂದು ಉಡುಪಿ ಅಜ್ಜರಕಾಡು ವಾರ್ಡ್ ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್ ಅಭಿಪ್ರಾಯ ಪಟ್ಟರು. ಅವರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚಿಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ಸ್ ಕ್ಲಬ್ […]
ಎಲಿವೇಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಿದ ಹೋಂಡಾ ಕಾರ್ಸ್ ಇಂಡಿಯಾ: ಆರಂಭಿಕ ಬೆಲೆ 11 ಲಕ್ಷ ರೂ.ಗಳು

ಹೋಂಡಾ ಕಾರ್ಸ್ ಇಂಡಿಯಾ ಅಂತಿಮವಾಗಿ ಭಾರತದಲ್ಲಿ ಎಲಿವೇಟ್ ಎಸ್‌ಯುವಿ ಕಾರುಗಳನ್ನು ಆರಂಭಿಕ ಬೆಲೆ 11 ಲಕ್ಷ ರೂ (ಎಕ್ಸ್ ಶೋ ರೂಂ)ಗಳೊಂದಿಗೆ ಬಿಡುಗಡೆ ಮಾಡಿದೆ. ಎಲಿವೇಟ್ ಕಾರುಗಳನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ಮತ್ತು ಸಿಂಗಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಹೊಂದಬಹುದು. ಎಲಿವೇಟ್‌ನ ವಿತರಣೆಗಳು ಇಂದು ದೇಶಾದ್ಯಂತ ಪ್ರಾರಂಭವಾಗಲಿವೆ. ಎಲಿವೇಟ್ ನಾಲ್ಕು ವೇರಿಯೆಂಟ್ ನಲ್ಲಿ ಲಭ್ಯವಿದೆ – SV, V, VX, ಮತ್ತು ZX. ಏಕೈಕ 1.5-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು ಹೊಂಡಾ ಸಿಟಿ ಸೆಡಾನ್‌ನಿಂದ ಎರವಲು ಪಡೆಯಲಾಗಿದೆ. […]