ಸೆ. 5 ಮತ್ತು 6 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಸೆಪ್ಟಂಬರ್ 5 ಮತ್ತು 6 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/11 ಕೆ. ವಿ ಕಾರ್ಕಳ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಅಜೆಕಾರು ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕಡ್ತಲ, ದೊಂಡರಂಗಡಿ, ದರ್ಬುಜೆ, ಎಳ್ಳಾರೆ, ಕಾಡುಹೊಳೆ, ಗುಡ್ಡೆಯಂಗಡಿ, ಅಜೆಕಾರು ಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಪ್ಟಂಬರ್ 5 ರಂದು ಬೆಳಗ್ಗೆ 9 ರಿಂದ ಸಂಜೆ 5 […]
ತನ್ನ ಕಾರ್ಯಯೋಜನೆ ಪೂರ್ಣಗೊಳಿಸಿ ನಿದ್ದೆಗೆ ಜಾರಿದ ಪ್ರಗ್ಯಾನ್ ರೋವರ್!! ಎಚ್ಚರಕ್ಕಾಗಿ ಮುಂದಿನ ಸೂರ್ಯೋದಯದ ನಿರೀಕ್ಷೆ
ಬೆಂಗಳೂರು: ಚಂದ್ರಯಾನ-3 ರ ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ನಿದ್ರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶನಿವಾರ ಹೇಳಿದೆ. ರೋವರ್ ಅನ್ನು 14 ದಿನಗಳ ನಂತರ ಸೆಪ್ಟೆಂಬರ್ 22, 2023 ರಂದು ಎಚ್ಚರಗೊಳಿಸಲು ಬಾಹ್ಯಾಕಾಶ ಸಂಸ್ಥೆ ಆಶಿಸುತ್ತಿದೆ. ರೋವರ್ ನ ಬ್ಯಾಟರಿಗಳು ಸಂಪೂರ್ಣವಾಗಿ ಚಾರ್ಜ್ ಆಗಿದೆ ಮತ್ತು ಪೇಲೋಡ್ ಗಳನ್ನು ಆಫ್ ಮಾಡಲಾಗಿದೆ. ಇನ್ನು 14 ದಿನಗಳು ನಿದ್ದೆಯಲ್ಲಿರುವ ರೋವರ್ ಸೆಪ್ಟೆಂಬರ್ 22 ರಂದು ಎಚ್ಚರಗೊಂಡಲ್ಲಿ ಮತ್ತೊಮ್ಮೆ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಬಹುದು ಹಾಗಾಗದಿದ್ದಲ್ಲಿ […]
ಐಸಿಸಿ ಏಕದಿನ ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ BCCI: ಕೆಎಲ್ ರಾಹುಲ್ ಇನ್, ಸಂಜು ಸ್ಯಾಮ್ಸನ್ ಔಟ್
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿ ಶನಿವಾರ ತಡರಾತ್ರಿ ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ, ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯದ ಕಾರಣ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಶ್ರೀಲಂಕಾಕ್ಕೆ ತೆರಳಿ ಅಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಿ ತಂಡವನ್ನು ಆಯ್ಕೆ ಮಾಡಿದ್ದಾರೆ. […]
ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಗಣನಾಥ ಎಕ್ಕಾರು ನೇಮಕ
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಘಟಕದ ನೂತನ ಗೌರವ ಕಾರ್ಯದರ್ಶಿಯಾಗಿ ಡಾ. ಗಣನಾಥ ಎಕ್ಕಾರು ಅವರನ್ನು ನೇಮಿಸಲಾಗಿದ್ದು, ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನಟ ರವಿಶಂಕರ್ ಅವರಿಂದ ಶ್ರೀಕೃಷ್ಣ ಮಠ ಭೇಟಿ
ಉಡುಪಿ: ಬಹುಭಾಷಾ ನಟ ರವಿಶಂಕರ್ ಶ್ರೀಕೃಷ್ಣ ಮಠಕ್ಕಾಗಮಿಸಿ ದೇವರ ದರ್ಶನ ಪಡೆದುಕೊಂಡರು. ಬಳಿಕ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಉಪಸ್ಥಿತರಿದ್ದರು.