ಆದಿತ್ಯ ಎಲ್-1 ಮಿಷನ್‌ನ ಹಿಂದಿದ್ದಾರೆ ನಿಗರ್ ಶಾಜಿ ಎಂಬ ಮಹಿಳೆ! ಕೃಷಿಕ ಪರಿವಾರದಿಂದ ಇಸ್ರೋವರೆಗಿನ ಅಮೋಘ ಪಯಣ!!

ಚೆನ್ನೈ: ಆದಿತ್ಯ ಎಲ್-1 ಮಿಷನ್‌ನ ಯಶಸ್ವಿ ಉಡಾವಣೆ ನಂತರ, ತಮಿಳುನಾಡಿನ ದಕ್ಷಿಣ ಜಿಲ್ಲೆಯ ತೆಂಕಾಶಿಯ ಪ್ರತಿಷ್ಠಿತ ಮಹಿಳಾ ವಿಜ್ಞಾನಿ ನಿಗರ್ ಶಾಜಿ ಹೆಸರು ಮುನ್ನೆಲೆಗೆ ಬಂದಿದೆ. ಸೂರ್ಯನನ್ನು ಅಧ್ಯಯನ ಮಾಡಲು ಭಾರತವು ಪ್ರಾರಂಭಿಸಿದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯ ನಿರ್ದೇಶಕಿಯಾಗಿದ್ದಾರೆ ನಿಗರ್ ಶಾಜಿ. ತಮಿಳುನಾಡಿನ ಗ್ರಾಮಾಂತರ ಪ್ರದೇಶವಾದ ಸೆಂಗೊಟ್ಟೈ ಮೂಲದ ನಿಗರ್ ಶಾಜಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 1987 ರಲ್ಲಿ ಇಸ್ರೋ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಇವರು ಈಗ ಬೆಂಗಳೂರನ್ನು ತಮ್ಮ ಮನೆಯಾಗಿಸಿಕೊಂಡಿದ್ದಾರೆ. […]
ಏಷ್ಯಾಕಪ್ 2023: ಟಾಸ್ ಗೆದ್ದ ಭಾರತ; ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ

2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ ಟಾಸ್ ಗೆದ್ದಿದ್ದು ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. 4 ವರ್ಷಗಳ ಬಳಿಕ ಇತ್ತಂಡಗಳು ಏಕದಿನ ಕ್ರಿಕೆಟ್ ನಲ್ಲಿ ಮುಖಾಮುಖಿಯಾಗಿವೆ. 2019ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ತಂಡಗಳು ಎದುರುಬದುರಾಗಿದ್ದವು. ಭಾರತ ತಂಡವು ಮೂರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಬದಲಿಗೆ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿದ್ದಾರೆ. ಭಾರತದ […]
ಕೆಎಂಸಿ ಯಲ್ಲಿ 2023-24 ರ ಮೆಡ್ ಓರಿಯಂಟ್ ಎಂಬಿಬಿಎಸ್ ಬ್ಯಾಚ್ ಉದ್ಘಾಟನೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ (KMC) ಮೆಡ್‌ಓರಿಯಂಟ್ (MBBS ಬ್ಯಾಚ್ 2023-24 ರ ಓರಿಯಂಟೇಶನ್ ಪ್ರೋಗ್ರಾಂ) ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ ವೈದ್ಯರು ಮತ್ತು ನಾಯಕರ ಮಹತ್ವವನ್ನು ತಿಳಿಸಿದರು. ಅವರು ವೈದ್ಯಕೀಯ ಕೌಶಲ್ಯಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳ ಬಗ್ಗೆ ಸಮರ್ಪಣಾ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ಹೇಳಿದರು. ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಅವರು 2023-24 ನೇ ಸಾಲಿನ […]
ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಸಿಂಗಾಪುರದ ಮುಂದಿನ ಅಧ್ಯಕ್ಷ

ಭಾರತೀಯ ಮೂಲದ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾದ ಥರ್ಮನ್ ಷಣ್ಮುಗರತ್ನಂ ಅವರು ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈತ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿದ್ದು ವಿಶ್ವದಲ್ಲಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಮೂರನೇ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ಥರ್ಮನ್ ಷಣ್ಮುಗರತ್ನಂ ಅವರ ಪೂರ್ವಜರು ತಮಿಳುನಾಡಿನವರಾಗಿದ್ದಾರೆ. 2.7 ಮಿಲಿಯನ್‌ಗಿಂತಲೂ ಹೆಚ್ಚು ಸಿಂಗಾಪುರದ ಮತದಾರರಲ್ಲಿ ಸರಿಸುಮಾರು ಶೇಕಡಾ ಒಂಬತ್ತು ಪ್ರತಿಶತವನ್ನು ರೂಪಿಸುವ ಸಿಂಗಾಪುರದ ಭಾರತೀಯ ಸಮುದಾಯದಿಂದ ಅವರು ಚುನಾಯಿಸಲ್ಪಟ್ಟಿದ್ದಾರೆ. 66 ವರ್ಷದ ಅರ್ಥಶಾಸ್ತ್ರಜ್ಞ , ಕ್ರೀಡಾ ಪಟು ಮತ್ತು ಕವಿಯಾಗಿರುವ ಥರ್ಮನ್, […]
ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ ಯೋಜನಾ ಸಹಾಯಕರ ಹುದ್ದೆ ನೇಮಕಾತಿಗಾಗಿ ಅರ್ಜಿ ಆಹ್ವಾನ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ ಯೋಜನಾ ಸಹಾಯಕರ -1 ಹುದ್ದೆಗೆ ತಾತ್ಕಾಲಿಕವಾಗಿ ನೇರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಅಥವಾ ಪೋಸ್ಟ್ ಗ್ರ್ಯಾಜ್ಯುಯೇಟ್ ಡಿಪ್ಲೋಮಾ ಇನ್ ಮ್ಯಾನೆಜ್‌ಮೆಂಟ್/ ಸೋಷಿಯಲ್ ಸೈನ್ಸಸ್/ ನ್ಯೂಟ್ರಿಶನ್ಸ್ ವಿದ್ಯಾರ್ಹತೆ ಹೊಂದಿರುವ, ಸಾಮಾಜಿಕ ವಲಯದಲ್ಲಿ ಸರ್ಕಾರದ ಕಾರ್ಯಕ್ರಮಗಳಾದ ಆರೋಗ್ಯ, ಪೋಷಣೆ, ಶಿಕ್ಷಣ, ನೀರು ಮತ್ತು ನೈರ್ಮಲ್ಯ ಕುರಿತು ಕೆಲಸ ಮಾಡಿದ ಅನುಭವ ಹೊಂದಿರುವ ಹಾಗೂ ಇಂಗ್ಲೀಷ್ ಮತ್ತು […]