ಜ್ಯೂರಿಚ್ ಡೈಮಂಡ್ ಲೀಗ್: ಮತ್ತೊಂದು ಚಿನ್ನದ ಪದಕಕ್ಕೆ ನೀರಜ್ ಚೋಪ್ರಾ ಹೆಜ್ಜೆ
ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಮುಕ್ತಾಯ ಕಂಡ ಬೆನ್ನಲ್ಲೇ ಜ್ಯೂರಿಚ್ ಡೈಮಂಡ್ ಲೀಗ್ ನಡೆಯಲಿದ್ದು, ಅಥ್ಲೆಟಿಕ್ಸ್ ಅಭಿಮಾನಿಗಳು ನೀರಜ್ ಚೋಪ್ರಾ ಪ್ರದರ್ಶನ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿರುವ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಸೇರಿದಂತೆ ನೋಹ್ ಲೈಲ್ಸ್, ಶಾಕ್ಯಾರಿ ರಿಚರ್ಡ್ಸನ್, ಕಾರ್ಸ್ಟನ್ ವಾರ್ಹೋಮ್ ಮತ್ತು ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಜ್ಯೂರಿಚ್ ಡೈಮಂಡ್ ಲೀಗ್ನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಗೆಲುವಿಗಾಗಿ ತಯಾರಿ ನಡೆಸುತ್ತಿದ್ದಾರೆ.ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ, ಜ್ಯೂರಿಚ್ […]
ಚೆಸ್ ಚತುರ ಪ್ರಜ್ಞಾನಂದಗೆ ತಮಿಳುನಾಡು ಸರ್ಕಾರದಿಂದ ₹30 ಲಕ್ಷದ ಚೆಕ್ !
ಚೆನ್ನೈ: ಇತ್ತೀಚೆಗೆ ನಡೆದ ಫಿಡೆ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಭಾರತದ ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಅವರು ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ವೀರೋಚಿತ ಸೆಣಸಾಟ ನಡೆಸಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದ ಪ್ರಗ್ಗುಗೆ ತಮಿಳುನಾಡು ಸರ್ಕಾರದ ವತಿಯಿಂದ ಸ್ಮರಣಿಕೆಯೊಂದಿಗೆ 30 ಲಕ್ಷ ರೂ. ಚೆಕ್ ನೀಡಿ ಗೌರವಿಸಲಾಯಿತು.ಫಿಡೆ ಚೆಸ್ ವಿಶ್ವಕಪ್ ರನ್ನರ್ ಅಪ್ ಪ್ರಜ್ಞಾನಂದ ಅವರಿಂದು ತವರು ರಾಜ್ಯ ತಮಿಳುನಾಡಿಗೆ ಆಗಮಿಸಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು […]
‘Global IndiaAI’ ಪ್ರಥಮ ಸಮ್ಮೇಳನ ಅಕ್ಟೋಬರ್ ತಿಂಗಳಲ್ಲಿ
ನವದೆಹಲಿ: ಭಾರತ ಮತ್ತು ವಿಶ್ವದಾದ್ಯಂತದ ಪ್ರಮುಖ ಎಐ ಕಂಪನಿಗಳು, ಸಂಶೋಧಕರು, ಸ್ಟಾರ್ಟ್ಅಪ್ಗಳು ಮತ್ತು ಹೂಡಿಕೆದಾರರು ಇದರಲ್ಲಿ ಭಾಗವಹಿಸಲಿದ್ದಾರೆ.ಈ ವರ್ಷದ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ‘ಗ್ಲೋಬಲ್ ಇಂಡಿಯಾಎಐ 2023′ ಸಮ್ಮೇಳನ ಆಯೋಜಿಸಲಾಗುವುದು ಎಂದು ಐಟಿ ಸಚಿವಾಲಯ ಬುಧವಾರ ತಿಳಿಸಿದೆ. ಇದೇ ವರ್ಷದ ಅಕ್ಟೋಬರ್ನಲ್ಲಿ ಗ್ಲೋಬಲ್ ಇಂಡಿಯಾಎಐ 2023’ ಸಮ್ಮೇಳನ ಆಯೋಜಿಸಲಾಗುವುದು ಎಂದು ಐಟಿ ಸಚಿವಾಲಯ ಹೇಳಿದೆ. “ಗ್ಲೋಬಲ್ ಇಂಡಿಯಾಎಐ 2023 ಸಮ್ಮೇಳನದ ಆಯೋಜನೆಗೆ ತಾತ್ಕಾಲಿಕವಾಗಿ ಅಕ್ಟೋಬರ್ 14-15 ರಂದು ದಿನಾಂಕ ನಿಗದಿಪಡಿಸಲಾಗಿದೆ. ಇದು ಭಾರತ ಮತ್ತು ಪ್ರಪಂಚದಾದ್ಯಂತದ ಎಐನಲ್ಲಿನ […]
ಒಂದು ಹೆಣ್ಣಿಗೆ ನ್ಯಾಯ ಕೊಡಬೇಕು ಎನ್ನುವ ತಿಮರೋಡಿಗೆ ಇನ್ನೊಂದು ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೇ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಹೆಣ್ಣಿಗೆ ನ್ಯಾಯ ಕೊಡಬೇಕು ಎಂದು ಹೋರಾಟಕ್ಕೆ ಇಳಿದಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ. ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆ.29 ರಂದು ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಹಿರಿಯ ಮುಖಂಡರ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ […]
ಉಡುಪಿ: ಸೌಜನ್ಯ ಪರ ಹೋರಾಟ ಸ್ಥಳದಲ್ಲಿ ದಿಢೀರ್ ಪ್ರತ್ಯಕ್ಷರಾದ ಮಹಿಳೆಯರಿಂದ ವೀರೇಂದ್ರ ಹೆಗ್ಗಡೆ ಪರ ಘೋಷಣೆ
ಉಡುಪಿ: ಮಂಗಳವಾರದಂದು ಅಜ್ಜರಕಾಡು ಹುತಾತ್ಮ ಸ್ಮಾರಕ ಸಮೀಪ ನಡೆಯುತ್ತಿದ್ದ ಸೌಜನ್ಯ ಪರ ಹೋರಾಟ ಸ್ಥಳದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ಪರವಾಗಿ ನೂರಾರು ಮಂದಿ ಮಹಿಳೆಯರು ಪ್ರತಿಭಟನೆಗೆ ಬಂದಿದ್ದರು. ಮಹಿಳೆಯರು ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಪರವಾಗಿ ಘೋಷಣೆ ಕೂಗಿದರು. ಪ್ರತಿಭಟನಾ ಸ್ಥಳದಿಂದ ಪ್ರತಿಭಟನಾ ನಿರತ ಮಹಿಳೆಯರನ್ನು ಪೊಲೀಸರು ಹೊರಕ್ಕೆ ಕಳುಹಿಸಿದರು. ಈ ವೇಳೆ ಉಡುಪಿ ಪೊಲೀಸರು ಹಾಗೂ ಮಹಿಳೆಯರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು.