ಇಂದು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ: ಭಾಗವಹಿಸುವವರಿಗೆ ಉಚಿತ ಬಸ್ ವ್ಯವಸ್ಥೆ

ಉಡುಪಿ: ಇಂದು(ಆ. 29) ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಸೌಜನ್ಯಳಿಗೆ ಆದ ಅನ್ಯಾಯದ ವಿರುದ್ದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನ 1.30 ಗಂಟೆಗೆ ಮೂಡುಬೆಳೆಯಿಂದ ಬಸ್ಸು ಹೊರಡುತ್ತದೆ. ಅನುಗ್ರಹ ಟ್ರಾವೆಲ್ಸ್ ಕಡೆಯಿಂದ ಮೂಡುಬೆಳ್ಳೆ ಯಿಂದ ಉಡುಪಿಗೆ ಹೊರಡುವವರಿಗೆ ಉಚಿತ ವಾಹನದ ವ್ಯವಸ್ಥೆ ಇದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಒಂದಾಗಿ ಬನ್ನಿ ನ್ಯಾಯ ಕೇಳುವ ಮನಸುಗಳೆಲ್ಲ 2 ಗಂಟೆಗೆ ಹೀರೆಬೆಟ್ಟುವಿನಿಂದ ವಾಹನ ಹೊರಡುತ್ತದೆ. ವಿಶ್ವಶ್ರೀ ಟ್ರಾವೆಲ್ಸ್ ವತಿಯಿಂದ ಆತ್ರಾಡಿ ಹೀರೆಬೆಟ್ಟುವಿನಿಂದ ಉಡುಪಿಗೆ ಹೊರಡುವವರಿಗೆ ಉಚಿತ ವಾಹನದ ವ್ಯವಸ್ಥೆ ಇರುತ್ತದೆ. […]

ತೆಂಕಪೇಟೆ: 123 ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಊರ ಪರವೂರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ 7 ದಿನಗಳ ಕಾಲ ನಿರಂತರ ಭಜನೆ ನಡೆಯಿತು. 122 ನೇ ಭಜನಾ ಸಪ್ತಾಹ ಮಂಗಲೋತ್ಸವ ಸೋಮಾವಾರ ಕೊನೆಗೊಂಡಿತು. ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ದೇವಳದ ಅರ್ಚಕ ವಿನಾಯಕ ಭಟ್ ನಡೆಸಿಕೊಟ್ಟರು. ಭಜನೆ ಪ್ರಿಯ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ದೀಪ ಸ್ಥಂಭಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಮಹಾ ಮಂಗಳಾರತಿ ಬಳಿಕ ನೂರಾರು ಭಕ್ತರು ಉರುಳು […]