ಉಡುಪಿ: ಹೊಟೇಲ್ ಸಪ್ಲೈಯರ್ ಆತ್ಮಹತ್ಯೆ
ಉಡುಪಿ: ಇಲ್ಲಿನ ಹೋಟೆಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ 53 ವರ್ಷದ ವ್ಯಕ್ತಿಯೊಬ್ಬರು ಮಿಷನ್ ಕಾಂಪೌಂಡ್ ಬಳಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಇಗ್ನೇಷಿಯಸ್ ಮಾರ್ಕ್ ಸಲ್ಡಾನ್ಹಾ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಹೊಟೇಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ವೈಯಕ್ತಿಕ ಸಮಸ್ಯೆಗಳಿಂದಾಗಿ ಜೀವನದಲ್ಲಿ ನೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದೊಡ್ಡಣ್ಣಗುಡ್ಡೆ: ಸೆ. 1 ರಂದು ದುರ್ಗಾ ಆದಿಶಕ್ತಿ ದೇವಿಗೆ ಗಾಜಿನ ಬಳೆಗಳ ಅಲಂಕಾರ
ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾದಿಶಕ್ತಿ ದೇವಿ ಕ್ಷೇತ್ರದಲ್ಲಿ ಸೆ. 1 ಶುಕ್ರವಾರದಂದು ಶ್ರೀ ಚಕ್ರ ಪೀಠ ಸುರಪೂಜಿತೆ ದೇವಿಯನ್ನು ಗಾಜಿನ ಬಳೆಗಳಿಂದ ವಿಶೇಷವಾಗಿ ಅಲಂಕೃತಗೊಳಿಸಿ ಪೂಜಿಸಲಾಗುವುದು. ಕಳೆದ ವರ್ಷ ಒಂದು ಲಕ್ಷಕ್ಕಿಂತಲೂ ಅಧಿಕ ಗಾಜಿನ ಬಳೆಗಳು ಭಕ್ತರಿಂದ ಸೇವಾ ರೂಪದಲ್ಲಿ ಹರಿದು ಬಂದಿತ್ತು. ಈ ಬಾರಿಯೂ ಸೋನೆ ತಿಂಗಳ ಈ ವಿಶೇಷ ಅಲಂಕಾರಕ್ಕೆ ಬಳೆಗಳನ್ನು ಅಥವಾ ಹಣವನ್ನು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ಇವರನ್ನು ಮೊಬೈಲ್ ಸಂಖ್ಯೆ 9342749650 ಸಂಪರ್ಕಿಸಬಹುದು ಎಂದು ಕ್ಷೇತ್ರದ […]
ಮಂಗಳೂರು: ಕಾಂಚನಾ ಗ್ರೂಪ್ ನಲ್ಲಿ ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ
ಮಂಗಳೂರು: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಂಚನಾ ಗ್ರೂಪ್, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಾಂಚನಾ ಗ್ರೂಪ್ ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಆ.31 ಗುರುವಾರದಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ1.30ರವರೆಗೆ ಪಿ.ಯು.ಸಿ, ಪದವಿ, ಐ.ಟಿ.ಐ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್, ಮಂಗಳೂರು ಇಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಹುದ್ದೆಗಳ ಮತ್ತು ಕೆಲಸದ ಸ್ಥಳದ ವಿವರ 1. ಸೇಲ್ಸ್ ಎಕ್ಸಿಕ್ಯೂಟಿವ್. […]
ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದನ ಪೋಷಕರಿಗೆ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ ಆನಂದ್ ಮಹೀಂದ್ರಾ!!
ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ , ಭಾರತದ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರ ಪೋಷಕರಿಗೆ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಇತ್ತೀಚಿನ ವಿಜಯವನ್ನು ಗುರುತಿಸಿ ಮಹೀಂದ್ರಾ ಥಾರ್ ಅನ್ನು ಉಡುಗೊರೆಯಾಗಿ ನೀಡುವಂತೆ ಟ್ವಿಟರ್ ಬಳಕೆದಾರರು ಅವರನ್ನು ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ, ಮಕ್ಕಳಲ್ಲಿ ಚೆಸ್ ಬಗ್ಗೆ ಆಸಕ್ತಿಯನ್ನುಬೆಳೆಸಲು ಪ್ರೇರಣಾದಯಕವಾಗಿರುವ ಪ್ರಗ್ನಾನಂದನ ತಾಯಿ ನಾಗಲಕ್ಷ್ಮಿ ಮತ್ತು ರಮೇಶ್‌ಬಾಬು ಅವರಿಗೆ XUV4OO […]
ಜಮ್ಮು ಕಾಶ್ಮೀರದ 35A ವಿಧಿಯು ಇತರ ನಾಗರಿಕರನ್ನು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿಸಿದೆ: ಜ. ಚಂದ್ರಚೂಡ್
ಹೊಸದಿಲ್ಲಿ: ಸಂವಿಧಾನದ 35A ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸದ ಜನರನ್ನು ಕೆಲವು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. “ಸಮಾನತೆಯ ಅವಕಾಶ, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮತ್ತು ಭೂಮಿ ಖರೀದಿಸುವ ಹಕ್ಕು -ಈ ವಿಧಿಯು ನಾಗರಿಕರಿಂದ ಇವೆಲ್ಲವನ್ನೂ ಕಸಿದುಕೊಳ್ಳುತ್ತದೆ. ಏಕೆಂದರೆ ನಿವಾಸಿಗಳು (ಜಮ್ಮು ಮತ್ತು ಕಾಶ್ಮೀರದ) ವಿಶೇಷ ಹಕ್ಕುಗಳನ್ನು ಹೊಂದಿದ್ದರಿಂದ, ಅನಿವಾಸಿಗಳನ್ನು ಹೊರಗಿಡಲಾಗಿತ್ತು” ಎಂದು ಅವರು ಹೇಳಿದ್ದಾರೆ. ಭಾರತೀಯ ಸಂವಿಧಾನವು “ಜಮ್ಮು ಮತ್ತು ಕಾಶ್ಮೀರದ ಸಂವಿಧಾನಕ್ಕಿಂತ ಉನ್ನತ […]