ಸಣ್ಣ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸಣ್ಣ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ 10 ಹೆಚ್ ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ಒದಗಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಶನಿವಾರದಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೇಕಾರರ ನಿಯೋಗದ ಜತೆ ಚರ್ಚಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಈ ಕುರಿತು […]

ಮಂಗಳೂರು: ‘ರೋಹನ್ ಸಿಟಿ’ ಬಿಜೈನಲ್ಲಿ ಆಯ್ದ ಸೇವಾ ನಿರತ ವ್ಯಕ್ತಿಗಳಿಗೆ 10% ವರೆಗೆ ವಿಶೇಷ ರಿಯಾಯಿತಿ

ಮಂಗಳೂರು: ರೋಹನ್‌ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತುಅತ್ಯಂತ ವಿಶೇಷ ಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್‌ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಈ ಸಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಸಮಾಜದ ಆಯ್ದ ಸೇವಾ ನಿರತ ವ್ಯಕ್ತಿಗಳಿಗಾಗಿ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಎಂಡಿ, ರೋಹನ್ ಮೊಂತೇರೋ ಹೇಳಿದರು. ಆಗಸ್ಟ್ 26 ರಂದು ನಗರದ ಓಷಿಯನ್ ಪರ್ಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿಕ್ಷಕರು, ಪೊಲೀಸರು, ಯೋಧರು ಮತ್ತು ಪತ್ರಕರ್ತರಿಗೆ […]

ಆರು ವರ್ಷಗಳ ಬಳಿಕ ಮತ್ತೆ ವೇದಿಕೆ ಹಂಚಿಕೊಂಡ ಕುಚ್ಚಿಕ್ಕೂ ಗೆಳೆಯರು: ಸುಮಲತಾ ಅಂಬರೀಷ್ ಹುಟ್ಟುಹಬ್ಬದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಮುಖಾಮುಖಿ

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡುವ ಸುದ್ದಿಯೊಂದು ಬಂದಿದೆ. ಕಳೆದ ಆರು ವರ್ಷಗಳಿಂದ ಮುಖಮುಖಿಯಾಗದ ಚಂದನವನದ ಕುಚ್ಚಿಕ್ಕೂ ಗೆಳೆಯರಾದ ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಸುಮಲತಾ ಅಂಬರೀಶ್‌ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. Video of the decade🔥❤️@dasadarshan × @KicchaSudeep #DBoss #KicchaSudeep#WifeSellerShandaSudeep#SideRoleBeggarSudeep pic.twitter.com/fOVUO8djxn — Pranav (@Pranav7999) August 26, 2023 ಯಾವುದೋ ಮನಸ್ತಾಪದ ಕಾರಣ ದೂರಾಗಿದ್ದ ಕುಚಿಕು ಗೆಳೆಯರಾದ ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗಬೇಕೆಂದು […]

ಭಾರತ ಸೇವಾದಳದ ಸಂಸ್ಥಾಪಕ ಡಾ| ಎನ್‌ ಎಸ್‌ ಹರ್ಡೀಕರ್‌ ಸಂಸ್ಮರಣಾ ಕಾರ್ಯಕ್ರಮ

ಉಡುಪಿ: ಭಾರತ ಸೇವಾದಳದ ಸ್ಥಾಪಕ ಡಾ| ಎನ್‌ ಎಸ್‌ ಹರ್ಡೀಕರ್‌ ವೃತ್ತಿಯಲ್ಲಿ ವೈದ್ಯ, ಆದರೆ ಪ್ರವೃತ್ತಿಯಲ್ಲಿ ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆ ಅನನ್ಯವಾಗಿತ್ತು. ಅವರ ಶಿಸ್ತಿನ ಜೀವನ ಎಲ್ಲರಿಗೂ ಅನುಕರಣೀಯ. ವಿದ್ಯಾರ್ಥಿಗಳು ಅವರನ್ನು ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿ ಶಿಸ್ತುಬದ್ಧ ಜೀವನದೊಂದಿಗೆ ಸಾಧಕರಾಗಬೇಕು ಎಂದು ಅಂಡಾರು ದೇವಿ ಪ್ರಸಾದ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಭಾರತ ಸೇವಾ ದಳ ಉಡುಪಿ […]

ಭಾರತದ ಮೊದಲ ಮಾನವ ಸಹಿತ ಅಂತರಿಕ್ಷ ಯಾತ್ರೆ ಗಗನಯಾನ್ ಗೆ ಭರದ ಸಿದ್ದತೆ: ಅಕ್ಟೋಬರ್ ನಲ್ಲಿ ಆಕಾಶಕ್ಕೆ ಹಾರಲಿದೆ ವೋಮಮಿತ್ರ ರೊಬೋಟ್

ನವದೆಹಲಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಗಗನಯಾನ್ ಮಿಷನ್ ಕುರಿತು ಪ್ರಮುಖ ಮಾಹಿತಿಯನ್ನು ನೀಡಿ ಪ್ರಯೋಗಗಳು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಮಿಷನ್‌ನ ಎರಡನೇ ಹಂತವು ‘ವ್ಯೋಮಮಿತ್ರ’ (ಬಾಹ್ಯಾಕಾಶ-ವಿಹಾರ ಮಾಡುವ ಹ್ಯುಮನಾಯ್ಡ್ ರೋಬೋಟ್) ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ ಎಂದು ಅವರು ಹೇಳಿದರು. ಈ ಎರಡು ಹಂತಗಳ ನಂತರ, ಗಗನಯಾನ್ ಯೋಜನೆಯ ಮಾನವಸಹಿತ ಮಿಷನ್‌ನ ಭಾಗವಾಗಿ ಒಂದರಿಂದ ಮೂರರ ನಡುವಿನ ಸಂಖ್ಯೆಯ ಗಗನಯಾತ್ರಿಗಳನ್ನು ಕಳುಹಿಸಲಾಗುತ್ತದೆ. ಇದು 2024 ರ […]