ಕೆ.ಎಂ.ಸಿ ಆಸ್ಪತ್ರೆಯಲ್ಲಿ ಕರಾವಳಿಯ ಮೊದಲ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ-ಹೊಂದಾಣಿಕೆಯ ಅಸ್ಥಿಮಜ್ಜೆ ಕಸಿ ಯಶಸ್ವಿ ಚಿಕಿತ್ಸೆ
ಮಣಿಪಾಲ: ಒಂದು ವರ್ಷದ ಬಾಲಕನಿಗೆ ಸಿವಿಯರ್ ಕಂಬೈನ್ಡ್ ಇಮ್ಯುನೊ ಡೆಫಿಶಿಯೆನ್ಸಿ ಎಂಬ ತೀವ್ರ ತರಹದ ರೋಗ ನಿರೋಧಕ ಶಕ್ತಿಯ ಕೊರತೆ ಇರುವುದು ಪತ್ತೆಯಾಗಿತ್ತು. ಬಾಲಕನನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಅಸ್ಥಿಮಜ್ಜೆ (ಬೋನ್ ಮಾರೋ ಟ್ರಾನ್ಸ್ ಪ್ಲಾಂಟೇಶನ್) ಕಸಿ ಮಾಡಲು ಕಳುಹಿಸಲಾಗಿತ್ತು. ಅಸ್ಥಿಮಜ್ಜೆ ಕಸಿ ಮಾಡುವುದೊಂದೆ ಆತನ ಕಾಯಿಲೆಯನ್ನು ಗುಣಪಡಿಸಬಲ್ಲ ಏಕೈಕ ಚಿಕಿತ್ಸೆಯಾಗಿತ್ತು. ಮೂಳೆ ಮಜ್ಜೆಯ ಕಸಿ ಎನ್ನುವುದು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳ ತಜ್ಞ ತಂಡವು ಮಾಡುವ ಒಂದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯಾಗಿದೆ. ಅಸ್ಥಿ ಮಜ್ಜೆ ಕಸಿ […]
ಶ್ರೀಕೃಷ್ಣ ಮಠದಲ್ಲಿ ವರಮಹಾಲಕ್ಷ್ಮೀ ವೃತ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ವರಮಹಾಲಕ್ಷ್ಮೀ ವೃತದ ಪ್ರಯುಕ್ತ ಮಹಿಳೆಯರಿಂದ ‘ಲಕ್ಷ್ಮೀ ಶೋಭಾನೆ’ ಪಠನೆ ನಡೆಯಿತು.
ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಸಾಗಣೆ: ಬೋಗಿಯಲ್ಲಿ ಹೊತ್ತಿಕೊಂಡ ಬೆಂಕಿ; ಕನಿಷ್ಠ ಎಂಟು ಸಾವು
ಚೆನ್ನೈ: ಇಂದು ಬೆಳಗ್ಗೆ 5:15 ಕ್ಕೆ ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನ ಖಾಸಗಿ/ವೈಯಕ್ತಿಕ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ರೈಲು ಮದುರೈ ಯಾರ್ಡ್‌ನಲ್ಲಿತ್ತು. ಆ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದು, ಮತ್ತೊಂದು ಬೋಗಿಗೆ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ. ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದುದೇ ಬೆಂಕಿಗೆ ಕಾರಣ ಎಂದು ದಕ್ಷಿಣ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಏಳು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮ ವರದಿಯಾಗಿದೆ. #WATCH | Tamil […]
ಪ್ರಧಾನಿ ಮೋದಿ ಇಸ್ರೋ ಭೇಟಿ: ವಿಕ್ರಮ್ ಲ್ಯಾಂಡರ್‌ನ ಟಚ್‌ಡೌನ್ ಪಾಯಿಂಟ್ ಗೆ ‘ಶಿವಶಕ್ತಿ’ ಹೆಸರು; ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ
ಬೆಂಗಳೂರು: ಯಶಸ್ವಿ ಚಂದ್ರಯಾನ-3 (Chandrayan-3) ಮಿಷನ್ ಹಿಂದೆ ಹಗಲಿರುಳೆನ್ನದೆ ದುಡಿದ ಇಸ್ರೋ(ISRO) ತಂಡವನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಕ್ರಮ್ ಲ್ಯಾಂಡರ್‌ನ ಟಚ್‌ಡೌನ್ ಪಾಯಿಂಟ್ ಅನ್ನು ಇನ್ನು ಮುಂದೆ ‘ಶಿವಶಕ್ತಿ’ (ShivaShakti) ಎಂದು ಕರೆಯಲಾಗುವುದು ಮತ್ತು ಚಂದ್ರಯಾನ-2 ರ ಚಂದ್ರನ ಲ್ಯಾಂಡಿಂಗ್ ಪಾಯಿಂಟ್ ಅನ್ನು ‘ತಿರಂಗ’ (Tiranga) ಎಂದು ಕರೆಯಲಾಗುವುದು ಎಂದು ಘೋಷಿಸಿದರು. ವಿಕ್ರಮ್ ಲ್ಯಾಂಡರ್ (VIkram Lander) ಚಂದ್ರನ ಮೇಲೆ ಇಳಿದ ಆಗಸ್ಟ್ 23 ಅನ್ನು ‘ರಾಷ್ಟ್ರೀಯ […]
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ
ಉಡುಪಿ: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಹಾಗೂ ಮಾತೃಮಂಡಳಿ ಕಡಿಯಾಳಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಕಡಿಯಾಳಿ ಕಾತ್ಯಾಯನಿ ಮಂಟಪದಲ್ಲಿ 39 ನೇ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರದಂದು ಸಂಜೆ ಸಂಪನ್ನಗೊಂಡಿತು. ಮಾತೃಮಂಡಳಿಯ ವತಿಯಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಶ್ರೀದೇವಿಗೆ ವಿಶೇಷ ಅಲಂಕಾರ, ಬೃಹತ್ ಮಂಡಲದಲ್ಲಿ ವರಮಹಾಲಕ್ಷ್ಮೀ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ದೇವಳದ ಅಧ್ಯಕ್ಷ ರವಿರಾಜ್ ಆಚಾರ್ಯ, ಶಾಸಕ ಯಶ್ ಪಾಲ್ […]