ಉಡುಪಿ: ವೆಂಕಟೇಶ್ವರ ಸ್ವೀಟ್ಸ್ ವತಿಯಿಂದ 13 ನೇ ವರ್ಷದ ಬೃಹತ್ ತಿರುಪತಿ ಪಾದಯಾತ್ರೆ

ಉಡುಪಿ: ವೆಂಕಟೇಶ್ವರ ಸ್ವೀಟ್ಸ್ ಮಾಲಕ ಪಿ. ಲಕ್ಷ್ಮೀನಾರಾಯಣ ರಾವ್ ಅವರ ಸಾರಥ್ಯದಲ್ಲಿ ಸತತ 13 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ಬಾರಿ ಸಾಸ್ತಾನದಿಂದ ತಿರುಪತಿವರೆಗೆ ಪಾದಯಾತ್ರೆ ನಡೆಯುತ್ತಿದ್ದು, ಆಗಸ್ಟ್ 22 ರಿಂದ ಆರಂಭಗೊಂಡು 18 ದಿನಗಳವರೆಗೆ ಪಾದಯಾತ್ರೆ ನಡೆಯುವುದು. ಮೊದಲ ದಿನ ಹಿರಿಯಡಕ ನಾರಾಯಣಗುರು ಸಭಾಭವನದಲ್ಲಿ ತಂಗಿ, ಮುಂದೆ ಒಂದೊಂದು ದಿನ ಒಂದೊಂದು ಸ್ಥಳದಲ್ಲಿ ಉಳಿದು, ಹೊಸ್ಮಾರು, ಧರ್ಮಸ್ಥಳ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ […]
ಕುಂದಾಪುರ: ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ; ಸಹಸ್ರಾರು ಜನ ಭಾಗಿ

ಕುಂದಾಪುರ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರರಣದ ಮರು ತನಿಖೆಗೆ ಆಗ್ರಹಿಸಿ ಕುಂದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಾವಿರಾರು ಜನರು ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಜಸ್ಟಿಸ್ ಫಾರ್ ಸೌಜನ್ಯ ಎನ್ನುವ ಘೋಷಣೆಗಳನ್ನು ಕೂಗುತ್ತಾ ನೆಹರು ಮೈದಾನದಿಂದ ಹೊರಟು ಶಾಸ್ತ್ರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಳ ಕುಟುಂಬಿಕರು ಭಾಗವಹಿಸಿದರು.
ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಚುನಾವಣೆ ಪೂರ್ವ ತಯಾರಿ ಕುರಿತು ಕಾರ್ಯಾಗಾರ

ಉಡುಪಿ: ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಚುನಾವಣೆ ಪೂರ್ವ ತಯಾರಿ ಕುರಿತು ತರಬೇತಿ ಕಾರ್ಯಾಗಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಬುಧವಾರದಂದು ನೆರವೇರಿತು. ಸಹಕಾರ ಸಂಘಗಳ ಜಿಲ್ಲಾ ಪ್ರಭಾರ ಉಪನಿಬಂಧಕ ರಮೇಶ್ ಎಚ್.ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಯೂನಿಯನ್ ಮೂಲಕ ವರ್ಷಕ್ಕೆ ಸುಮಾರು 14 […]
ಉಡುಪಿ: ಮದುವೆಯಾವುದಾಗಿ ಹೇಳಿ ಗಂಡಸರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಹೊಸಕೋಟೆ ಮಹಿಳೆಯ ಬಂಧನ

ಉಡುಪಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಗ್ರಾಮದ ತಬಸುಮ್ ಅಲಿಯಾಸ್ ಹೀನಾ ಶಬಾನಾ ಎನ್ನುವ ಮಹಿಳೆ ಗೆ ಇನ್ನೂ ಅನೇಕ ಹೆಸರುಗಳಿವೆ ಎನ್ನಲಾಗಿದೆ. ಈಕೆ ಸುಳ್ಳು ಹೇಳಿ ಅನೇಕ ಯುವಕರೊಂದಿಗೆ ಸ್ನೇಹ ಸಂಪಾದಿಸಿಕೊಂಡು ಮದುವೆಯ ಹೆಸರಲ್ಲಿ ಹಣ ಲೂಟಿ ಮಾಡಿ ಗಂಡಸರ ಸಂಸಾರದ ಜೊತೆ ಚೆಲ್ಲಾಟ ಆಡುವುದರಲ್ಲಿ ಎತ್ತಿದ ಕೈ. ಇಷ್ಟೇ ಅಲ್ಲದೆ, ಅಲ್ಪಸಂಖ್ಯಾತರ ಯೋಜನೆಗಳ ಅಡಿಯಲ್ಲಿ ಸಾಲ ದೊರಕಿಸಿಕೊಡುತ್ತೇನೆಂದು ನಂಬಿಸಿ ಕೋಟಿಗಟ್ಟಲೆ ಹಣ ಕೊಳ್ಳೆ ಹೊಡೆದಿರುವ ಆರೋಪವೂ ಈಕೆಯ ಮೇಲಿದೆ. ಈಕೆಯನ್ನು ಹೊಸಕೋಟೆ […]
ಹೆಮ್ಮಾಡಿ: ಆ. 26 ರಂದು ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಸಭೆ

ಹೆಮ್ಮಾಡಿ: ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ (ನಿ.) 2022-2023 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ. 26 ಶನಿವಾರ ಬೆಳಗ್ಗೆ 10.30ಕ್ಕೆ ಸರಿಯಾಗಿ ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ರಿ., ಇದರ ಸಭಾಭವನದಲ್ಲಿ ಜರುಗಲಿರುವುದು. ಸಂಘದ ಸದಸ್ಯರೆಲ್ಲರೂ ಸಕಾಲದಲ್ಲಿ ಹಾಜರಾಗಿ ಸಭೆಯ ಕಾರ್ಯಕಲಾಪದಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.