ಮುಂದಿನ ದಿನಗಳಲ್ಲಿ ಶ್ರೀಲಂಕಾಗೆ ಭಾರತದಿಂದ ಅಗತ್ಯ ನೆರವು ಮುಂದುವರಿಕೆ: ಸಚಿವ ಎಸ್. ಜೈಶಂಕರ್

ಕೊಲಂಬೊ (ಶ್ರೀಲಂಕಾ) : ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರೀಲಂಕಾದಲ್ಲಿ ತಮಿಳು ಸಮುದಾಯದೊಂದಿಗೆ ಸಾಮರಸ್ಯ ಪ್ರಕ್ರಿಯೆ ನಡೆಯಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಶ್ರೀಲಂಕಾಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದನ್ನು ಮುಂದುವರಿಸುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಶ್ರೀಲಂಕಾ – ಭಾರತ ಸಂಸದೀಯ ಸ್ನೇಹ ಸಂಘದ ಭಾಗವಾಗಿರುವ ಸಂಸದರನ್ನು ಉದ್ದೇಶಿಸಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದ ಎಸ್ ಜೈಶಂಕರ್, ಭಾರತ-ಶ್ರೀಲಂಕಾ […]

ಆಫ್ಲೈನ್ ಡಿಜಿಟಲ್ ಪೇಮೆಂಟ್​ ಮಿತಿ ಸಣ್ಣ ಮೊತ್ತದ 500 ರೂ.ಗೆ ಹೆಚ್ಚಳ

ಬೆಂಗಳೂರು: ಆಫ್ಲೈನ್ ಮೂಲಕ ಮಾಡಬಹುದಾದ ಸಣ್ಣ ಮೊತ್ತದ ಡಿಜಿಟಲ್ ಪೇಮೆಂಟ್​​ ಮಿತಿಯನ್ನು 200 ರೂಪಾಯಿಗಳಿಂದ 500 ರೂಪಾಯಿಗಳಿಗೆ ಆರ್​ಬಿಐ ಹೆಚ್ಚಿಸಿದೆ.ಇತ್ತೀಚೆಗೆ ನಡೆದ ದ್ವೈಮಾಸಿಕ ನೀತಿ ಪರಾಮರ್ಶೆ ಸಭೆಯಲ್ಲಿ ಆರ್​ಬಿಐ ಈ ನಿರ್ಧಾರ ಘೋಷಿಸಿತ್ತು. ಇದೀಗ ನಿರ್ಧಾರ ಜಾರಿಗೆ ಬಂದಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007 (2007 ರ ಕಾಯ್ದೆ 51) ರ ಸೆಕ್ಷನ್ 10 (2) ಮತ್ತು ಸೆಕ್ಷನ್ 18 ರ ಅಡಿಯಲ್ಲಿ ಹೊಸ ನೀತಿಯನ್ನು ಜಾರಿಗೊಳಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು […]

ಹಸೆಮಣೆ ಏರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಸಾಲಿಗೆ ಹೊಸದಾಗಿ ಸೇರ್ಪಡೆ : ಹರ್ಷಿಕಾ ಭುವನ್

ಕೊಡಗು: ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಸಾಲಿಗೆ ಹೊಸದಾಗಿ ಹರ್ಷಿಕಾ ಭುವನ್ ಸೇರಿದ್ದಾರೆ. ಹೌದು, ಇಂದು ಕೊಡವ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.ಕನ್ನಡ ಚಿತ್ರರಂಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಸಂಭ್ರಮ ಮನೆ ಮಾಡಿದೆ.ಗುರುಹಿರಿಯರ, ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹ ಶಾಸ್ತ್ರಗಳು ನೆರವೇರಿತು. ಕೊಡಗಿನ ವಿರಾಜ್ ಪೇಟೆಯಲ್ಲಿ ಅಮ್ಮತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ನಟ – ನಟಿ ಮಿಂಚಿದರು. ಕೊಡವ […]

6 ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಗೆ ಒಪ್ಪಿಗೆ : ಬ್ರಿಕ್ಸ್​ ವಿಸ್ತರಣೆ

ಜೋಹಾನ್ಸ್‌ಬರ್ಗ್‌: ಬ್ರಿಕ್ಸ್​ ಗುಂಪಿನಲ್ಲಿ ಪ್ರಸ್ತುತ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿವೆ. 2019ರ ನಂತರ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್​ ಶೃಂಗಸಭೆ ನಡೆಯುತ್ತಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಹೊಸ ರಾಷ್ಟ್ರಗಳ ಸೇರ್ಪಡೆ ಕುರಿತ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಜಗತ್ತಿನ […]

ಚಂದನವನದತ್ತ ಪ್ರಯಾಣ ಬೆಳೆಸಿದ ಕರಾವಳಿಯ ಹುಡುಗ: ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಚಿತ್ರದ ಮುಹೂರ್ತ

ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟನೆಯ ಕನ್ನಡ ಚಿತ್ರ ‘ಅಧಿಪತ್ರ’ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಈಗಾಗಲೇ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೂಪೇಶ್ ಚಂದನವನದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಮಾತನಾಡಿದ ನಟ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಬಳಿಕ ಕನ್ನಡ ಸಿನಿಮಾ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಬಿಗ್ ಬಾಸ್ ಗೂ ಮುಂಚೆ ‘ಸರ್ಕಸ್’ ಎಂಬ ತುಳು ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದೆ. ಆ […]