ಬಿಎಸ್‌ಇ ಸೆನ್ಸೆಕ್ಸ್ 180 & ನಿಫ್ಟಿ 57 ಅಂಕ ಕುಸಿತ : ಷೇರು ಮಾರುಕಟ್ಟೆ
ಮುಂಬೈ : ಬಿಎಸ್‌ಇ ಸೆನ್ಸೆಕ್ಸ್ 180.96 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಕುಸಿದು 65,252.34 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು ಗರಿಷ್ಠ 65,913.77 ಮತ್ತು ಕನಿಷ್ಠ 65,181.94 ಕ್ಕೆ ತಲುಪಿತ್ತು. ಹಾಗೆಯೇ ಎನ್‌ಎಸ್‌ಇ ನಿಫ್ಟಿ 57.30 ಪಾಯಿಂಟ್ಸ್ ಅಥವಾ ಶೇಕಡಾ 0.29 ರಷ್ಟು ಕುಸಿದು 19,386.70 ಕ್ಕೆ ತಲುಪಿದೆ.ಮೂರು ದಿನಗಳ ಏರಿಕೆಯ ನಂತರ ಗುರುವಾರದ ವಹಿವಾಟಿನಲ್ಲಿ ಭಾರತದ ಬೆಂಚ್ಮಾರ್ಕ್ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದವು. ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಡಿಎಫ್ಸಿ […]
‘ಚಾರ್ಲಿ 777’ ಗೆ ಉತ್ತಮ ಕನ್ನಡ ಸಿನಿಮಾ : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ನವದೆಹಲಿ: ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ಅವರ ‘ಚಾರ್ಲಿ 777’ ಸಿನಿಮಾ ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 11 ಸದಸ್ಯರಿದ್ದ ತೀರ್ಪುಗಾರರ ಮುಖ್ಯಸ್ಥ ಚಲನಚಿತ್ರ ನಿರ್ದೇಶಕ ಕೇತನ್ ಮೆಹ್ತಾ 2021ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದರು. 69ನೇ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು (ಗುರುವಾರ) ಪ್ರಕಟಿಸಿದೆ. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ‘ಹೋಮ್’ ಅತ್ಯುತ್ತಮ ಮಲಯಾಳಂ ಚಿತ್ರ. ‘ಸರ್ದಾರ್ ಉಧಮ್’ ಅತ್ಯುತ್ತಮ ಹಿಂದಿ ಚಿತ್ರವಾಗಿ ಆಯ್ಕೆಯಾಗಿದೆ.’ಉಪ್ಪೇನಾ’ ಸಿನಿಮಾವನ್ನು […]
ಹಸೆಮಣೆ ಏರಲು ಸಜ್ಜಾದ ವರುಣ್ ತೇಜ್ - ಲಾವಣ್ಯ ತ್ರಿಪಾಠಿ
ಜೂನ್ 9 ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಮೆಗಾ ಬ್ರದರ್ ನಾಗಬಾಬು ಅವರ ಮನೆಯಲ್ಲಿ ಅದ್ಧೂರಿಯಾಗಿ ಸಮಾರಂಭ ನಡೆದಿತ್ತು. ಮೆಗಾಸ್ಟಾರ್ ಚಿರಂಜೀವಿ ಮತ್ತು ಸುರೇಖಾ ದಂಪತಿಯ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡಿದ್ದರು. ಇದೀಗ ತಾರಾ ಜೋಡಿಯ ಮದುವೆಗೆ ಮುಹೂರ್ತ ನಿಗದಿಯಾಗಿದೆ. ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಟಾಲಿವುಡ್ ಸೂಪರ್ಸ್ಟಾರ್ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಇಟಲಿಯಲ್ಲಿ […]
ಚಿನ್ನ ಗೆದ್ದು ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಪರಮ್‌ಜೀತ್
ದುಬೈ: ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪರಮ್‌ಜೀತ್ ಪಾತ್ರರಾಗಿದ್ದಾರೆ. ಒಟ್ಟು 462 ಕೆಜಿ ಯಶಸ್ವಿಯಾಗಿ ಎತ್ತಿದ ಪರಮ್‌ಜೀತ್: ಶಕ್ತಿ ಮತ್ತು ದೃಢತೆಯ ಪ್ರದರ್ಶನದಲ್ಲಿ, ಪಂಜಾಬ್‌ನ 31 ವರ್ಷದ ಕ್ರೀಡಾಪಟು ಪರಮ್‌ಜಿತ್ ಅವರು 150 ಕೆಜಿ, 155 ಕೆಜಿ ಮತ್ತು 157 ಕೆಜಿ ಸೇರಿ ಒಟ್ಟು 462 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು.ಎರಡು ವರ್ಷಗಳ ಹಿಂದೆ ಕಂಚಿನ ಪದಕ ಗೆದ್ದಿದ್ದರು. ಪ್ರಸ್ತುತ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.ಕ್ರೀಡಾಪಟು […]
ಮರಾಠಿ – ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ವಿಧಿವಶ
ಮುಂಬೈ: ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಛಾಪು ಮೂಡಿಸಿದ್ದ ಹಿರಿಯ ನಟಿ ಸೀಮಾ ಡಿಯೋ ಗುರುವಾರ ನಿಧನರಾಗಿದ್ದಾರೆ.ಇವರಿಗೆ 81 ವರ್ಷ ವಯಸ್ಸಾಗಿತ್ತು. ನಟಿ ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಸೀಮಾ ಡಿಯೋ ಇಹಲೋಕ ತ್ಯಜಿಸಿರುವುದಾಗಿ ಮಗ ಅಜಿಂಕ್ಯಾ ಡಿಯೋ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.ಮರಾಠಿ ಮತ್ತು ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ಗುರುವಾರ ನಿಧನರಾಗಿದ್ದಾರೆ. ಮರಾಠಿ ಭಾಷೆಯ ಜಗಚ್ಯಪತಿವರ್ ಚಿತ್ರಕ್ಕಾಗಿ ಇವರು ಹೆಚ್ಚು ಫೇಮಸ್ ಆಗಿದ್ದಾರೆ. ಈವರೆಗೆ 80ಕ್ಕೂ ಹೆಚ್ಚು […]