ಪ್ರಾಧ್ಯಾಪಕಿ ಪ್ರಮೀಳಾ ಡಿ’ಸೊಜಾ ಇವರಿಗೆ ಪಿ.ಎಚ್.ಡಿ. ಪದವಿ
ಮಂಗಳೂರು: ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯದ, ಸ್ತ್ರೀರೋಗ ಮತ್ತು ಹೆರಿಗೆ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ಪ್ರಮೀಳಾ ಡಿಸೊಜಾ ಇವರು ‘ಇಫೆಕ್ಟಿವ್‌ನೆಸ್ ಒಫ್ ಮಲ್ಟಿ ಮೊಡ್ಯುಲರ್ ಇಂಟರ್ವೆನ್ಶನ್ಸ್ ಒಫ್ ಲೈಫ್‌ಸ್ಟೈಲ್ ಮೋಡಿಫಿಕೇಶನ್ ಒನ್ ಸಿಂಫ್ಟಮ್ಸ್ ಒಫ್ ಪೊಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಆಂಡ್ ಕ್ವಾಲಿಟಿ ಒಫ್ ಎಮಂಗ್ ವಿಮೆನ್ ಇನ್ ಸಿಲೆಕ್ಟೆಡ್ ಹೊಸ್ಪಿಟಲ್ಸ್, ಮಂಗಳೂರು, ಇಂಡಿಯಾ’ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಯೆನೆಪೋಯಾ ಡೀಮ್ಡ್ ಯುವಿವರ್ಸಿಟಿ ಪಿ.ಎಚ್.ಡಿ ಪದವಿ ನೀಡಿದೆ. ಈ ಮಹಾಪ್ರಬಂದವನ್ನು ಅವರು ಡಾ| ಕೆ. ರಾಜಗೋಪಾಲ್, ಪ್ರಾಧ್ಯಾಪಕರು ಮತ್ತು […]
ಶ್ರೀಕೃಷ್ಣಮಠದಲ್ಲಿ ನಾಗರಪಂಚಮಿ ಆಚರಣೆ
ಉಡುಪಿ: ನಾಗಪಂಚಮಿಯ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಶ್ರೀಸುಬ್ರಹ್ಮಣ್ಯ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ನಾಗಬನದಲ್ಲಿ ನಾಗರ ಪಂಚಮಿ ಆಚರಣೆ
ಕಾರ್ಕಳ: ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ನಾಗಬನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯರ ನೇತೃತ್ವದಲ್ಲಿ ನಾಗದೇವರಿಗೆ ತನು ವಿಜೃಂಭಣೆಯಿಂದ ನಡೆಯಿತು.
ಸತತ ಮೂರನೇ ಬಾರಿಗೆ ಸಾಧನಾ ಪ್ರಶಸ್ತಿ ಪಡೆದ ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ
ಉಡುಪಿ: ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಸತತ 3 ನೆ ಬಾರಿ SCDCC ಬ್ಯಾಂಕ್ ನ ಸಾಧನಾ ಪ್ರಶಸ್ತಿ ನೀಡಲಾಯಿತು. ಆ. 19 ರಂದು ನಡೆದ SCDCC ಬ್ಯಾಂಕ್ ನ ಮಹಾಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಚಂದ್ರಶೇಕರ್. ಕೆ ಹಾಗೂ ಸಿ.ಇ.ಒ ಪದ್ಮನಾಭ್ .ಎಂ ಇವರನ್ನು ಸನ್ಮಾನಿಸಿ ಬ್ಯಾಂಕ್ ನ ಅಧ್ಯಕ್ಷರಾಜೇಂದ್ರ ಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸೊಸೈಟಿಯು ಕಳೆದ 3 ವರ್ಷದಿಂದ ಈ ಪ್ರಶಸ್ತಿಯನ್ನು ಪಡೆಯುತ್ತಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣ ರದ್ದು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರವು ಭಾರತೀಯ ಸಂವಿಧಾನಕ್ಕೆ ಅನುಗುಣವಾಗಿ ಶಿಕ್ಷಣ ನೀತಿಯನ್ನು ಬದಲಾಯಿಸುತ್ತದೆ ಮತ್ತು ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ಪರಿಚಯಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಎನ್‌ಇಪಿ ಮೂಲಕ ಶಿಕ್ಷಣದಲ್ಲಿ ಆರ್‌ಎಸ್‌ಎಸ್ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ […]