ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಆರೋಗ್ಯ ತೊಂದರೆ ಎದುರಾದ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ
ನಾಗ್ಪುರ (ಮಹಾರಾಷ್ಟ್ರ): ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಆರೋಗ್ಯ ಹಠಾತ್ ಹದಗೆಟ್ಟು ತೀವ್ರ ತೊಂದರೆ ಎದುರಾದ ಹಿನ್ನೆಲೆಯಲ್ಲಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಮುಂಬೈ – ರಾಂಚಿ ಇಂಡಿಗೋ ವಿಮಾನವನ್ನು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕರೊಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಅವರು ಮೃತಪಟ್ಟಿದ್ದಾರೆ. ಮುಂಬೈನಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ರಕ್ತ ವಾಂತಿ ಮಾಡಲು ಪ್ರಾರಂಭಿಸಿದ್ದರಿಂದ ತುರ್ತು ಲ್ಯಾಂಡಿಂಗ್ ಅನಿವಾರ್ಯವಾಯಿತು. ಪ್ರಯಾಣಿಕನನ್ನು ದೇವಾನಂದ್ ತಿವಾರಿ ಎಂದು ಗುರುತಿಸಲಾಗಿದ್ದು, […]
ಆ. 25 ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ
ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 25ರ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅನ್ನ ಪ್ರಸಾದದೊಂದಿಗೆ ನೆರವೇರಲಿದೆ. ಕ್ಷೇತ್ರದ ವಿಶೇಷ ಸಾನಿಧ್ಯವಾದ ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಸಂಪನ್ನಗೊಳ್ಳಲಿರುವ ಈ ಮಹಾನ್ ವ್ರತ ಪೂಜೆಯು ಸಂಜೆ 5 ರಿಂದ ಆರಂಭಗೊಳ್ಳಲಿದೆ. ರಾತ್ರಿಯ ಮಹಾಪೂಜೆಯಲ್ಲಿ ವಿಶೇಷ ಸೋಣರತಿ ಸೇವೆ ನಡೆಯಲಿದೆ. ಈ ಪೂಜೆಯು ಸಾಮೂಹಿಕವಾಗಿ ಭಕ್ತರ ಕೊಡುವಿಕೆಯೊಂದಿಗೆ ನೆರವೇರಲಿರುವುದರಿಂದ ಆಸಕ್ತ […]
ಕೋಟ ಮೂರ್ತೆದಾರರ ಸ.ಸಂ. ಅಧ್ಯಕ್ಷರಾಗಿ ಕೆ.ಕೊರಗ ಪೂಜಾರಿ ಪುನರಾಯ್ಕೆ
ಕುಂದಾಪುರ: ಕೋಟ ಮೂರ್ತೆದಾರರ ಸ.ಸಂ.ದ 2023-24 ರಿಂದ 2027-28 ಸಾಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಮ ಪೂಜಾರಿ, ಪಿ.ಕೃಷ್ಣ ಪೂಜಾರಿ, ಜಯರಾಮ ಪೂಜಾರಿ, ಕೆ.ಕೊರಗ ಪೂಜಾರಿ, ಮಂಜುನಾಥ ಪೂಜಾರಿ, ರಾಜು ಪೂಜಾರಿ, ಜಿ.ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಾರಂಪಳ್ಳಿ, ಭಾರತಿ ಎಸ್ ಪೂಜಾರಿ, ಪ್ರಭಾವತಿ ಡಿ ಬಿಲ್ಲವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ಮಂಡಳಿ ಅಧ್ಯಕ್ಷರಾಗಿ ಕೆ.ಕೊರಗ ಪೂಜಾರಿ, ಉಪಾಧ್ಯಕ್ಷರಾಗಿ ಜಯರಾಮ್ ಪೂಜಾರಿ, ಪುನರಾಯ್ಕೆಗೊಂಡಿದ್ದು, ಸಂಘದ ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಜ್ಯೋತಿ […]
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ತೆ 123 ನೇ ಭಜನಾ ಸಪ್ತಾಹ
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ 123 ನೇ ಭಜನಾ ಸಪ್ತಾಹ ಆ. 21 ರಿಂದ ಆ 28ವರೆಗೆ ಜರುಗಲಿದೆ. ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಸೋಮವಾರದಂದು ದೇವಳದ ಪ್ರಧಾನ ಅರ್ಚಕ ವಿನಾಯಕ ಭಟ್ ದೇವರಿಗೆ ಆರತಿ ಬೆಳಗಿಸಿ ಬಳಿಕ ದೀಪ ಬೆಳಗಿಸಿ ಚಾಲನೆ ನೀಡಿದರು. ಭಕ್ತರು ಜೈ ವಿಠಲ್ ಹರಿ ವಿಠಲ್ ಪಠಿಸಿದರು. ಶ್ರೀ ವಿಠೋಭ ರುಖುಮಾಯಿ ದೇವರ ಪೂಜೆ ನಡೆಯಿತು. ವಿವಿಧ ಭಜನಾ ತಂಡಗಳಿಂದ1 ವಾರಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವ ನಡೆಯಲಿದೆ. […]
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ
ಉಡುಪಿ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್‌ನಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳು-2 ಹುದ್ದೆ (ನಮ್ಮ ಕ್ಲಿನಿಕ್ ಟಿ.ಟಿ ರೋಡ್ ಕುಂದಾಪುರ ಹಾಗೂ ಕಾರ್ಕಳದ ತಾಲೂಕು ಸಾರ್ವಜನಿಕ ಆಸ್ಪತ್ರೆ), ಆಡಿಯೋಮೆಟ್ರಿಕ್ ಅಸಿಸ್ಟೆಂಟ್, ಇನ್ಸ್ಟ್ರಕ್ಟರ್ ಯಂಗ್ ಹಿಯರಿಂಗ್ ಇಂಪೈರಿಡ್ ಚಿಲ್ಡ್ರನ್ (ಜಿಲ್ಲಾ ಆಸ್ಪತ್ರೆ) ಹಾಗೂ ನಗರ ಆರೋಗ್ಯ ಕೇಂದ್ರದಲ್ಲಿ ಎಲ್.ಹೆಚ್.ವಿ ತಲಾ 1 ಹುದ್ದೆ ಮತ್ತು ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಖಾಲಿ ಇರುವ ಶುಶ್ರೂಷಕರ-3 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ […]