ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯದ ಮಹತ್ವದ ಕುರಿತು ಅರಿವು ಕಾರ್ಯಕ್ರಮ

ಉಡುಪಿ: ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಆ. 18 ರಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಂಥಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ವಸಂತಿ ಶೆಟ್ಟಿ ಉದ್ಘಾಟಿಸಿದರು. ಬಳಿಕ ಗ್ರಂಥಾಲಯ ಮತ್ತು ಗ್ರಂಥಗಳ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದ ಅವರು, ಜ್ಞಾನದೇಗುಲಗಳಾದ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡರೆ ಜೀವನದ ಅಂಧಕಾರವು ದೂರಾವಾಗಿ ಜ್ಞಾನವೆಂಬ ಬೆಳಕು ನಮ್ಮ ಜೀವನದಲ್ಲಿ ನೆಲೆಗೊಳ್ಳುತ್ತದೆ. ಆದುದರಿಂದ […]

ಪುತ್ತಿಗೆ ಶ್ರೀಗಳಿಂದ ಅದಮ್ಯ ಚೇತನ ಸಂಸ್ಥೆಗೆ ಭೇಟಿ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ನಡೆಸುತ್ತಿರುವ ಬೃಹತ್ ಸಮಾಜ ಸೇವಾ ಸಂಸ್ಥೆಯಾದ ಅದಮ್ಯ ಚೇತನ ಕಾರ್ಯಾಲಯಕ್ಕೆ ಭೇಟಿ ನೀಡಿದ ಪೂಜ್ಯ ಪುತ್ತಿಗೆ ಶ್ರೀಪಾದರು ಸಂಸ್ಥೆ ನಡೆಸುತ್ತಿರುವ ಬೃಹತ್ ಅನ್ನದಾನ, ದಾಸೋಹ ಕಾರ್ಯ ವೈಖರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಸಿಬ್ಬಂದಿಯವರ ಜೊತೆಗೆ ಪೂಜ್ಯ ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು. ಪೂಜ್ಯ ಶ್ರೀಪಾದರು ಭಗವದ್ಗೀತೆಯ ಸಂದೇಶವನ್ನು ನೀಡಿ, ಜನಸೇವೆಯೇ ಗೀತೆಯ ಪ್ರಮುಖ […]