ಶ್ರೀಕೃಷ್ಣಮಠದಲ್ಲಿ ಲಕ್ಷ್ಮೀ ಶೋಭಾನೆ ಪಠಣೆ
ಉಡುಪಿ: ಶ್ರಾವಣ ಶುಕ್ರವಾರದ ಪ್ರಯುಕ್ತ, ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಿಪ್ರ ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ಪಠಣೆ ನಡೆಯಿತು.
ಸಾಲದಾತ ಬ್ಯಾಂಕುಗಳಿಗೆ ಆರ್‌ಬಿಐ ಹೊಸ ಮಾರ್ಗಸೂಚಿ: ಸಾಲಗಾರರ ಮೇಲೆ ‘ದಂಡದ ಬಡ್ಡಿ’ ವಿಧಿಸುವಂತಿಲ್ಲ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ವಾಣಿಜ್ಯ ಮತ್ತು ಇತರ ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC ಗಳು), ನಿಯಂತ್ರಿತ ಘಟಕಗಳು (REs) ಮತ್ತು ಇತರ ಸಾಲದಾತರು ದಂಡದ ಬಡ್ಡಿಯನ್ನು ಬಹಿರಂಗಪಡಿಸುವಲ್ಲಿ ಸಮಂಜಸತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಕ್ರೆಡಿಟ್ ಸೌಲಭ್ಯಗಳನ್ನು ಮಂಜೂರು ಮಾಡಿದ ನಿಯಮಗಳೊಂದಿಗೆ ಸಾಲಗಾರನು ಡೀಫಾಲ್ಟ್/ಅನುಸರಣೆ ಮಾಡದಿದ್ದಲ್ಲಿ, ಅನ್ವಯವಾಗುವ ಬಡ್ಡಿದರಗಳ ಮೇಲೆ ಮತ್ತು ಹೆಚ್ಚಿನ ಬಡ್ಡಿ ದರಗಳನ್ನು ಅನೇಕ ನಿಯಂತ್ರಿತ ಘಟಕಗಳು ಬಳಸುತ್ತಿವೆ ಎಂಬ ಸಂಶೋಧನೆಗಳನ್ನು ಇದು ಅನುಸರಿಸುತ್ತದೆ. ದಂಡದ […]
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಗನ್ ಮ್ಯಾನ್ ಒದಗಿಸಲು ಗೃಹ ಸಚಿವರಿಗೆ ಮನವಿ
ಬೆಳ್ತಂಗಡಿ: ಹನ್ನೊಂದು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಪಟ್ತು ಕೊಲೆಯಾದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಗೌಡ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ ನೀಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ವಸಂತ ಬಂಗೇರ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾದ ಬಂಗೇರ, ರಾಜ್ಯದಲ್ಲಿ ಸೌಜನ್ಯ ಪರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ […]
ದೆಹಲಿಯಿಂದ ಪುಣೆಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ
ನವದೆಹಲಿ: ದೆಹಲಿಯಿಂದ ಪುಣೆಗೆ ಹೊರಟಿದ್ದ ವಿಸ್ತಾರಾ UK971 ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆಳಗ್ಗೆ 7:30ರ ಸುಮಾರಿಗೆ ಬೋರ್ಡಿಂಗ್ ಪ್ರಗತಿಯಲ್ಲಿದ್ದಾಗ ಜಿಎಂಆರ್ ಕಾಲ್ ಸೆಂಟರ್ ಗೆ ಕರೆ ಮಾಡಿರುವ ಅಪರಿಚಿತರು ಬಾಂಬ್ ಬೆದರಿಕೆ ಒಡ್ಡಿದ್ದಾರೆ. ಕರೆ ಬೆನ್ನಲ್ಲೆ ಬೋರ್ಡಿಂಗ್ ನಿಲ್ಲಿಸಿ, ಪ್ರತ್ಯೇಕವಾದ ಸ್ಥಳದಲ್ಲಿ ವಿಮಾನದ ತಪಾಸಣೆ ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಭದ್ರತಾ ತಂಡಗಳು ವಿಮಾನ ಪರಿಶೀಲನೆ ಮಾಡಿದ್ದು ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಈ ನಡುವೆ ಎಲ್ಲಾ […]
ನಾಗರಪಂಚಮಿಯಂದು ಉಭಯ ಜಿಲ್ಲೆಗಳಲ್ಲಿ ರಜೆ ಘೋಷಿಸಲು ಸುನಿಲ್ ಕುಮಾರ್ ಮನವಿ
ಉಡುಪಿ: ಆ 21 ರಂದು ಉಭಯ ಜಿಲ್ಲೆಗಳಲ್ಲಿ ನಾಗರ ಪಂಚಮಿಯ ವಿಶೇಷ ಆಚರಣೆಗಳು ಇರುವುದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕುಟುಂಬಗಳು ನಾಗದೇವರ ಪೂಜಾ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವ ದೃಷ್ಠಿಯಿಂದ ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಬೇಕೆಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ