ಡಿಜಿಟಲ್ ವಂಚನೆ ಮೇಲೆ ಗಧಾ ಪ್ರಹಾರ: ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆ ಕಡ್ಡಾಯ; ಬಲ್ಕ್ ಸಿಮ್ ಕನೆಕ್ಷನ್ ಸ್ಥಗಿತ

ನವದೆಹಲಿ: ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಸರ್ಕಾರವು ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬಲ್ಕ್ ಸಿಮ್ ‘ಕನೆಕ್ಷನ್’ಗಳನ್ನು ನೀಡುವ ನಿಬಂಧನೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ವೈಷ್ಣವ್, ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಹೇಳಿದ್ದಾರೆ. ಸಿಮ್ ಕಾರ್ಡ್ ಡೀಲರ್ ಪರಿಶೀಲನೆಯನ್ನು ‘ಪರವಾನಗಿದಾರ’ ಅಥವಾ ಸಂಬಂಧಪಟ್ಟ ಸಿಮ್ ಕಂಪನಿ ಮಾಡಲಿದೆ ಎಂದು ಸ್ಪಷ್ಟಪಡಿಸಿರುವ ಅವರು ಈ ಕಾನೂನಿನ […]
ಮುಕ್ತ ವಿವಿ ಶೈಕ್ಷಣಿಕ ಪ್ರಚಾರ ವಾಹನಕ್ಕೆ ಚಾಲನೆ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಿ.ಯು.ಸಿ ನಂತರ ಉನ್ನತ ವಿಧ್ಯಾಬ್ಯಾಸ ಮಾಡಲು ಅನೇಕ ಕೋರ್ಸುಗಳು ಲಭ್ಯವಿದ್ದು, ಉನ್ನತ ವಿಧ್ಯಾಬ್ಯಾಸ ಬಯಸುವ ನೌಕರರು, ಖಾಸಗಿ ಕೆಲಸ ನಿರ್ವಹಿಸುವ ಶ್ರಮಿಕ ವರ್ಗಗಳು, ಮನೆಯಲ್ಲಿ ಇರುವ ಗೃಹಿಣಿಯರು, ಕಾಲೇಜಿಗೆ ಹೋಗಲು ಆಗದವರು ಹೀಗೆ ಪ್ರತಿಯೊಬ್ಬರು ದೂರ ಶಿಕ್ಷಣದ ಮೂಲಕ ಉನ್ನತ ಪದವಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು. ಅವರು ಬುಧವಾರ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ ಜುಲೈ ಶೈಕ್ಷಣಿಕ ಸಾಲಿನ ಪ್ರವೇಶಾತಿಗಳ ಕುರಿತು ಮತ್ತು […]
ಆಗಸ್ಟ್ 21 ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಸಮೀಕ್ಷೆ

ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಆಗಸ್ಟ್ 21 ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆ ಸಮೀಕ್ಷೆ ಕಾರ್ಯವನ್ನು ನಡೆಸಲಿದ್ದು, ಈ ಸಂದರ್ಭದಲ್ಲಿ 18 ವರ್ಷ ತುಂಬಿದ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವವರ ಮಾಹಿತಿ, 17 ವರ್ಷ ತುಂಬಿದ ಯುವಕ ಯುವತಿಯರ ಮಾಹಿತಿ, ಮೃತ, ಶಾಶ್ವತವಾಗಿ ವಲಸೆಹೋದ, ಮತದಾರರ ಪಟ್ಟಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಹೆಸರು ಇರುವ ಮತದಾರರ ವಿವರವನ್ನು […]
ರಾಜಾಂಗಣದಲ್ಲಿ “ನಯಾ ಭಾರತ್ ಸಶಕ್ತ್ ಭಾರತ್” ಥೀಮ್ ಸೆಲ್ಫಿ ಬೂತ್

ಉಡುಪಿ: ಕೇಂದ್ರ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸಂವಹನ ಇಲಾಖೆ ವತಿಯಿಂದ ಉಡುಪಿ ಕೃಷ್ಣಮಠದ ರಾಜಾಂಗಣದ ಆವರಣದಲ್ಲಿ ಸ್ವಾತಂತ್ರ‍್ಯೋತ್ಸವದ ಅಂಗವಾಗಿ “ನಯಾ ಭಾರತ್ ಸಶಕ್ತ್ ಭಾರತ್” ಥೀಮ್‌ನಲ್ಲಿ ಸೆಲ್ಫಿ ಬೂತ್ ಅಳವಡಿಸಿದ್ದು, ಕೃಷ್ಣಾಪುರ ಪರ್ಯಾಯ ಮಠದ ದಿವಾನ ವರದರಾಜ ಭಟ್ ಸೆಲ್ಫಿ ತೆಗೆದುಕೊಂಡರು. ಮುಂದಿನ ಮೂರು ದಿನ ಈ ಸೆಲ್ಫಿ ಬೂತನ್ನು ರಾಜಾಂಗಣದಲ್ಲಿ ಇರಿಸಲಾಗಿದ್ದು, ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ.
ನಿಮ್ಮ ಕಾರನ್ನು ಕನಸಿನ ಕಾರನ್ನಾಗಿ ಮಾರ್ಪಡಿಸಿಕೊಳ್ಳಿ A to Z Car Accessories ನಲ್ಲಿ

ಸಾಮಾನ್ಯ ಕಾರನ್ನು ನಿಮ್ಮ ಕನಸಿನ ಕಾರನ್ನಾಗಿ ಮಾರ್ಪಡಿಸಿಕೊಳ್ಳಲು ಅತ್ಯುತ್ತಮ ಅವಕಾಶ A to Z Car Accessories ನಲ್ಲಿದೆ. ನಿಮ್ಮ ಕಾರುಗಳ ಆಡಿಯೋ ಸಿಸ್ಟಮ್ ಮತ್ತು ಸ್ಪೀಕರ್ ಅಪ್ ಗ್ರೇಡ್, ಸಬ್ ವೂಫರ್ ಮತ್ತು ಡೋರ್ ಡ್ಯಾಂಪಿಂಗ್, ಸೆರಾಮಿಕ್ ಮತ್ತು ಟೆಫ್ಲಾನ್ ಕೋಟಿಂಗ್, ಅಲಾಯ್ ವ್ಹೀಲ್ ಮತ್ತು ಬ್ರ್ಯಾಂಡೆಡ್ ಟಯರ್ಸ್, ವ್ಹೀಲ್ ಅಲೈನ್ ಮೆಂಟ್ ಬ್ಯಾಲೆಂಸಿಂಗ್, ಇಂಟೀರಿಯರ್ ಕ್ಲೀನಿಂಗ್ ಮತ್ತು ಗ್ಲಾಸ್ ಟ್ರೀಟ್ ಮೆಂಟ್ ಮತ್ತು ಎಲ್ಲಾ ರೀತಿಯ ಕಾರ್ ಮಾಡಿಫಿಕೇಷನ್ ಗಾಗಿ ಒಂದೇ ಸ್ಥಳ A […]