ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಆಹೋರಾತಿ ಭಜನಾ ಮಹೋತ್ಸವ ಸಂಪನ್ನ

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪುರುಷೋತ್ತಮ ಅಧಿಕ (ಶ್ರಾವಣ) ಮಾಸ ಪ್ರಯುಕ್ತ ಒಂದು ತಿಂಗಳ ಕಾಲ ಆಯೋಜಿಸಲಾಗಿದ್ದ ಅಹೋರಾತ್ರಿ ಭಜನಾ ಮಹೋತ್ಸವ ಗುರುವಾರದಂದು ಮಂಗಳದೊಂದಿಗೆ ಸಂಪನ್ನವಾಯಿತು. ದೇವಳದ ಪ್ರಧಾನ ಅರ್ಚಕ ಮಂಗಳಾಚರಣೆಯ ಮಹಾ ಪೂಜೆ ನೆರವೇರಿಸಿದರು. ಆಡಳಿತ ಮೊಕ್ತೇಸರ ಪಿ ವಿ ಶೆಣೈ , ಉಮೇಶ್ ಪೈ , ಮಟ್ಟಾರ್ ವಸಂತ ಕಿಣಿ , ವಿಶ್ವನಾಥ ಭಟ್ , ಪ್ರಕಾಶ್ ಶೆಣೈ, ಅಶೋಕ ಬಾಳಿಗಾ, ಗಣೇಶ ಕಿಣಿ, ರೋಹಿತಾಕ್ಷ ಪಡಿಯಾರ್, ಪುಂಡಲೀಕ ಕಾಮತ್ , ಅರ್ಚಕರಾದ […]

ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಪದ ಪ್ರಧಾನ ಕಾರ್ಯಕ್ರಮ

ಉಡುಪಿ: ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಯನ್ ಅನುಪಮ ಜಯಕುಮಾರ್ ಮತ್ತು ಅವರ ತಂಡದ ಕಾರ್ಯಕಾರಿ ಸಮಿತಿಯ ಪದ ಪ್ರಧಾನ ಕಾರ್ಯಕ್ರಮವು ಉಡುಪಿಯ ಪುರಭವನದಲ್ಲಿ ನಡೆಯಿತು. ಲಯನ್ಸ್ ಜಿಲ್ಲೆಯ ಮಾಜಿ ಗವರ್ನರ್ ಲ. ಜಯಕುಮಾರ್ ಶೆಟ್ಟಿ ಇಂದ್ರಾಳಿ ಪದ ಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಹಾರೈಸಿದರು. ಮಾಜಿ ಗವರ್ನರ್ ಲ. ವಿಜಿ ಶೆಟ್ಟಿ, ಪ್ರಾಂತೀಯ ಮೂರರ ಅಧ್ಯಕ್ಷ ಲಯನ್ ರಿಷಿಕೇಶ್ ಹೆಗ್ಡೆ, ವಲಯ ಒಂದರ ಅಧ್ಯಕ್ಷ ಲ. ವರುಣ್ ಶೆಟ್ಟಿ, ಕಾರ್ಯದರ್ಶಿ […]

ಕೊಡವೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆಗಳು

ಕೊಡವೂರು: ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ ಭಾನುವಾರ ಶ್ರೀ ಶಂಕರ ನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಶಾಲಾ ಮಕ್ಕಳಲ್ಲಿ ಹಾಸುಹೊಕ್ಕಿರುವ ಪ್ರತಿಭೆಯ ಅನಾವರಣಕ್ಕೆ ಸ್ಪರ್ಧೆಗಳು ಸಹಕಾರಿ. ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ […]

ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಸಂಪನ್ನ

ಕುಂದಾಪುರ: ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರದಂದು ಕರ್ಕಾಟಕ ಅಮಾವಾಸ್ಯೆ ಜಾತ್ರೆ ನಡೆಯಿತು. ಅಂದು ಬೆಳಗ್ಗಿನ ಜಾವದಿಂದಲೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಜಾತ್ರೆಯಲ್ಲಿ ಪಾಲ್ಗೊಂಡರು. ಭಕ್ತರು ಸಮುದ್ರ ಸ್ನಾನ ನೆರವೇರಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಜಾತ್ರೆಯ ಪ್ರಯುಕ್ತ ದೇವಾಲಯವನ್ನು ಹೂವುಗಳಿಂದ ಸುಂದರವಾಗಿ ಸಿಂಗರಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ಮಾತು ಸ್ವಯಂಸೇವಕರು ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಿದರು. ಸಾವಿರಾರು ಭಕ್ತರು ದೇವರ ದರ್ಶನ […]

ಮಲ್ಪೆ: ಮೀನುಗಾರರ ಬಲೆಗೆ ಬಿತ್ತು ಭರ್ಜರಿ ಬೊಂಡಾಸ್ ಮೀನುಗಳು

ಮಲ್ಪೆ: ಕರಾವಳಿಯಲ್ಲಿ ಮೀನುಗಾರಿಕಾ ಋತು ವಿದ್ಯುಕ್ತವಾಗಿ ಆರಂಭವಾಗಿದ್ದು, ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬೊಂಡಾಸ್‌ ಮೀನುಗಳು ಬಿದ್ದಿವೆ. ಗುರುವಾರ ಮಲ್ಪೆಯ ಬಂದರಿನ ತುಂಬೆಲ್ಲ ಬೊಂಡಾಸ್‌ ಮೀನು ರಾಶಿ ಹಾಕಿರುವ ಬಗ್ಗೆ ವರದಿಯಾಗಿದೆ. ಆಳಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟ್ ಗಳ ಬಲೆಗೆ ಬೊಂಡಾಸ್ ಮೀನು ಬಿದ್ದಿದೆ. ಪ್ರತಿ ಬೋಟ್‌ಗೂ ತಲಾ 5 ರಿಂದ 6 ಟನ್‌ನಷ್ಟು ಬೊಂಡಾಸ್‌ ಲಭ್ಯವಾಗಿದೆ ಎಂದು ಹೇಳಲಾಗಿದೆ. ಆದರೆ ಮಾರುಕಟ್ಟೆ ಬೇಡಿಕೆಗಿಂತ ಹಲವು ಪಟ್ಟು ಹೆಚ್ಚು ಬೊಂಡಾಸ್‌ ಪೂರೈಕೆಯಾಗಿದ್ದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ ಎನ್ನಲಾಗಿದೆ. ದೊಡ್ಡ […]