ಅಥ್ಲೀಟ್ ದ್ಯುತಿ ಚಂದ್ ಉದ್ದೀಪನ ಮದ್ದು ಸೇವನೆ ಹಿನ್ನೆಲೆ : 4 ವರ್ಷ ನಿಷೇಧ

ನವದೆಹಲಿ: ಏಷ್ಯನ್ ಗೆಮ್ಸ್ನಲ್ಲಿ ಎರಡು ಬೆಳ್ಳಿ ಪದಕ ಸಂಪಾದಿಸಿದ ಭಾರತದ ಮಹಿಳಾ ಅಥ್ಲೀಟ್ ದ್ಯುತಿ ಚಂದ್ ಅವರಿಗೆ ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು (WADA) ನಾಲ್ಕು ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಡಿಸೆಂಬರ್ 5ರಂದು ಸಂಗ್ರಹಿಸಿದ್ದ ಮಾದರಿಯಲ್ಲಿ ಆಂಡ್ರೊಜೆನ್ ರಿಸೆಪ್ಟರ್ ಮಾಡ್ಯುಲೇಟರ್‌ಗಳಿಗೆ (ಎಸ್‌ಎಆರ್‌ಎಂ) ಕಂಡು ಬಂದಿದ್ದರಿಂದ ನಿಷೇಧ ಹೇರಲಾಗಿದೆ. ಹೀಗಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ದ್ಯುತಿ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ನಿಷೇಧದ ಅವಧಿ ಜನವರಿ 3, […]
ಯಕ್ಷ ಶಿಕ್ಷಣ ಟ್ರಸ್ಟ್ ಸಮಾಲೋಚನಾ ಸಭೆ

ಉಡುಪಿ: ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ನಡೆದ ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಉಡುಪಿ ಇದರ ಯಕ್ಷಗಾನ ತರಬೇತಿ ನೀಡುವ ಗುರುಗಳ ಸಮಾಲೋಚನಾ ಸಭೆಯಲ್ಲಿ ನಿಕಟ ಪೂರ್ವ ಶಾಸಕ ರಘುಪತಿ ಭಟ್ ಭಾಗವಹಿಸಿದರು. ಉಡುಪಿ ಸೇರಿದಂತೆ ಈ ವರ್ಷದಿಂದ ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳ ಶಾಲೆಗಳಲ್ಲಿ ತರಬೇತಿ ಆರಂಭಿಸಲಾಗಿದ್ದು, ಒಟ್ಟು 69 ಪ್ರೌಢಶಾಲೆಗಳಲ್ಲಿ 31 ಮಂದಿ ಯಕ್ಷಗಾನ ಗುರುಗಳು ಯಕ್ಷಗಾನ ತರಬೇತಿ ನೀಡುವರು. ಮುಂಬರುವ ಸಾಲಿನಲ್ಲಿ ಬೈಂದೂರು ಹಾಗೂ ಕಾರ್ಕಳ ಕ್ಷೇತ್ರಗಳಲ್ಲೂ ಯಕ್ಷಗಾನ ತರಬೇತಿ […]
ಹರೀಶ್ ಸಾಲಿಯಾನ್ ಬಿಜೆಪಿಯಿಂದ ಉಚ್ಛಾಟನೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ನ ಬಿಜೆಪಿ ಬೆಂಬಲಿತ ಸದಸ್ಯ ಹರೀಶ್ ಸಾಲಿಯಾನ್ ರವರನ್ನು ಶಿಸ್ತು ಮೀರಿದ ದುರ್ವರ್ತನೆಯ ನಡತೆಗಾಗಿ 6 ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ನೇರ ಪ್ರಸಾರಕ್ಕಾಗಿ ಮಾಧ್ಯಮಗಳಿಗೆ ಆಹ್ವಾನವಿತ್ತ ISRO

ಬೆಂಗಳೂರು: ಚಂದ್ರಯಾನ -3 ಪ್ರಪಂಚದಾದ್ಯಂತ ವಿಶೇಷ ಕುತೂಹಲವನ್ನು ಹುಟ್ಟುಹಾಕಿದ್ದು, 140 ಕೋಟಿ ಭಾರತೀಯರು ಆ.23 ರಂದು ಚಂದ್ರನ ಅಂಗಳವನ್ನು ಮೊದಲ ಬಾರಿಗೆ ನೋಡುವ ತವಕದಲ್ಲಿದ್ದಾರೆ. ದೇಶದ ಮಾಧ್ಯಮಗಳೂ ಚಂದ್ರಯಾನ-3 ರ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿವೆ. ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೆ ಚಂದ್ರಯಾನ-3 ಲ್ಯಾಂಡಿಗ್ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಆಹ್ವಾನ ನೀಡಿದೆ. “ದೇಶಾದ್ಯಂತ ಮಾಧ್ಯಮಗಳು ತೋರಿಸಿದ ಆಸಕ್ತಿಯ ಆಧಾರದ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಉಪಗ್ರಹ ನಿಯಂತ್ರಣ ಕೇಂದ್ರ (SCC) ಕಟ್ಟಡ, ISRO […]
ಬೆಂಗಳೂರು: ದೇಶದ ಪ್ರಪ್ರಥಮ 3ಡಿ-ಮುದ್ರಿತ ಅಂಚೆ ಕಚೇರಿ ಉದ್ಘಾಟನೆ; 43 ದಿನಗಳಲ್ಲಿ ಕಾಮಗಾರಿ ಪೂರ್ಣ!!

ಬೆಂಗಳೂರು: ಕೇಂದ್ರ ರೈಲ್ವೇ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ದೇಶಕ್ಕೆ ಸಮರ್ಪಿಸಿದರು. ಜನರಲ್ ಪೋಸ್ಟ್ ಆಫೀಸ್ ಕಟ್ಟಡದಿಂದ ವರ್ಚುವಲ್ ಮೂಲಕ ಅಂಚೆ ಕಚೇರಿಯನ್ನು ಉದ್ಘಾಟಿಸಿದರು. The spirit of Aatmanirbhar Bharat!🇮🇳India’s first 3D printed Post Office. 📍Cambridge Layout, Bengaluru pic.twitter.com/57FQFQZZ1b — Ashwini Vaishnaw (@AshwiniVaishnaw) August 18, 2023 ಕಚೇರಿಯು ಅದರ ಗಡುವಿಗಿಂತಲೂ […]