ಬೆಂಗಳೂರು : ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

ಬೆಂಗಳೂರು: ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಮೂಲಕ ಇಂದು ಉದ್ಘಾಟಿಸಿದ್ದಾರೆ.3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿ ಇಂದು ಉಧ್ಘಾಟನೆ ಮಾಡಿದರು.ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು, ಇದರಲ್ಲಿ ರೊಬೊಟಿಕ್ ಪ್ರಿಂಟರ್ ಅನುಮೋದನೆ ನೀಡಿರುವ ವಿನ್ಯಾಸದ ಪ್ರಕಾರ ವಿಶೇಷ ದರ್ಜೆಯ ಕಾಂಕ್ರೀಟ್ ಅನ್ನು ಲೇಯರ್-ಬೈ-ಲೇಯರ್ ಜೋಡಿಸುತ್ತಾ ಹೋಗುತ್ತದೆ. ಪದರಗಳ ನಡುವಿನ ಬಂಧವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ […]
ಏಕದಿನ ವಿಶ್ವಕಪ್‌ಗೆ ಆಸೀಸ್ ಭರ್ಜರಿ ತಯಾರಿ: ತಂಡದಿಂದ ಸ್ಮಿತ್, ಸ್ಟಾರ್ಕ್ ಔಟ್

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20, ಏಕದಿನ ಸರಣಿಯಿಂದ ಅನುಭವಿ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಕೈಬಿಡಲಾಗಿದೆ.ಇಬ್ಬರು ಆಟಗಾರರು ವಿಶ್ವಕಪ್ಗೂ ಮುನ್ನ ತಂಡ ಸೇರುತ್ತಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿರುವ ಆಸ್ಟ್ರೇಲಿಯಾ ತಂಡದಿಂದ ಸ್ಮಿತ್ ಮತ್ತು ಸ್ಟಾರ್ಕ್ ಅವರನ್ನು ಕೈ ಬಿಡಲಾಗಿದೆ. “ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ […]
ಉಡುಪಿಯಲ್ಲಿ ಛಾಯಾ ಸಮ್ಮಾನ ಅಭಿನಂದನಾ ಸಮಾರಂಭ

ತಮ್ಮದೇ ವೃತ್ತಿ ಬಾಂಧವರನ್ನು ವ್ಯಾಪಾರ ವಹಿವಾಟನ್ನು ನಡೆಸುವ ವೃತ್ತಿ ಪರ ಸಂಸ್ಥೆಗಳೊಂದಿಗೆ ಸೇರಿ ಗುರುತಿಸಿ ಗೌರವಿಸುವುದು. ಬೇರೆಯವರ ಮುಖದಲ್ಲಿ ನಗುವಿರಲೆಂದು ಆಶಿಸಿ ಸದಾ ಸ್ಮೈಲ್ ಪ್ಲೀಸ್ ಎಂದೆನ್ನುವವರು ಛಾಯಾಗ್ರಾಹಕರು ಮಾತ್ರ. ಹಾಗಾಗಿ ಅವರು ಎಲ್ಲರಿಗೂ ಆತ್ಮೀಯರು.ಅಭಿನಂದನೀಯ ಎಂದು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ತನಿಷ್ಕ್ ಗೋಲ್ಡ್ ಮತ್ತು ಡೈಮಂಡ್ ಜ್ಯುವೆಲ್ಲರಿ ಉಡುಪಿಯಲ್ಲಿ ಆಯೋಜಿಸಿದ್ದ ಛಾಯಾ ಸಮ್ಮಾನ್ ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉದ್ಘಾಟಿಸಿ ಮಾತನಾಡಿದರು. ಹಿರಿಯ ಹಾಗೂ ಛಾಯಾ […]
ಗಜಪಯಣಕ್ಕೂ ಮುನ್ನವೇ ಮೈಸೂರು ದಸರಾ ಆಚರಣೆಗೆ 16 ಉಪಸಮಿತಿ ರಚನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ, ಅದ್ಧೂರಿ ಆಚರಣೆಗೆ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ 16 ಉಪ ಸಮಿತಿಗಳಿಗೆ ಜಿಲ್ಲೆಯ ಅಧಿಕಾರಿಗಳನ್ನು ನೇಮಿಸಲಾಗಿದೆ.ದಸರಾವನ್ನು ಸಾಂಪ್ರದಾಯಿಕ ಹಾಗೂ ಅದ್ಧೂರಿಯಾಗಿ ನಾಡಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮವನ್ನಾಗಿ ಮಾಡಲು ಸ್ವತಃ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ನಂತರ ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ನೇತೃತ್ವದಲ್ಲಿ ಸಭೆ ನಡೆದಿದ್ದು ಉಪ ಸಮಿತಿಗಳನ್ನು ರಚಿಸಿ, ಅದಕ್ಕೆ ಉಪ ವಿಶೇಷಾಧಿಕಾರಿಗಳು, […]
ಭಾರತ ತಂಡ ಪ್ರತಿನಿಧಿಸಿ ಕಿಂಗ್ ಕೊಹ್ಲಿ ಇಂದಿಗೆ 15 ವರ್ಷ

ಹೈದರಾಬಾದ್:19 ವರ್ಷದೊಳಗಿನವರ ವಿಶ್ವಕಪ್ ತಂಡದ ನಾಯಕರಾಗಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ನಿಂದ 2008ರ ಇದೇ ದಿನ ಶ್ರೀಲಂಕಾ ಪ್ರವಾಸದ ಬಿ ತಂಡಕ್ಕೆ ಆಯ್ಕೆ ಆಗಿ ಮೈದಾನದಲ್ಲಿ ಬ್ಯಾಟ್ ಹಿಡಿದು ನಿಂತಿದ್ದರು. ವಿರಾಟ್ ತಮ್ಮ ಸಾಮರ್ಥ್ಯವನ್ನು 19 ವರ್ಷದೊಳಗಿನವರ ವಿಶ್ವಕಪ್ನಲ್ಲೇ ತೋರಿದ್ದರು. ಆರು ಪಂದಗಳಲ್ಲಿ 47ರ ಸರಾಸರಿಯಲ್ಲಿ 235 ರನ್ ಗಳಿಸಿದ್ದರು. ಅಂದು ಅವರ ಆಟ ಕಂಡ ಹಿರಿಯರು, ಭಾರತಕ್ಕೆ ಒಬ್ಬ ಉತ್ತಮ ಆಟಗಾರ ಸಿಕ್ಕಿದ್ದಾನೆ ಎಂದಿದ್ದರು. ಅದನ್ನು ವಿರಾಟ್ ಸಾಬೀತು ಮಾಡಿದ್ದಾರೆ […]