ತ್ರಿಶಾ ಕ್ಲಾಸಸ್ : ಸಿ.ಎ ಫೌಂಡೇಷನ್ ಸಾಧಕರಿಗೆ ಸನ್ಮಾನ, ಇಂಟರ್ ಮೀಡಿಯೆಟ್ ಪುನಶ್ಚೇತನ ಕಾರ್ಯಕ್ರಮ

ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಟ್ಸ್ ಆಫ್ ಇಂಡಿಯಾ (ಐ.ಸಿ.ಎ.ಐ) ನಡೆಸಿರುವ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಆಗಸ್ಟ್ 15 ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಹಾಗೂ ಸಿ.ಎ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳಿಗೆ ಪುನಶ್ಚೇತನ (ಓರಿಯೆಂಟೇಷನ್) ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಸಿ.ಎ ಕೋರ್ಸ್ ನಲ್ಲಿ […]
ಆ. 21 ರ ವರೆಗೆ ಜಿಲ್ಲೆಯಾದ್ಯಂತ ಅನಿಮಿಯತ ವಿದ್ಯುತ್ ವ್ಯತ್ಯಯ

ಉಡುಪಿ: ಆಗಸ್ಟ್ 16 ರಿಂದ 21 ರ ವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ 220/110ಕೆವಿ ಕೇಮಾರ್ ಸ್ವೀಕರಣಾ ಕೇಂದ್ರದಲ್ಲಿ 100 ಎಂ.ವಿ.ಎ ಪರಿವರ್ತಕದಲ್ಲಿ ತೈಲ ಶೋಧನೆ (Oil Filtration) ಕಾಮಗಾರಿಯನ್ನು ಅತೀ ತುರ್ತಾಗಿ ಹಮ್ಮಿಕೊಂಡಿರುವುದರಿಂದ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಾದ್ಯಂತ ಲೋಡ್ ಶೇಡ್ಡಿಂಗ್ ಮಾಡಬೇಕಾಗಬಹುದು. ಆದುದರಿಂದ ಸದರಿ ದಿನಗಳಂದು 220ಕೆವಿ ಕೇಮಾರ್ ಸ್ವೀಕರಣಾ ಸ್ಥಾವರ ಕೇಮಾರ್ ನಿಂದ ಸರಬರಾಜು ಮಾಡಲಾಗುವ 110 ಕೆವಿ ಉಪಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಬಹುದು. 220ಕೆವಿ […]
ಕರ್ಣಾಟಕ ಬ್ಯಾಂಕ್ ನಲ್ಲಿ ಸ್ಕೇಲ್-I ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕರ್ಣಾಟಕ ಬ್ಯಾಂಕ್(Karnataka bank) ಭಾರತದಾದ್ಯಂತ ಇರುವ ತನ್ನ ಶಾಖೆಗಳು/ಕಚೇರಿಗಳಲ್ಲಿ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳ (ಸ್ಕೇಲ್-I) ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಪರೀಕ್ಷೆಯ ಹೆಸರು: ಕರ್ನಾಟಕ ಬ್ಯಾಂಕ್ ಪರೀಕ್ಷೆ 2023 ವರ್ಗ : ಬ್ಯಾಂಕ್ ಉದ್ಯೋಗ ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ:12 ಆಗಸ್ಟ್ 2023 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 26 ಆಗಸ್ಟ್ 2023 ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಪರೀಕ್ಷೆ, ಸಂದರ್ಶನ(Intreview) ಅಧಿಕೃತ ಜಾಲತಾಣ : IBPS ಶೈಕ್ಷಣಿಕ […]
ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಐ 3 ಟೆಸ್ಲಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಉದ್ಘಾಟನೆ

ಮಣಿಪಾಲ: ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯನ್ನು ಸಕ್ರಿಯಗೊಳಿಸಿದ 3 ಟೆಸ್ಲಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಅನ್ನು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು. ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥ ಡಾ. ರಂಜನ್ ಆರ್ ಪೈ ಸುಧಾರಿತ ಅತ್ಯಾಧುನಿಕ 3 ಟೆಸ್ಲಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಅನ್ನು ಉದ್ಘಾಟಿಸಿದರು. ಡಾ ಸುದರ್ಶನ್ ಬಲ್ಲಾಳ್ ಮಾತನಾಡಿ, ಕರ್ನಾಟಕದ ವಿವಿಧ ಭಾಗಗಳಿಂದ ಅನೇಕ ಜನರು ಚಿಕಿತ್ಸೆಗಾಗಿ ಮಣಿಪಾಲಕ್ಕೆ ಭೇಟಿ ನೀಡುತ್ತಾರೆ, ಇದೀಗ ಉದ್ಘಾಟನೆಗೊಂಡ 3 ಟೆಸ್ಲಾ ಎಂ ಆರ್ ಐ […]
ಜೆ.ಎಸ್.ಬಿ ಸಮಾಜದಿಂದ ಲಕ್ಷ ತುಳಸೀ ಅರ್ಚನೆ: ಪುತ್ತಿಗೆ ಶ್ರೀಪಾದರಿಗೆ ಗೌರವ

ಉಡುಪಿ: ಸ್ವಾತಂತ್ರ್ಯ ಉತ್ಸವದ ಶುಭ ಸಂದರ್ಭದಲ್ಲಿ ಜೆ.ಎಸ್.ಬಿ. ಸಮಾಜದವರು ಗೋಕರ್ಣ ಮಠಾಧೀಶರ ಶುಭಾರ್ಶೀವಾದದೊಂದಿಗೆ ತಮ್ಮ ದ್ವಾರಕಾನಾಥ ಭವನದಲ್ಲಿ ಆಯೋಜಿಸಿದ್ದ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಭಕ್ತ ಜನರ ಅಪೇಕ್ಷೆ ಮೇರೆಗೆ ಪೂಜ್ಯ ಪುತ್ತಿಗೆ ಶ್ರೀಪಾದರು ಭಾಗವಹಿಸಿ ಶುಭಾಶೀರ್ವಚನ ನೀಡಿದರು. ಪೂಜ್ಯ ಶ್ರೀಪಾದರನ್ನು ಭಕ್ತಿ ಗೌರವಾದರಗಳೊಂದಿಗೆ ಸ್ವಾಗತಿಸಿ ಪಾದ ಪೂಜೆಯನ್ನು ನೆರವೇರಿಸಿದರು. ಪೂಜ್ಯ ಶ್ರೀಪಾದರು ಉಪಸ್ಥಿತರಿರುವ ಎಲ್ಲ ಸಮಾಜ ಬಾಂಧವರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಯನ್ನು ನೀಡಿ ಮುಂಬರುವ ತಮ್ಮ ಪರ್ಯಾಯಕ್ಕೆ ಎಲ್ಲರನ್ನು ಪ್ರೀತಿಯಂದ ಆಮಂತ್ರಿಸಿದರು.