ಚಂದ್ರ ಇನ್ನು ನಮಗೆ ಹತ್ತಿರ!! ವಿಕ್ರಂ ಲ್ಯಾಂಡರ್ ಬೇರ್ಪಡಿಸುವಿಕೆ ಯಶಸ್ವಿ

ಭಾರತದ ಬಹುನಿರೀಕ್ಷಿತ ಚಂದ್ರಯಾನ – 3 ಮಿಷನ್‌ಗೆ ದೊಡ್ಡ ಯಶಸ್ಸು ಸಿಕ್ಕಿದ್ದು, ವಿಕ್ರಂ ಲ್ಯಾಂಡರ್‌ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಈ ಮೂಲಕ ವಿಕ್ರಂ ಲ್ಯಾಂಡರ್‌ ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಮುಂದಿನ ಬುಧವಾರ ಆಗಸ್ಟ್‌ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ನಿರೀಕ್ಷೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಇಸ್ರೋ “LM ಅನ್ನು ಪ್ರೊಪಲ್ಷನ್ ಮಾಡ್ಯೂಲ್ (PM) ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ನಾಳೆಗೆ ಯೋಜಿಸಲಾದ ಡೀಬೂಸ್ಟಿಂಗ್ ಮೇಲೆ […]

ಪ.ಜಾತಿ ಕ್ರೀಡಾಪಟುಗಳಿಗೆ ಜಿಮ್ ಸ್ಥಾಪನೆಗಾಗಿ ಪ್ರೋತ್ಸಾಹಧನ ಲಭ್ಯ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023-24ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಅಂತರಾಷ್ಟ್ರೀಯ/ರಾಷ್ಟ್ರೀಯ/ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಶೇ.75ರಷ್ಟು ಸಹಾಯಧನ ರೂಪದಲ್ಲೂ ಶೇ.25ರಷ್ಟು ಸ್ವಯಂಭರಿಸುವ ಷರತ್ತಿನೊಡನೆ ರೂ.20.00ಲಕ್ಷಗಳ ಘಟಕ ವೆಚ್ಚದ ಜಿಮ್ ಸ್ಥಾಪನೆಗಾಗಿ ಸಹಾಯಧನ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಆದ್ದರಿಂದ ಪರಿಶಿಷ್ಟ ಜಾತಿ ಅರ್ಹ ಕ್ರೀಡಾಪಟುಗಳು ತಮ್ಮ ಪ್ರಸ್ತಾವನೆಗಳನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವುದು.ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 31 […]

ಮಂಗಳೂರು: ಅಸ್ಮಿತಾಯ್ ಕೊಂಕಣಿ ಚಿತ್ರದ ಟ್ರೈಲರ್ ಬಿಡುಗಡೆ

ಮಂಗಳೂರು: ಮಾಂಡ್ ಸೊಭಾಣ್ ನಿರ್ಮಾಣದ ಕೊಂಕಣಿ ಚಲನಚಿತ್ರ ಅಸ್ಮಿತಾಯ್ ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಆ. 13 ರಂದು ಮಂಗಳೂರಿನ ಭಾರತ್ ಸಿನೆಮಾದಲ್ಲಿ ನಡೆಯಿತು. ಅನಿವಾಸಿ ಉದ್ಯಮಿ ರೊನಾಲ್ಡ್ ಪಿಂಟೊ ಇವರು ಡೋಲು ಬಾರಿಸುವ ಮೂಲಕ ಟ್ರೈಲರ್ ಬಿಡುಗಡೆ ಮಾಡಿದರು. ಚಿತ್ರದ ಪೋಸ್ಟರ್ ಅನ್ನು ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂತೇರೊ ಹಾಗೂ ಕುಕ್ಕುಟ ಕ್ಷೇತ್ರದ ಮುಂಚೂಣಿ ಉದ್ಯಮ ಐಡಿಯಲ್ ಚಿಕನ್ಸ್ ಇದರ ಮಾಲಕ ವಿನ್ಸೆಂಟ್ ಕುಟಿನ್ಹಾ ಪ್ರೀಮಿಯರ್ ಪ್ರದರ್ಶನದ ಟಿಕೇಟ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. […]

ತೆಂಕಪೇಟೆ: ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಪಂಡರಾಪುರ ಶೈಲಿಯ ಅದ್ದೂರಿ ದಿಂಡಿ ಭಜನಾ ಮೆರವಣಿಗೆ

ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಊರ ಪರವೂರ ಭಜನಾ ಮಂಡಳಿಗಳಿಂದ ಒಂದು ತಿಂಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವ ಅಂಗವಾಗಿ ಉಡುಪಿಯಲ್ಲಿ ಪ್ರಥಮ ಬಾರಿಗೆ ಪಂಡರಾಪುರ ಶೈಲಿಯ ದಿಂಡಿ ಅದ್ದೂರಿ ಭಜನಾ ಮೆರವಣಿಗೆ ಮಂಗಳವಾರ ಸಂಜೆ ನಡೆಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕ ವಿನಾಯಕ ಭಟ್ ಮತ್ತು ದಯಾಘನ್ ಭಟ್ ಸಾಮೂಹಿಕ ಪ್ರಾರ್ಥನೆ ಮಾಡಿ ಮಂಗಳಾರತಿ ಬೆಳಗಿಸಿದರು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ ದೀಪ ಬೇಳಗಿಸಿ ದಿಂಡಿ ಭಜನಾ ಯಾತ್ರೆಗೆ […]

ಮಂಗಳೂರು: ಎಂಸಿಸಿ ಬ್ಯಾಂಕಿನಲ್ಲಿ 77ನೇ ಸ್ವಾತಂತ್ರ‍್ಯ ದಿನ ಆಚರಣೆ

ಮಂಗಳೂರು: ಎಂಸಿಸಿ ಬ್ಯಾಂಕ್ ತನ್ನ ಆಡಳಿತ ಕಚೇರಿಯಲ್ಲಿ ಆ.15 ರಂದು 77 ನೇ ಸ್ವಾತಂತ್ರ‍್ಯ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು. ಈ ಸಂದರ್ಭದಲ್ಲಿಅವರ್ ಲೇಡಿ ಆಫ್ ಮಿಲಾಗ್ರಿಸ್‌ ಚರ್ಚ್ನ ಧರ್ಮ ಗುರು ರೆ| ಫಾ| ಬೋನವೆಂಚರ್ ನಜರೆತ್‌ ಅವರು ಪವಿತ್ರ ಬಲಿದಾನವನ್ನು ನೆರವೇರಿಸಿದರು. ಬಳಿಕ ಕ್ಯಾರೆನ್‌ ಕ್ರಾಸ್ತಾ ಮತ್ತು ತಂಡದ ನೇತೃತ್ವದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮವು ಪ್ರಾರಂಭವಾಯಿತು. ಸಭೆಯನ್ನು ಸ್ವಾಗತಿಸಿ ಮಾತನಾಡಿದ ಅಧ್ಯಕ್ಷ ಅನಿಲ್ ಲೋಬೊ, ಕಳೆದ ವರ್ಷ ಬ್ಯಾಂಕ್ ಮೊದಲ ಬಾರಿಗೆ ಸ್ವಾತಂತ್ರ‍್ಯ […]