ಮಂಗಳೂರು: ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು. ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಮಾತನಾಡಿ, ನಾವು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಬ್ಯಾಂಕ್ ಆಫ್ ಬರೋಡಾ, ರಾಷ್ಟದ ಪ್ರತಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿ, ದೇಶದ ಆರ್ಥಿಕ, ಸಾಮಾಜಿಕ ಮತ್ತು ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುವ ಒಂದು ದೃಢವಾದ ಪಾಲುದಾರನಾಗಿದೆ. ರಾಷ್ಟ್ರದ […]
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸುನಾಗ್ ಆಸ್ಪತ್ರೆಯಲ್ಲಿ ಗೃಹ ಆರೈಕೆ ಸೇವೆಗಳ ಶುಭಾರಂಭ

ಉಡುಪಿ: ಸುನಾಗ್ ಆಸ್ಪತ್ರೆಯ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್.ಎಸ್ ಹಾಗೂ ಡಾ. ವೀಣಾ ನರೇಂದ್ರ ಎಚ್.ಎಸ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಕನ್ನಡ ಸಾಹಿತಿ ಶ್ರೀಮತಿ ಇಂದಿರಾ ಹಾಲಂಬಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಸುನಾಗ್ ಆಸ್ಪತ್ರೆಯು ತನ್ನ ಐದು ವರ್ಶಗಳ ಸಾರ್ವಜನಿಕ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಗೃಹ ಆರೈಕೆಯ ಸೇವೆಯನ್ನು ಪ್ರಾರಂಭಿಸಿದ್ದು, ಇದರ […]
ಹಿಮಾಚಲ ಪ್ರದೇಶ: ವರುಣ ಪ್ರಕೋಪಕ್ಕೆ ದೇವಭೂಮಿ ತತ್ತರ; ಕನಿಷ್ಠ 66 ಜನ ಬಲಿ

ಶಿಮ್ಲಾ: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದ 66 ಜನರು ಸಾವನ್ನಪ್ಪಿದ್ದಾರೆ, ಗಾಯಾಳುಗಳನ್ನು ರಕ್ಷಿಸಲು ಮತ್ತು ಹಲವಾರು ಸ್ಥಳಗಳಲ್ಲಿ ಮನೆ ಕುಸಿತದಿಂದಾಗಿ ದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ಮುಂದುವರೆದಿದೆ. ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ, ಆಗಸ್ಟ್ 13 ರಂದು ಭಾರೀ ಮಳೆ ಪ್ರಾರಂಭವಾದಾಗಿನಿಂದ 60 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ಮುಂದಿನ ನಾಲ್ಕು ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ […]
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 5 ನೇ ಪುಣ್ಯತಿಥಿ: ಗಣ್ಯರಿಂದ ಪುಷ್ಪ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಎನ್‌ಡಿಎ ನಾಯಕರು ಮಾಜಿ ಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ 5 ನೇ ಪುಣ್ಯತಿಥಿಯ ಅಂಗವಾಗಿ ಸದೈವ್ ಅಟಲ್ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು. ಉಪರಾಷ್ಟ್ರಪತಿ ಜಗದೀಪ್ ಧಂಖರ್, ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಪ್ರಫುಲ್ ಪಟೇಲ್, ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಸಚಿವ ಮತ್ತು ಅಪ್ನಾ […]
ಹಿರಿಯಡಕ: ಎಂಕುಲ್ ಫ್ರೆಂಡ್ಸ್ ವತಿಯಿಂದ ಇಂಡಿಪೆಂಡೆನ್ಸ್ ಟ್ರೋಫಿ-2023; ಪಾನಡ್ಕ ತಂಡ ಪ್ರಥಮ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ (ರಿ) ಇವರ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಟ್ರೋಫಿ-2023 ಆ.15 ರಂದು ಹಿರಿಯಡ್ಕ ಕೋಟ್ನಕಟ್ಟೆಯಲ್ಲಿ ನಡೆಯಿತು. ಶಿವಕುಮಾರ್ ಕರ್ಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾಟದಲ್ಲಿ ಸುಮಾರು 24 ತಂಡಗಳು ಭಾಗವಹಿಸಿದ್ದವು. ಇಂಡಿಪೆಂಡೆನ್ಸ್ ಟ್ರೋಫಿ 2023 ರಲ್ಲಿ ಪಾನಡ್ಕ ತಂಡವು ವಿಜೇತರಾಗಿದ್ದು, ಕಾಂತರಗೋಳಿ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮುಖ್ಯ ಅತಿಥಿಗಳಾಗಿ ನವೀನ್ ಪೆರ್ಡೂರ್, ಮೋಹನ್ ಕಡಬ, ಸತ್ಯಪ್ರಸಾದ್, ದೇವದಾಸ ಮಾರಾಟೆ, ನಿತ್ಯಾನಂದ ಪೂಜಾರಿ, ಪರಮೇಶ್ವರ್, ಎಂಕುಲ್ ಫ್ರೆಂಡ್ಸ್ ತಂಡದ ಅಧ್ಯಕ್ಷ ರಮೇಶ್, ಕ್ರೀಡಾ ಕಾರ್ಯದರ್ಶಿ ಶಿಶಿರ್, […]