ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಎಬಿವಿಪಿಯಿಂದ ಪೋಸ್ಟ್ ಕಾರ್ಡ್ ಚಳುವಳಿ

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಕು. ಸೌಜನ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಈ ಕೂಡಲೇ ಮರು ತನಿಖೆಗೆ ಆದೇಶಿಸಬೇಕು, ತನ್ಮೂಲಕ ನೈಜ ಅಪರಾಧಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ನಗರದ ವಿವಿಧ ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ ಪೋಸ್ಟ್ ಕಾರ್ಡ್ ಚಳುವಳಿಯನ್ನು ಆರಂಭಿಸಲಾಯಿತು. ಪೋಸ್ಟ್ ಕಾರ್ಡ್ ನ ಮೂಲಕ ರಾಜ್ಯದ ಮುಖ್ಯಸ್ಥರಾದ ರಾಜ್ಯಪಾಲರಿಗೆ, ಪ್ರಕರಣವನ್ನು ಮರು ತನಿಖೆಗೆ ಆದೇಶಿಸುವಂತೆ ಆಗ್ರಹಿಸಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳ ಮೂಲಕ ಮನವಿಯನ್ನು ಮಾಡಲಾಯಿತು. ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ […]

ಉಡುಪಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇದರ ಆಶ್ರಯದಲ್ಲಿ ಆ16 ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರದಲ್ಲಿ ಆಯೋಜಿಸಲಾದ ಉಡುಪಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವಿ ಆಚಾರ್, ಉಪಾಧ್ಯಕ್ಷರು ನಿರುಪಮಾ ಹೆಗ್ಡೆ, […]

ಸಮುದ್ರದಾಳದಲ್ಲಿ ಹಾರಾಡಿತು ತ್ರಿವರ್ಣ ಧ್ವಜ: ಕೆಚ್ಚೆದೆಯ ಭಾರತೀಯ ಕೋಸ್ಟ್ ಗಾರ್ಡ್ ಗಳಿಂದ ಧ್ವಜವಂದನೆ

ಚೆನ್ನೈ: ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸದಸ್ಯರು ನೀರಿನ ಅಡಿಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ವಂದಿಸುವ ಮೂಲಕ ತಮ್ಮ ದೇಶಭಕ್ತಿಯ ಉತ್ಸಾಹವನ್ನು ಪ್ರದರ್ಶಿಸಿದರು. ತಮಿಳುನಾಡಿನ ರಾಮೇಶ್ವರಂ ಬಳಿ ಈ ಘಟನೆ ನಡೆದಿದ್ದು, ಈ ಮಹತ್ವದ ಕೃತ್ಯವನ್ನು ಸೆರೆಹಿಡಿಯುವ ವಿಡಿಯೋ ಆನ್‌ಲೈನ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ. #WATCH | Underwater hoisting of national flag by Indian Coast Guard personnel near Rameshwaram, Tamil Nadu on Independence Day (Video […]

ಪ್ರವಾಸಿ ತಾಣಗಳ ಭೇಟಿ ನಿರ್ಬಂಧ ಆಗಸ್ಟ್ ಅಂತ್ಯದವೆರೆಗೂ ವಿಸ್ತರಣೆ: ಡಾ. ವಿದ್ಯಾಕುಮಾರಿ ಕೆ

ಉಡುಪಿ: ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವೇಳೆ ಸಾವು ಸಂಭವಿಸಿದ ಹಿನ್ನಲೆ ಇದೀಗ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ಜಲಪಾತ ವೀಕ್ಷಣೆ, ಬೀಚ್ ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಭೇಟಿ ನೀಡುವುದನ್ನು ನಿರ್ಬಂಧ ಹೇರಿರುವುದನ್ನು ಆಗಸ್ಟ್‌ ಅಂತ್ಯದವರೆಗೂ ವಿಸ್ತರಿಸಿದೆ. ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ಯುವಕನೋರ್ವ ನೀರುಪಾಲಾದ ದುರ್ಘ‌ಟನೆಯ ಬಳಿಕ ಬೀಚ್‌ ಸಹಿತ ಜಲಪಾತ ಹಾಗೂ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಮಳೆಗಾಲವಾದ್ದರಿಂದ […]

ಅತ್ಯಾಧುನಿಕ ಮಾದರಿಯ ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪರಿಕಲ್ಪನೆ ಬಹಿರಂಗಪಡಿಸಿದ Ola

ಆಗಸ್ಟ್ 15 ರಂದು ಕೈಗೆಟುಕುವ ಹೊಸ Ola S1 X ಮತ್ತು Gen 2 Ola S1 Pro ಅನ್ನು ಬಹಿರಂಗಪಡಿಸುವುದರ ಜೊತೆಗೆ, Ola Electric ಇನ್ನೂ ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪರಿಕಲ್ಪನೆಗಳನ್ನು ಬಹಿರಂಗಪಡಿಸಿದೆ. ಇವುಗಳು ಕ್ರೂಸರ್, ಎಡಿವಿ, ರೋಡ್‌ಸ್ಟರ್ ಮತ್ತು ಕಂಪನಿಯು ಡೈಮಂಡ್‌ಹೆಡ್ ಎಂದು ಕರೆಯುವ ಫ್ಯೂಚರಿಸ್ಟಿಕ್-ಲುಕಿಂಗ್ ಸ್ಪೋರ್ಟ್‌ಬೈಕ್ ಅನ್ನು ಹೊಂದಿದೆ. ಬೈಕ್‌ಗಳ ಕೆಲವೇ ವಿವರಗಳನ್ನು ತೋರಿಸಲಾಗಿದೆ ಮತ್ತು ಬಹುಮಟ್ಟಿಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಎಲ್ಲಾ ನಾಲ್ಕು ಉತ್ಪನ್ನಗಳು ಭವಿಷ್ಯದ ವಿನ್ಯಾಸ ತತ್ವಶಾಸ್ತ್ರವನ್ನು ಅಳವಡಿಸಿಕೊಂಡಿವೆ. […]