ಉಡುಪಿ: “ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ಶೋರೂಂ” ನಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದೆ ಗೃಹೋಪಯೋಗಿ ಪೀಠೋಪಕರಣಗಳು

ಉಡುಪಿ: ಅಗ್ಗದ ಬೆಲೆಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ಪೀಠೋಪಕರಣಗಳನ್ನು ಮನೆಗೆ ತರುವ ಪ್ಲ್ಯಾನ್ ಮಾಡಿದ್ದೀರಾ.?. ಹಾಗಾದ್ರೆ ನಿಮಗೆ ಇಲ್ಲಿ ಸಿಗುತ್ತೇ ಭಾರೀ ರಿಯಾಯಿತಿಯೊಂದಿಗೆ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಆಕರ್ಷಕ ಇಂಟೀರಿಯರ್ಸ್ ಸಾಮಾಗ್ರಿಗಳು. ಯಸ್, ಸ್ವಾತಂತ್ರ್ಯ ದಿನಾಚರಣೆ, ನಾಗರ ಪಂಚಮಿ, ವರಮಹಾಲಕ್ಷ್ಮಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ಮಲ್ಪೆ ಕಲ್ಮಾಡಿ ರಸ್ತೆಯಲ್ಲಿ ಇರುವ ‘ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ಶೋರೂಂ’ ಗೃಹೋಪಯೋಗಿ ಪೀಠೋಪಕರಣಗಳು ರಿಯಾಯಿತಿ ದರದಲ್ಲಿ ಸಿಗಲಿದ್ದು, ವಿವಿಧ ಕಂಪನಿಯ ಫರ್ನಿಚರ್ ಗಳು ಲಭ್ಯವಿದೆ. […]
ಉಡುಪಿ ಜ್ಞಾನಸುಧಾ ಪ.ಪೂ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಗುರಿ, ಯೋಜನೆ, ಸತತ ಪ್ರಯತ್ನ ಇವು ಸಾಧನೆಯ ಮೂಲ ಮಂತ್ರಗಳು. ಸ್ವಪ್ರೇರಣೆಯಿಂದ ಕಾರ್ಯೋನ್ಮುಖರಾದಾಗ ಕಾರ್ಯ ಯಶಸ್ವಿಯಾಗುವುದು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳಗಿಸಿಕೊಂಡು ತಮ್ಮ ಸಂತೋಷಕ್ಕೆ ಕಾರಣವಾಗಬೇಕು. ಆರೋಗ್ಯದ ಕುರಿತು ಕಾಳಜಿ ಅಗತ್ಯ. ನಾವೆಲ್ಲ ದಯಾಜೀವಿಗಳಾಗಿ ಬದುಕನ್ನು ಸಾರ್ಥಕ ಮಾಡಿಕೊಳ್ಳೋಣ ಎಂದು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಅಸೋಸಿಯೇಟ್ ಪ್ರೊಫೆಸರ್ ಡಾ.ಶ್ರುತಿ ಆಚಾರ್ಯ ಅಭಿಪ್ರಾಯಪಟ್ಟರು. ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. […]
ರಥಬೀದಿ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ

ಉಡುಪಿ: ಇಲ್ಲಿನ ರಥಬೀದಿಯ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಶೀರೂರು ಮಠದ ದಿವಾನ ವಿದ್ವಾನ್ ಉದಯಕುಮಾರ ಸರಳತ್ತಾಯ ಹಾಗೂ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಲಿ ಸಂತರಣೋಪನಿಷತ್ ಹವನ

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರಾವಣ ಪುರುಷೋತ್ತಮ ಅಧಿಕ ಮಾಸ ಕಲಿ ಸಂತರಣೋಪನಿಷತ್ ಮಂತ್ರ ಜಪಾರಾಧನೆ ಹಾಗೂ ಕಲಿ ಸಂತರಣೋಪನಿಷತ್ ಹವನವು ಜು.24 ರಿಂದ ಆರಂಭಗೊಂಡು ಆ.15 ತನಕ ನಡೆಯಿತು. ಇಂದು ಬೆಳ್ಳಿಗೆ ನಡೆದ ಸಾಮೂಹಿಕ ಪ್ರಾರ್ಥನೆ, ಕಲಿ ಸಂತರಣೋಪನಿಷತ್ ಹವನದ ಧಾರ್ಮಿಕ ಪೂಜಾವಿಧಾನಗನ್ನು ಚೇಂಪಿ ಶ್ರೀಕಾಂತ್ ಭಟ್ ನೆರವೇರಿಸಿದರು. ಯಾಗ ಶಾಲೆಯಲ್ಲಿ ಹವನ, ಪೂರ್ಣಾಹುತಿ ಹಾಗೂ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಊರ ಪರವೂರ ಭಜನಾ ಮಂಡಳಿಗಳಿಂದ ಒಂದು ತಿಂಗಳ ಕಾಲ […]
ಸಿಕೋ ಕೈ ಕರಾಟೆ ಇಂಟರ್ ನ್ಯಾಷನಲ್ 2023: ಕಂಚಿನ ಪದಕ ಪಡೆದ ವಂಶಿತಾ ದೇವಾಡಿಗ

ಕುಂದಾಪುರ : ಸಿಕೋ ಕೈ ಕರಾಟೆ ಇಂಟರ್ ನ್ಯಾಷನಲ್ ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿ ಇವರ ಸಂಯೋಜನೆಯಲ್ಲಿ ಆಗಸ್ಟ್ 11 ರಿಂದ 13 ರವರೆಗೆ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಂಶಿತಾ ಜಿ. ದೇವಾಡಿಗ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆಯುವುದರ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ವಿದ್ಯಾರ್ಥಿನಿಯನ್ನು ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ […]